ರಾಜ್ಯ ಸರ್ಕಾರ ಗ್ಯಾರಂಟಿಗಳ ಹಿಂದೆ ಹೋಗಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಇಲ್ಲ ಎಂಬ ಮಾತು ಕೇಳಿ ಬರುತ್ತಲೇ ಇದೆ. ಕಾಂಗ್ರೆಸ್ಸಿನ ಹಲವು ಶಾಸಕರೇ ತಮ್ಮ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿದ್ಧಾರೆ. ರಾಜ್ಯ ಸರ್ಕಾರದ ಹಲವು ಯೋಜನೆಗಳು ನೆನಗುದಿಗೆ ಬಿದ್ದಿವೆ ಎಂದು ಹೇಳಲಾಗುತ್ತಿದೆ. ಹಣ ಬಿಡುಗಡೆ ಎಂಬುದು ಕಾಗದಗಳಲ್ಲಿ ಅಷ್ಟೇ ಇದೆ, ಅಧಿಕೃತವಾಗಿ ಬಿಡುಗಡೆ ಆಗುತ್ತಿಲ್ಲ ಎಂಬ ಆರೋಪಗಳಿವೆ. ಇದರ ನಡುವೆ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು (building construction labors education education welfare ) ಕಡಿತ ಮಾಡಲಾಗಿದೆ. ಅದೂ ಕೂಡಾ ಸಣ್ಣ ಪ್ರಮಾಣದಲ್ಲೂ ಅಲ್ಲ, ದೊಡ್ಡ ಪ್ರಮಾಣದಲ್ಲಿಯೇ ಕಡಿತ ಮಾಡಲಾಗಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಸರ್ಕಾರ ಅಕ್ಟೋಬರ್ 30 ರಂದು ಅಧಿಸೂಚನೆ ಹೊರಡಿಸಿದೆ. ಕಟ್ಟಡ ಕಾರ್ಮಿಕರ ಮಕ್ಕಳ ಕಲಿಕೆ ಭಾಗ್ಯಕ್ಕೆ “ಕಡಿತ” Scholorship ಭಾಗ್ಯ ಕರುಣಿಸಿದೆ.
ಹಿಂದಿನ ಸರ್ಕಾರದನ ಸಹಾಯಧನ ಈಗ ಎಷ್ಟಕ್ಕೆ ಇಳೀತು..?
1. 1-4 ತರಗತಿ ವರೆಗಿನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 5000 ರೂ. ಸಹಾಯಧನ ನೀಡಲಾಗುತ್ತಿತ್ತು. ಆದ್ರೆ, ಇದೀಗ ಅದನ್ನು ಕಾಂಗ್ರೆಸ್ ಸರ್ಕಾರ 1100 ರೂ.ಗೆ ಇಳಿಸಿದೆ.
2. 5-8 ತರಗತಿ ವಿದ್ಯಾರ್ಥಿಗಳಿಗೆ 8000 ರೂ. ರಿಂದ 1250 ರೂಪಾಯಿಗೆ ಇಳಿಕೆ ಮಾಡಲಾಗಿದೆ.
3. 9-10 ತರಗತಿ ಮಕ್ಕಳಿಗೆ ನೀಡಲಾಗುತ್ತಿದ್ದ 12000 ರೂಪಾಯಿ ಈಗ 3000 ರೂ.ಗೆ ಇಳಿಕೆ ಮಾಡಲಾಗಿದೆ.
4. ಪಿಯುಸಿ ವಿದ್ಯಾರ್ಥಿಗಳ 15000 ರೂಪಾಯಿಯನ್ನು 4600 ರೂ.ಗೆ ಇಳಿಸಲಾಗಿದೆ.
- ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ 25000 ರೂ. ಅನ್ನು 6000 ರೂ.ನೀಡಲಾಗಿದೆ.
- ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ 50000 ರೂಪಾಯಿದಿಂದ 10000ರೂ.ಗೆ ಇಳಿಕೆ
- ಪಿಜಿ (ಪೋಸ್ಟ್ ಗ್ರಾಜ್ಯುಯೇಷನ್) ವಿದ್ಯಾರ್ಥಿಗಳಿಗೆ 30000ಗಳಿದ್ದ ಸಹಾಯಧನವನ್ನು ಈಗ ಕೇವಲ 10000ಗೆ ಇಳಿಸಲಾಗಿದೆ.
- ಐಟಿಐ/ಡಿಪ್ಲಮೊ್ವಿದ್ಯಾರ್ಥಿಗಳ ಸಹಾಯಧನ 20000ರೂ.ಗಳಿಂದ 4600ಗೆ ಇಳಿಕೆ ಮಾಡಲಾಗಿದೆ.
- ನರ್ಸಿಂಗ್/ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳಿಗೆ ಈ ಮೊದಲು 40000 ರೂ. ಸಹಾಯಧನ ನೀಡಲಾಗುತ್ತಿತ್ತು. ಆ ಮೊತ್ತ ಕೇವಲ 10 ಸಾವಿರ ರೂ.ಗೆ ಇಳಿಕೆಯಾಗಿದೆ.
- ಬಿ.ಇಡಿ ಓದುವ ಕೂಲಿ ಕಾರ್ಮಿಕರ ಮಕ್ಕಳಿಗೆ 35000 ರೂ. ನೀಡಲಾಗುತ್ತಿತ್ತು. ಆ ಮೊತ್ತ ಇದೀಗ 6000ಗೆ ಇಳಿಕೆಯಾಗಿದೆ.
- ಡಿ.ಇಡಿ ವಿದ್ಯಾರ್ಥಿಗಳಿಗೆ ಇದ್ದ 25000 ರೂ. ಸಹಾಯಧನ ಈಗ ಕೇವಲ 4600 ರೂ. ಮಾತ್ರ.
- ವೈದ್ಯಕೀಯ್ವಿದ್ಯಾರ್ಥಿಗಳಿಗೆ 60000 ನೀಡುತ್ತಿತ್ತು. ಆದರೆ ಆ ಸಹಾಯಧನ ಈಗ 11000 ರೂ.ಗಳಿಗೆ ಇಳಿಕೆಯಾಗಿದೆ.
- ಎಲ್ಎಲ್‌ಬಿ/ಎಲ್‌ಎಲ್‌ಎಂ ಪದವಿ ವ್ಯಾಸಂಗ ಮಾಡುತ್ತಿದ್ದ ಕಟ್ಟಡ ಕಾರ್ಮಿಕರ ಮಕ್ಕಳಿಗೆ 30000 ರೂ. ನೀಡುತ್ತಿದ್ದ ಸರ್ಕಾರ, ಈಗ ಆ ಮೊತ್ತವನ್ನು 10000ರೂ.ಗೆ ಇಳಿಸಿದೆ.
- ಪಿಎಚ್‌ಡಿ/ಎಂ.ಫಿಲ್ 25000 ರೂಪಾಯಿನಿಂದ 11000 ರೂ.ಗೆ ಇಳಿಸಲಾಗಿದೆ.
ನಕಲಿ ಕಾರ್ಮಿಕರ ಕಾರ್ಡ್ ರದ್ದು : ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಬೋಗಸ್ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸುಮಾರು 25 ಲಕ್ಷಕ್ಕೂ ಅಧಿಕ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಗೊಳಿಸುವ ಮುನ್ಸೂಚನೆಯನ್ನು ನೀಡಿದ್ದರು. ಅಂದರೆ, ಈ ಬಗ್ಗೆ ಅಕ್ಟೋಬರ್5 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್, ರಾಜ್ಯದಲ್ಲಿರುವ ನಕಲಿ ಕಾರ್ಮಿಕರ ಕಾರ್ಡ್ ಗಳನ್ನು ಹುಡುಕಿ ತೆಗೆದು ಹಾಕುತ್ತೇವೆ. ರಾಜ್ಯದಲ್ಲಿ 45 ಲಕ್ಷ ಕಾರ್ಡ್‌ಗಳು ಕಾರ್ಮಿಕ ಇಲಾಖೆಯಲ್ಲಿವೆ. ಅದರಲ್ಲಿ ಶೇ. 60 ರಿಂದ ಶೇ.70 ನಕಲಿ ಕಾರ್ಡ್‌ಗಳಿವೆ. ನಮ್ಮ ಇಲಾಖೆಯಲ್ಲಿ ದುಡ್ಡು ಇದೆ ಅಂತಾ ಕಾರ್ಡ್ ಮಾಡಿಕೊಂಡಿದ್ದಾರೆ. ಹೀಗಾಗಿ ನಕಲಿ ಕಾರ್ಡ್ ಮಾಡಿಕೊಂಡು ಅರ್ಜಿ ಹಾಕಿದ್ದಾರೆ. ಅದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ಕೊಡೊದಕ್ಕೆ ನಮ್ಮಲ್ಲಿ ದುಡ್ಡಿನ ಕೊರತೆ ಇದೆ. ಇರೊದನ್ನೆ ಇವಾಗ ಕೊಡೊದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು.



