ಸಿಟಿ ರವಿ ಕೆಟ್ಟ ಪದ ಬಳಸಿದ್ದಕ್ಕೆ ಸರ್ಕಾರಿ ಟಿವಿಯಲ್ಲೇ ಸಿಕ್ಕಿತಂತೆ ಸಾಕ್ಷಿ. ಹಾಗಾದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಸ್ ಸ್ಟ್ರಾಂಗ್ ಆಗುತ್ತಾ..? ಸಿಟಿ ರವಿ ಲಕ್ಷ್ಮೀ ಹೆಬ್ಬಾಳ್ಕರ್ʻರನ್ನ ಬೈದಿದ್ದಕ್ಕೆ ಸಾಕ್ಷಿ ಸಿಕ್ಕಿದ್ಯಂತೆ. ಸರ್ಕಾರಿ ಟಿವಿಯಲ್ಲೇ ಸಿಟಿ ರವಿ ಅವಾಚ್ಯ ಶಬ್ಧ ಬಳಸಿರುವುದು ದಾಖಲಾಗಿದೆಯಂತೆ. ಸಿಐಡಿ ಪೊಲೀಸರಿಗೆ ಸರ್ಕಾರಿ ಟಿವಿ ವಿಡಿಯೋ ಲಭ್ಯವಾಗಿದೆಯಂತೆ. ಆ ಅಸಲಿ ವಿಡಿಯೋದಲ್ಲಿ ಅವಾಚ್ಯ ಶಬ್ಧ ಬಳಕೆಯ ಸರ್ಕಾರಿ ಸಾಕ್ಷಿ ಇದೆಯಂತೆ. ವಿಡಿಯೋದಲ್ಲಿ ಸಿಟಿ ರವಿ 7 ಬಾರಿ ʻಪ್ರಾಸಿಟ್ಯೂಟ್ʼ ಪದ ಬಳಸಿದ್ದಾರಂತೆ. ಇದು ಮೇಲ್ಮನೆ ಅಂದ್ರೆ ವಿಧಾನ ಪರಿಷತ್ ನೇರ ಪ್ರಸಾರದ ಸರ್ಕಾರಿ ಟಿವಿಯಲ್ಲೇ ಇದೆಯಂತೆ. ಆ ವಿಡಿಯೋದಲ್ಲಿ ಆಡಿಯೋ-ವಿಡಿಯೋ ಎರಡೂ ದಾಖಲಾಗಿದೆಯಂತೆ.
ಸಿಟಿ ರವಿ ಅವರು ತಾವು ಪ್ರಾಸಿಟ್ಯೂಟ್ ಪದ ಬಳಸಿಲ್ಲ.. ಫ್ರಸ್ಟ್ರೇಟ್ ಪದ ಬಳಸಿದ್ದೇನೆ ಎಂದು ಹೇಳಿದ್ದರು. ತಾವು ನಿಂದಿಸಿರುವುದಕ್ಕೆ ಅಸಲ ವಿಡಿಯೋನೇ ಇಲ್ಲ ಎಂದು ವಾದಿಸಿದ್ದರು. ಅವರಷ್ಟೇ ಅಲ್ಲ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರೂ ಕೂಡಾ ಅಸಲಿ ವಿಡಿಯೋ ಇಲ್ಲ ಎಂದು ಹೇಳಿದ್ದರು. ಈಗ ನೋಡಿದರೆ ಇಡೀ ಪ್ರಕರಣಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಆಡಿಯೋನೂ ಇದೆ. ವಿಡಿಯೋನೂ ಇದೆ ಎನ್ನಲಾಗುತ್ತಿದೆ.
ಸಿಐಡಿ ಪೊಲೀಸರು ಸುಮಾರು 4 ಗಂಟೆ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದು, ಪರೀಕ್ಷೆ ಮಾಡಬೇಕಿದೆ. ಅದರ FSL ಪರೀಕ್ಷೆ ಆಗಬೇಕಿದೆ. ಆದರೆ ಆ ಪರೀಕ್ಷೆಗೆ ಸಿಟಿ ರವಿ ಅವರ ಧ್ವನಿ ಪರೀಕ್ಷೆ ಆಗಬೇಕು. ಆದರೆ ಅದಕ್ಕೆ ಸಿಟಿ ರವಿ ಒಪ್ಪುತ್ತಿಲ್ಲ. ಇಡೀ ಪ್ರಕರಣದಲ್ಲಿ ದೊಡ್ಡ ತಿರುವು ಇರುವುದೇ ಇಲ್ಲಿ. ವಾಯ್ಸ್ ಟೆಸ್ಟ್ ಕೊಡಲು ಮೇಲ್ಮನೆ ಶಾಸಕ ಸಿಟಿ ರವಿ ನಿರಾಕರಿಸಿದ್ದಾರಂತೆ. ಅದು ಕೋರ್ಟಿನಲ್ಲಿ ತೀರ್ಮಾನವಾಗಲಿದೆ. ಆ ವಿಷಯ ಬೇರೆ.
ಆದರೆ ಒಬ್ಬ ಸಿಟಿ ರವಿ ರಾಜ್ಯ ಬಿಜೆಪಿಯನ್ನು ಯಾವ ಮಟ್ಟಕ್ಕೆ ಇಳಿಸಿದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಿದ್ಧಾರೆ ಸೀನಿಯರ್ಸ್. ಏಕೆಂದರೆ ರಾಜ್ಯ ಬಿಜೆಪಿಯನ್ನು ಕಟ್ಟಿದ ಯಡಿಯೂರಪ್ಪನವರೇ ಆಗಲಿ, ಅನಂತ್ ಕುಮಾರ್ ಅವರೇ ಆಗಲಿ.. ತಮ್ಮ ಎದುರಾಳಿಗಳನ್ನು ಟೀಕೆ ಮಾಡುವಾಗ ತಮ್ಮ ಬಾಯಿ ನಾಲಗೆಯ ಮೇಲೆ ಹತೋಟಿ ಇಟ್ಟುಕೊಂಡಿರುತ್ತಿದ್ದರು. ಇತ್ತೀಚೆಗೆ ಬಾಯಿಗೆ ಬಂದಂತೆ ಮಾತನಾಡುವುದೇ ನಾಯಕತ್ವದ ಲಕ್ಷಣ ಎಂಬಂತೆ ಬಿಂಬಿಸಲಾಗುತ್ತಿದೆ. ಸಿಟಿ ರವಿ ಕೂಡಾ ಇಂಥದ್ದೇ ಒಂದು ಭ್ರಮೆಗೆ ಬಿದ್ದು ಈಗ ತಗ್ಲಾಕ್ಕೊಂಡಿದ್ದಾರೆ. ಕೇಸು ಸ್ಟ್ರಾಂಗ್ ಆದರೆ.. ಸಿಟಿ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಲಿದೆ. ಏಕೆಂದರೆ ಹೆಣ್ಣು ಮಗಳನ್ನು ಕೆಟ್ಟದಾಗಿ ನಿಂದಿಸಿದವರನ್ನು ಸಮರ್ಥಿಸಿಕೊಳ್ಳಲು ಹೊರಟರೆ, ಇಡೀ ಪಕ್ಷವೇ ಬೆಲೆ ತೆರಬೇಕಾದೀತು ಎನ್ನುತ್ತಾರೆ ರಾಜಕೀಯ ಪಂಡಿತರು. ಹೀಗಾಗಿ ಸಿಟಿ ರವಿ ಸದ್ಯಕ್ಕೆ ಬಿಜೆಪಿ ನಾಯಕರ ಪಾಲಿಗೆ ನಂಗಲಾಗದ ಉಗುಳಲಾಗದ.. ಚಪ್ಪರಿಸಿದ್ದ ತುಪ್ಪ. ಅಷ್ಟೇ.



