ರಾಹುಲ್ ಗಾಂಧಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ನಿರೀಕ್ಷಿಸದೇ ಇದ್ದ ಸಾಧನೆ ಮಾಡಿದ್ದಾರೆ. 99 ಸ್ಥಾನ ಗೆದ್ದು ಲೋಕಸಭೆ ಪ್ರತಿಪಕ್ಷ ನಾಯಕರೂ ಆಗಿದ್ದಾರೆ. 50ರ ಗಡಿಯಲ್ಲಿಯೇ ಒದ್ದಾಡುತ್ತಿದ್ದ ಪಕ್ಷವನ್ನು 100ರ ಗಡಿಗೆ ಸಮೀಪಿಸಿರುವುದು ಸಾಧನೆಯೇ ಸರಿ. ಈ ಹಂತದಲ್ಲಿ ರಾಹುಲ್ ಗಾಂಧಿ ಭಯಂಕರ ಎಂದರೆ ಭಯಂಕರ ಎಂಬಂತೆ ಅಗ್ರೆಸ್ಸಿವ್ ಆಗಿದ್ದಾರೆ. ಆದರೆ ಆ ಹಾದಿಯಲ್ಲಿ ರಾಹುಲ್ ಗಾಂಧಿ ಪದೇ ಪದೇ ಎಡವುತ್ತಿರುವುದು ಸುಳ್ಳಲ್ಲ.
ಇತ್ತೀಚೆಗೆ ರಾಹುಲ್ ಗಾಂಧಿ ದಲಿತರಿಗೆ ಮತ್ತು ಆದಿವಾಸಿಗಳಿಗೆ ಮಿಸ್ ಇಂಡಿಯಾ ಪಟ್ಟ ಸಿಕ್ಕಿಲ್ಲ ಎಂದು ವಾದಿಸಿದ್ದರು. ಎಷ್ಟು ಸಂಸ್ಥೆಗಳು, ಕಾರ್ಪೊರೇಟ್ ಕಂಪೆನಿಗಳು, ಬಾಲಿವುಡ್, ಮಿಸ್ ಇಂಡಿಯಾಗಳಲ್ಲಿ ಎಷ್ಟು ಮಂದಿ ಶೇ ಶೇ 90ರ ವರ್ಗದಿಂದ ಬಂದಿದ್ದಾರೆ. ಆ ಶೇ 90ರಷ್ಟು ಮಂದಿ ಯಾವುದರಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಪರಿಶೀಲಿಸಬೇಕು ಎಂದಷ್ಟೇ ನಾನು ಹೇಳುತ್ತಿದ್ದೇನೆ ಎಂದಿದ್ದರು.
ಮಿಸ್ ಇಂಡಿಯಾ ಪಟ್ಟಕ್ಕೂ ದಲಿತ, ಆದಿವಾಸಿ ಮೀಸಲಾತಿಗೂ ಏನು ಸಂಬಂಧ ಎಂಬುದು ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಯೂ ಹೌದು. ರಾಹುಲ್ ಗಾಂಧಿಯವರ ಇಂತಹ ಹೇಳಿಕೆಗಳು ಅಹಿಂಸಾ ಚೇತನ್ ಅವರ ವಾದಗಳನ್ನು ನೆನಪಿಸುತ್ತಿವೆ. ಆ ದಿನಗಳು ಖ್ಯಾತಿಯ ಚೇತನ್ ಕೂಡಾ ಹೀಗೆಯೇ.. ಕ್ರಿಕೆಟಿಗರು ಸೇರಿದರಂತೆ ಎಲ್ಲದರಲ್ಲ ಜಾತಿ ಹುಡುಕಿ ಅಪಹಾಸ್ಯಕ್ಕೊಳಗಾಗಿದ್ದರು. ಚೇತನ್ ಅವರಂತಹ ಕೆಲವರ ಮನಸ್ಥಿತಿಯವರೂ ಚೇತನ್ ಅವರ ವಾದವೂ ಸರಿ ಎಂದಿದ್ದರು. ಇದೀಗ ರಾಹುಲ್ ಗಾಂಧಿಯವರ ಈ ಹೇಳಿಕೆಯೂ ಅದೇ ರೀತಿ ಇದೆ.
ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಈಗ ಅವರು ಮಿಸ್ ಇಂಡಿಯಾ ಸ್ಪರ್ಧೆ, ಸಿನಿಮಾ, ಕ್ರೀಡೆಯಲ್ಲಿ ಮೀಸಲಾತಿ ಬಯಸಿದ್ದಾರೆ! ಇದು ‘ಬಾಲ ಬುದ್ಧಿ’ಯ ಸಮಸ್ಯೆಯಷ್ಟೇ ಅಲ್ಲ. ಅವರನ್ನು ಹುರಿದುಂಬಿಸುವ ಜನರು ಕೂಡ ಅಷ್ಟೇ ಹೊಣೆಗಾರರು!” ಎಂದು ಕಿಡಿಕಾರಿದ್ದಾರೆ. “ಬಾಲಿಶ ತಮಾಷೆಗಳು ಮನರಂಜನೆಗೆ ಒಳಿತು. ಆದರೆ ನಿಮ್ಮ ವಿಭಜನಾ ತಂತ್ರಗಳಿಗೆ ಹಿಂದುಳಿದ ಸಮುದಾಯಗಳ ಕುರಿತು ಲೇವಡಿ ಮಾಡಬೇಡಿ” ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲ “ರಾಹುಲ್ ಗಾಂಧಿ ಅವರೇ, ಮಿಸ್ ಇಂಡಿಯಾವನ್ನು ಸರ್ಕಾರ ಆಯ್ಕೆ ಮಾಡುವುದಿಲ್ಲ, ಒಲಿಂಪಿಕ್ಸ್‌ಗೆ ಅಥ್ಲೀಟ್‌ಗಳನ್ನು ಸರ್ಕಾರ ಆಯ್ಕೆ ಮಾಡುವುದಿಲ್ಲ, ಸಿನಿಮಾಗಳಿಗೆ ಕಲಾವಿದರನ್ನೂ ಸರ್ಕಾರ ಆಯ್ಕೆ ಮಾಡುವುದಿಲ್ಲ ಎಂದೂ ಹೇಳಿದ್ದಾರೆ.
ಅಂದಹಾಗೆ ರಾಹುಲ್ ಗಾಂಧಿಯವರು ಇದನ್ನೆಲ್ಲ ಮಾತನಾಡಿದ್ದು ಜಾತಿಗಣತಿ ಕುರಿತಂತೆ ಮಾತನಾಡುವಾಗ. ನೀತಿಗಳ ರಚನೆಗೆ ಜಾತಿಗಣತಿ ಅಡಿಪಾಯವಿದ್ದಂತೆ ಎಂದು ಕಾಂಗ್ರೆಸ್ ನಂಬಿದೆ. ಸಂವಿಧಾನ ರಕ್ಷಣೆ ಬಡವರು, ಕಾರ್ಮಿಕರು, ಬುಡಕಟ್ಟು ಜನಾಂಗದವರಿಂದ ಆಗುತ್ತಿದೆಯೇ ಹೊರತು ಅದಾನಿ ಅಂಥವರಿಂದಲ್ಲ’ ಹೀಗಾಗಿ ಜಾತಿಗಣತಿ ಅಗತ್ಯ ಈ ನಡುವೆ ಈವರೆಗೆ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರ ಪಟ್ಟಿ ನೋಡಿದೆ. ಆದರಲ್ಲಿ ದಲಿತ, ಆದಿವಾಸಿ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬರೂ ಇರಲಿಲ್ಲ. ಆದರೆ ಮಾಧ್ಯಮಗಳು ಹಾಡು, ಕುಣಿತ, ಕ್ರಿಕೆಟ್, ಬಾಲಿವುಡ್ ಬಗ್ಗೆ ಮಾತಾಡುತ್ತವೆಯೇ ಹೊರತು ರೈತರು ಮತ್ತು ಕಾರ್ಮಿಕರ ಬಗ್ಗೆ ಅಲ್ಲ’ ಎಂದು ಟೀಕಿಸಿದ್ದರು.
ಒಟ್ಟಿನಲ್ಲಿ ರಾಹುಲ್ ಗಾಂಧಿ ಅಗ್ರೆಸಿವ್ ಆಗುವ ಭರದಲ್ಲಿ ತಲೆ ಬುಡವಿಲ್ಲದ ಹೇಳಿಕೆ ಕೊಡುತ್ತಾ ಹೋದರೆ, ಮುಂದೊಂದು ದಿನ ರಾಜಕೀಯದಲ್ಲಿ ಅಪ್ರಸ್ತುತರಾಗುವ ಅಪಾಯವೂ ಇದೆ.



