Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಡಿ ಬಾಸ್‌ ರಿಲೀಸ್‌ ಆದರೆ ಅಭಿಮಾನಿಗಳು ಮೆರವಣಿಗೆಯಲ್ಲೇ ಕರೆದುಕೊಂಡು ಹೋಗ್ತಾರೆ : ಅಯೋಗ್ಯ ಮಹೇಶ್‌ ಕುಮಾರ್‌

SpeciallU by SpeciallU
July 16, 2024
in Cinema, News
Reading Time: 1 min read
0 0
0
ಡಿ ಬಾಸ್‌ ರಿಲೀಸ್‌ ಆದರೆ ಅಭಿಮಾನಿಗಳು ಮೆರವಣಿಗೆಯಲ್ಲೇ ಕರೆದುಕೊಂಡು ಹೋಗ್ತಾರೆ : ಅಯೋಗ್ಯ ಮಹೇಶ್‌ ಕುಮಾರ್‌

ಡಿ ಬಾಸ್‌ ಜೈಲಲ್ಲಿ ಇದ್ದರೂ ಹವಾ ನಡೆಯುತ್ತದೆ, ಹೊರಗೆ ಬಂದರೂ ಹವಾ ನಡೆಯುತ್ತಿರುತ್ತದೆ. ದರ್ಶನ್ ಅವರು ಚಿತ್ರರಂಗದ ಮೆರುನಟ, ಅವರು ಚಿತ್ರರಂಗಕ್ಕೆ ಒಂದು ತೂಕ. ಅವರು ಎಷ್ಟು ಬೇಗ ಆಚೆ ಬರುತ್ತಾರೋ, ಅಷ್ಟು ಚಿತ್ರರಂಗಕ್ಕೆ ಒಳ್ಳೇದಾಗುತ್ತದೆ. . ಅವರಿದ್ದರೆ, ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ದರ್ಶನ್ ಅವರು ನಿರಪರಾಧಿಯಾಗಿ ಹೊರಗೆ ಬರಲಿ ಎಂಬುದು ನನ್ನ ಪ್ರಾರ್ಥನೆ ಎಂದಿದ್ದಾರೆ ಡೈರೆಕ್ಟರ್‌ ಮಹೇಶ್.‌

ಅಭಿಮಾನಿಗಳು ತಮ್ಮ ತಮ್ಮ ಮೆಚ್ಚಿನ ನಟನನ್ನು ಬಾಸ್‌ ಎಂದೂ, ಅಣ್ಣಾ ಎಂದೂ ಕರೆಯೋದು ಮಾಮೂಲಿ. ಆದರೆ ಚಿತ್ರರಂಗದ ನಿರ್ದೇಶಕರು ನಟನೊಬ್ಬನನ್ನು ಬಾಸ್‌ ಎಂದು ಕರೆಯುವುದು ಅಪರೂಪ. ಅಯೋಗ್ಯ ಖ್ಯಾತಿಯ ಮಹೇಶ್‌ ಕುಮಾರ್‌, ದರ್ಶನ್‌ ಅವರನ್ನು ಡಿ ಬಾಸ್‌ ಎಂದು ಹೇಳಿದ್ಧಾರೆ. ಅಷ್ಟೇ ಅಲ್ಲ,

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಮಹೇಶ್‌ ಅವರ ಪ್ರಕಾರ ಬಾಸ್ ಒಂದು ಟ್ರ್ಯಾಪ್‌ನಲ್ಲಿ ತಗಲಾಕಿಕೊಂಡಿರಬಹುದು. ಆದಷ್ಟು ಬೇಗ ಅವರು ಹೊರಗೆ ಬರಲಿ. ಅದು ಯಾವ ಟ್ರ್ಯಾಪ್‌ ಅಂತ ನನಗೆ ಗೊತ್ತಿಲ್ಲ. ಅದನ್ನು ಕಂಡುಹಿಡಿಯಲು ನಾನು ಪೊಲೀಸ್ ಅಧಿಕಾರಿಯಲ್ಲ. ನನ್ನ ಅನಿಸಿಕೆಯನ್ನು ನಾನು ಹೇಳಿದ್ದೇನೆ ಅಷ್ಟೇ. ನಿಜವಾಗಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು.

ಹಾಗಂತ ಮಹೇಶ್‌ ಅವರನ್ನು ದರ್ಶನ್‌ ಅವರು ಎಂದೂ ಹೆಸರಿಡಿದು ಕರೆದಿಲ್ಲವಂತೆ.  ‘ರಾಬರ್ಟ್‌’ ಸಿನಿಮಾದಿಂದ ನಾನು ಅವರಿಗೆ ತುಂಬ ಹತ್ತಿರವಾದೆ. ‘ಕಾಟೇರ’ ಸಿನಿಮಾದಿಂದ ನಮ್ಮ ನಡುವಿನ ಒಡನಾಟ ಇನ್ನೂ ಜಾಸ್ತಿ ಆಯಿತು. ನನ್ನನ್ನು ಅವರು ನಿರ್ದೇಶಕರೇ ಎಂದು ಗೌರವದಿಂದ ಮಾತನಾಡಿಸುತ್ತಿದ್ದರು. ಯಾರೇ ನಿರ್ದೇಶಕರಿದ್ದರೂ, ಅವರನ್ನು ಹೆಸರಿಡಿದು ಕರೆಯೋದಿಲ್ಲ. ನಿರ್ದೇಶಕರೇ ಎಂದೇ ಕರೆಯುತ್ತಾರೆ ಎನ್ನುವ ಮಹೇಶ್‌ ದರ್ಶನ್‌ ಅವರು ಆರೋಪಿಯೇ ಹೊರತು, ಅಪರಾಧಿ ಅಲ್ಲ ಎಂದು ಹೇಳಿದ್ದಾರೆ.

ಸಾರಥಿ ರಿಲೀಸ್‌ ಆದ ದಿನ ದರ್ಶನ್‌ ಮನೆಗೆ ಹೋಗೋಕೆ ಮಧ್ಯಾಹ್ನವಾಗಿತ್ತು. ಈ ಬಾರಿ ಅವರು ಬಿಡುಗಡೆಯಾದರೆ ಅವರನ್ನು ಅಭಿಮಾನಿಗಳು ಮೆರವಣಿಗೆ ಮಾಡ್ಕೊಂಡ್‌ ಹೋಗ್ತಾರೆ. ಬೆಳಗ್ಗೆ ಹೊರಟರೂ.. ಮನೆ ತಲುಪುವುದಕ್ಕೆ ರಾತ್ರಿಯಾಗುತ್ತೆ ಎಂದು ಹೇಳಿದ್ದಾರೆ.

‘ಅಯೋಗ್ಯ’, ‘ಮದಗಜ’ ಸಿನಿಮಾಗಳ ನಿರ್ದೇಶಕ ಮಹೇಶ್‌ ಕುಮಾರ್. ದರ್ಶನ್ ಅವರ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಕ್ರಾಂತಿ, ರಾಬರ್ಟ್‌ ಚಿತ್ರಗಳ ಪ್ರಚಾರವನ್ನು ಸ್ವತಃ ಮಹೇಶ್‌ ಕುಮಾರ್‌ ಅವರೇ ವಹಿಸಿಕೊಂಡಿದ್ದರು. ಇತ್ತೀಚೆಗೆ ಅಭಿಷೇಕ್‌ ಅಂಬರೀಷ್‌ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ಧಾರೆ. ಆದರೆ ಅಭಿಷೇಕ್‌ ಅವರ ಚಿತ್ರ ಶುರುವಾಗುವುದು ಇನ್ನೂ ನಿಧಾನವಾಗಲಿದೆ. ಅದಕ್ಕೆ ಮೊದಲೇ ಮತ್ತೊಂದು ಸಿನಿಮಾ ಮಾಡಲಿದ್ದೇನೆ ಎನ್ನುವ ಮಹೇಶ್‌ ಕುಮಾರ್‌, ಅದು ಅಯೋಗ್ಯ 2 ಅಥವಾ ಮದಗಜ 2 ಆಗಬಹುದು ಎಂದಿದ್ದಾರೆ.

ಅಯೋಗ್ಯದ ಸೀಕ್ವೆಲ್‌ ಏನೋ ಓಕೆ, ಏಕೆಂದರೆ ಅಯೋಗ್ಯ ಹಿಟ್‌ ಸಿನಿಮಾ. ಮದಗಜ ಸೀಕ್ವೆಲ್‌ ಚಿಂತನೆ ಯಾಕೆ..? ಏಕೆಂದರೆ ಮದಗಜ ಹಿಟ್‌ ಚಿತ್ರವಂತೂ ಅಲ್ಲ. ಏನೋ.. ಒಟ್ಟಿನಲ್ಲಿ ಡೈರೆಕ್ಟರ್‌ ಮಹೇಶ್‌ ಕುಮಾರ್‌ ಮತ್ತೊಂದು ಸಿನಿಮಾ ಮಾಡ್ತಿದ್ದಾರಂತೆ.

Tags: #ಡಿಬಾಸ್‌ #ರಿಲೀಸ್‌ #ಅಯೋಗ್ಯಮಹೇಶ್‌ಕುಮಾರ್‌ #DBass #Release #Ayogyamaheshkumar
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.