Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಐಫಾ ಪ್ರಶಸ್ತಿಗಳಲ್ಲೂ ದರ್ಶನ್‌ = ರಕ್ಷಿತ್‌ ಶೆಟ್ಟಿ : ಕಾಟೇರಕ್ಕೇಕೆ ಸಿಗಲಿಲ್ಲ ಅತ್ಯುತ್ತಮ ನಟ ಪ್ರಶಸ್ತಿ..?

SpeciallU by SpeciallU
September 30, 2024
in Cinema, News
Reading Time: 1 min read
0 0
0
ಐಫಾ ಪ್ರಶಸ್ತಿಗಳಲ್ಲೂ ದರ್ಶನ್‌ = ರಕ್ಷಿತ್‌ ಶೆಟ್ಟಿ : ಕಾಟೇರಕ್ಕೇಕೆ ಸಿಗಲಿಲ್ಲ ಅತ್ಯುತ್ತಮ ನಟ ಪ್ರಶಸ್ತಿ..?

ದರ್ಶನ್‌ ಅವರನ್ನು ರಕ್ಷಿತ್‌ ಶೆಟ್ಟಿ ಮೀರಿಸಿದ್ದಾರಾ.. ಹೌದು ಎನ್ನುತ್ತಿವೆ ಇತ್ತೀಚೆಗೆ ಬಂದ ಪ್ರಶಸ್ತಿಗಳು. ರಕ್ಷಿತ್‌ ಶೆಟ್ಟಿ, ದರ್ಶನ್‌ ಅವರ ಚಿತ್ರವನ್ನು ಹಿಂದಿಕ್ಕಿ ಮುಂದಡಿ ಇಟ್ಟಿದೆ. ದರ್ಶನ್‌ ವೃತ್ತಿ ಜೀವನದಲ್ಲಿ ಕಾಟೇರ ಚಿತ್ರವನ್ನು ಮೈಲಿಗಲ್ಲು ಎಂದೇ ಹೇಳಬಹುದು. ಆದರೆ ಕಾಟೇರಕ್ಕೆ ಫಿಲಂಫೇರ್‌ ಪ್ರಶಸ್ತಿ ಸಿಗಲಿಲ್ಲ. ಆದರೆ ಸೈಮಾ ಪ್ರಶಸ್ತಿ ಸಿಕ್ಕಿತು. ಅದಾದ ನಂತರ ಐಫಾದಲ್ಲೂ ಕಾಟೇರ ಭರ್ಜರಿ ಸದ್ದು ಮಾಡಿದೆ. ಆದರೆ ಕಾಟೇರ ಚಿತ್ರವನ್ನು ರಕ್ಷಿತ್‌ ಶೆಟ್ಟಿಯವರ ಸಪ್ತಸಾಗರದಾಚೆ ಎಲ್ಲೋ ಮೀರಿ ನಿಂತಿದೆ.

ಇತ್ತೀಚೆಗಷ್ಟೇ ದುಬೈನಲ್ಲಿ ನಡೆದಿದ್ದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಾಟೇರ 4 ಮತ್ತು ರಕ್ಷಿತ್‌ ಶೆಟ್ಟಿಯವರ ಸಪ್ತಸಾಗರದಾಚೆ ಎಲ್ಲೋ 5 ಪ್ರಶಸ್ತಿ ಪಡೆದಿತ್ತು. ಇದೀಗ ಐಫಾ ಪ್ರಶಸ್ತಿಯಲ್ಲೂ ಈ ಎರಡು ಚಿತ್ರಗಳೇ ಸದ್ದು ಮಾಡಿವೆ. ಈ ಎರಡೂ ಚಿತ್ರಗಳು ಪ್ರಶಸ್ತಿಗಳ ಸುರಿಮಳೆಯನ್ನೇ ಸ್ವೀಕರಿಸಿವೆ. ಆದರೆ ಪ್ರಶಸ್ತಿಗಳ ಸಂಖ್ಯೆಗಳ ಲೆಕ್ಕದಲ್ಲಿ ಸಪ್ತಸಾಗರದಾಚೆ ಎಲ್ಲೋ ಮುಂದಿದ್ದರೆ, ಎರಡನೇ ಸ್ಥಾನದಲ್ಲಿರುವುದು ದರ್ಶನ್‌ ಅವರ ಕಾಟೇರ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಕಾಟೇರ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ.

ನಿರ್ದೇಶಕ ತರುಣ್‌ ಸುಧೀರ್‌ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕಾಟೇರನ ಅಕ್ಕನ ಪಾತ್ರದಲ್ಲಿ ಮನಮಿಡಿಯುವಂತೆ ಅಭಿನಯಿಸಿದ್ದ ಹಿರಿಯ ನಟಿ ಶೃತಿ  ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.
ಖಳನಾಯಕರಾಗಿ ಅಬ್ಬರಿಸಿದ್ದ ತೆಲುಗು ನಟ ಜಗಪತಿ ಬಾಬು ಅವರು, ಅತ್ಯುತ್ತಮ ವಿಲನ್‌ ಪಾರಿಷೋತಕ ಸ್ವೀಕರಿಸಿದ್ದಾರೆ.
ಗುನುಗುವ ಹಾಡುಗಳ ಜೊತೆ, ರೈತರ ಹೋರಾಟದ ಗೀತೆಗಳ ಮೂಲಕ ಕ್ರಾಂತಿಯನ್ನೇ ಮಾಡಿದ್ದ ಸಂಗೀತ ನಿರ್ದೇಶಕ ಹರಿಕೃಷ್ಣ ಅತ್ಯುತ್ತಮ ಸಂಗೀತಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಇನ್ನು ನಟಿ ಆರಾಧನಾ ಅತ್ಯುತ್ತಮ ಹೊಸ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಐಫಾದಲ್ಲಿ ಕಾಟೇರ ಚಿತ್ರಕ್ಕೆ ಒಟ್ಟು ೬ ಪ್ರಶಸ್ತಿ ಲಭಿಸಿವೆ.

ಇನ್ನು ಸಪ್ತಸಾಗರದಾಚೆ ಎಲ್ಲೋ ಚಿತ್ರ..

ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದೆ. ರಕ್ಷಿತ್‌ ಶೆಟ್ಟಿ ಅತ್ಯುತ್ತಮ ನಟ ಹಾಗೂ ನಟಿ ರುಕ್ಮಿಣಿ ವಸಂತ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಗೋಪಾಲ ಕೃಷ್ಣ ದೇಶಪಾಂಡೆ ಅತ್ಯುತ್ತಮ ಪೋಷಕ ನಟರಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಸಾಹಿತ್ಯಕ್ಕಾಗಿ ಧನಂಜಯ ರಂಜನ್ ಪಡೆದಿದ್ದಾರೆ.
ಇದೇ ಚಿತ್ರದಲ್ಲಿ ಹಾಡುಗಳಿಗೆ ಗಾಯನಕ್ಕಾಗಿ ಎಂಸಿ ಬಿಜ್ಜು ಅತ್ಯುತ್ತಮ ಗಾಯಕ ಹಾಗೂ ಶ್ರೀಲಕ್ಷ್ಮಿ ಬೆಳ್ಳಣ್ಣು ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.
ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ಒಟ್ಟು 6 ಪ್ರಶಸ್ತಿಗಳು ಲಭಿಸಿವೆ.

ಐಫಾ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ವಿಚಾರದಲ್ಲಿ ಎರಡೇ ಸಿನಿಮಾಗಳಿಗೆ ಎಲ್ಲ ಪ್ರಶಸ್ತಿಗಳನ್ನೂ ನೀಡಿದೆ. ಅಂದಹಾಗೆ ಇಂಟರ್‌ ನ್ಯಾಷನಲ್‌ ಫಿಲ್ಮ್‌ ಅಕಾಡೆಮಿ ಅವಾರ್ಡ್‌ ಪ್ರಶಸ್ತಿಗಳಿಗೆ ದೊಡ್ಡ ಮನ್ನಣೆಯಂತೂ ಇದೆ. ಬಹುಶಃ ದರ್ಶನ್‌ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗದೇ ಇದ್ದರೆ, ಅತ್ಯುತ್ತಮ ನಟ ಪ್ರಶಸ್ತಿಯೂ ಅವರಿಗೇ ಸಿಗುತ್ತಿತ್ತು. ಪ್ರತಿ ಪ್ರಶಸ್ತಿಗಳ ಘೋಷಣೆಯಲ್ಲಳೂ ದರ್ಶನ್‌ ಎದುರಿಸುತ್ತಿರುವ ಕೊಲೆ ಪ್ರಕರಣವೇ ಅವರ ಪ್ರಶಸ್ತಿಗಳಿಗೆ ಅಡ್ಡಿಯಾಗುತ್ತಿದೆ. ಒಬ್ಬ ಕೊಲೆ ಆರೋಪಿಗೆ ಪ್ರಶಸ್ತಿ ಕೊಟ್ಟರೆ, ಪ್ರಶಸ್ತಿಯ ಘನತೆ, ಮೌಲ್ಯವೇ ಕಡಿಮೆಯಾಗಬಹುದು ಎಂಬ ಭೀತಿ ಪ್ರಶಸ್ತಿ ಪ್ರಾಯೋಕರ ಮನಸ್ಸಿನಲ್ಲಿದೆ.

Tags: #ಐಫಾಪ್ರಶಸ್ತಿ2024 #ದರ್ಶನ್‌ #ರಕ್ಷಿತ್‌ಶೆಟ್ಟಿ #ಕಾಟೇರ #ಸಪ್ತಸಾಗರದಾಚೆಎಲ್ಲೋ #ಕನ್ನಡಸಿನಿಮಾ #IIFAAwards2024 #Darshan #RakshitShetty #Katera #SapthaSagarDacheEllo #KannadaCinema
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.