ಕೆಲವರು ಸದಾ ನಗ್ತಾ ನಗ್ತಾ ಇರ್ತಾರೆ. ಹಸುನ್ಮುಖಿ. ಕೆಲವರು ಸಿಡುಕ್ತಾನೇ ಇರ್ತಾರೆ. ಮುಖ ಉರಉರ ಅಂತಿರುತ್ತೆ. ಅಗ್ನಿಕುಂಡ. ಕೆಲವರು ಕೋಪಾವಿಷ್ಠರಾದರೆ.. ಇನ್ನೂ ಕೆಲವರು ಯಾವಾಗಲೂ ತಮ್ಮ ಮೇಲೆ ಇಡೀ ಪ್ರಪಂಚವೇ ಬಿದ್ದಿದೆಯೇನೋ ಎಂಬಂತೆ ತಲೆ ಮೇಲೆ ಕೈ ಹೊತ್ಕೊಂಡೇ ಇರ್ತಾರೆ. ಮತ್ತೂ ಕೆಲವರು ರಸಿಕರು. ತುಂಟಾಟವೇ ತುಂಬಿರುತ್ತೆ. ಆದರೆ.. ಇನ್ನೂ ಕೆಲವರಿರ್ತಾರಲ್ಲ.. ಅವರದ್ದೊಂಥರಾ ವಿಚಿತ್ರ ಸ್ವಭಾವ.
ನೀವು ಅವರನ್ನು ಕೇಳಿ ನೋಡಿ.. ಒಂದೋ ಬೇಸರ.. ಇಲ್ಲವೇ ಅಳು.. ಅದೂ ಇಲ್ಲದಿದ್ರೆ.. ಏನೋ ಆಗ್ ಹೋಗಿದೆ.. ಅನ್ನೋ ಗೋಳು. ಇದಕ್ಕೆ ರಾಶಿಯೂ ಕಾರಣ ಅನ್ನೋದು ಗೊತ್ತಾ..? ಪ್ರತಿಯೊಬ್ಬ ವ್ಯಕ್ತಿ ಒಂದೊಂದು ಗುಣ ಸ್ವಭಾವವನ್ನು ಹೊಂದಿರುವಂತೆಯೇ ಕೆಲ ರಾಶಿಯವರು ಅದಕ್ಕೆ ತಕ್ಕಂತೆ ಇರುತ್ತಾರೆ.
ಮಿಥುನ ರಾಶಿ :
ಈ ರಾಶಿಯವರು ಚುರುಕು ಬುದ್ದಿ. ಒಂದೇ ಸಮಯದಲ್ಲಿ ಹಲವು ಕೆಲಸ ಮಾಡುವ ಇವರು, ಸಿಕ್ಕಾಪಟ್ಟೆ ಸಾಫ್ಟ್. ಆದರೆ, ದುರಾಸೆಯೂ ಹೆಚ್ಚು. ಸಂಪತ್ತು, ಸಮೃದ್ಧಿ, ಸಂತೋಷದ ಜೀವನ ಬಯಸುವ ಇವರು ಸಾಮಾನ್ಯವಾಗಿ ಎಲ್ಲರೊಂದಿಗೆ ಹೊಂದಿಕೊಳ್ಳುವುದಿಲ್ಲ. ತಮ್ಮ ಸಾಧನೆಗಳತ್ತ ಮಾತ್ರವೇ ಗಮನ ಕೊಡ್ತಾರೆ. ಹೆಚ್ಚು ಲಾಭ ಗಳಿಕೆ ಇವರ ಪರಮ ಧ್ಯೇಯ. ಆದ್ದರಿಂದ ಇವರು ಎಲ್ಲರೊಂದಿಗೆ ಹೆಚ್ಚಾಗಿ ಬೆರೆಯುವುದು ತೀರಾ ಕಡಿಮೆ. ತಮ್ಮ ಆಲೋಚನೆಗಳು ಇತರರ ಆಲೋಚನೆಗಳು ಹೊಂದಿಕೊಳ್ಳದೇ ಇದ್ದರೆ ಅಂಥವರಿಂದ ಅಂತರ ಕಾಯ್ದುಕೊಳ್ಳುವರು.
ಧನುಸ್ಸು ರಾಶಿ :
ಇವರನ್ನು ಬಲ್ಲ ಕೆಲವೇ ಜನ ಮಾತ್ರ ಇವರೊಂದಿಗೆ ಹೊಂದಿಕೊಳ್ಳಲು ಸಾಧ್ಯ. ಇವರ ಮಾತುಗಳು ಇತರರಿಗೆ ಕೋಪ ತರಿಸಿದರೂ, ಇವರ ಮನಸ್ಸು ತುಂಬಾ ವಿಶಾಲವಂತೆ. ಗುರುವಿನ ಅನುಗ್ರಹದಿಂದಾಗಿ ಧನು ರಾಶಿಯವರು ಬುದ್ಧಿವಂತಿಕೆಯೊಂದಿಗೆ ಸಂಪತ್ತು ಹಾಗೂ ಸಮೃದ್ಧಿಯನ್ನು ಹೊಂದಿರುತ್ತಾರೆ. ಅತಿಯಾದ ಆತ್ಮವಿಶ್ವಾಸ. ಆದರೆ ಮಾತಿನ ಮೇಲೆ ಹಿಡಿತ ಇರೋದಿಲ್ಲ. ಹೀಗಾಗಿ ಇವರು ಎಲ್ಲರೊಂದಿಗೆ ಬಹುಬೇಗ ಹೊಂದಿಕೊಳ್ಳುವುದಿಲ್ಲ.
ಕುಂಭ ರಾಶಿ :
ಕುಂಭ ರಾಶಿಯವರ ಮೇಲೆ ಶನಿಯ ವಿಶೇಷ ಅನುಗ್ರಹ ಇರುತ್ತದೆ. ತಪ್ಪು ಮಾಡಲು ಹೆದರುತ್ತಾರೆ. ಜೊತೆಗೆ ಯಾವುದೇ ವಿಚಾರವನ್ನು ನ್ಯಾಯಯುತವಾಗಿ ನೋಡುತ್ತಾರೆ. ತಪ್ಪು ಕಂಡು ಬಂದರೆ ನೇರವಾಗಿ ಭಯವಿಲ್ಲದೇ ಹೇಳ್ತಾರೆ. ಇತರರು ಬೇಸರಗೊಳ್ಳುವ ಬಗ್ಗೆ ಕುಂಭ ರಾಶಿಯವರು ಚಿಂತಿಸುವುದಿಲ್ಲ. ಇವರೊಂದಿಗೆ ಎಲ್ಲರು ಹೊಂದಿಕೊಳ್ಳುವುದಿಲ್ಲ.
ವೃಶ್ಚಿಕ ರಾಶಿ :
ಶಕ್ತಿ ಮತ್ತು ಧೈರ್ಯವನ್ನು ಪ್ರತಿನಿಧಿಸುವ ಮಂಗಳ ಗ್ರಹದ ಆಳ್ವಿಕೆಯಲ್ಲಿರುವ ರಾಶಿ ವೃಶ್ಚಿಕ. ವೃಶ್ಚಿಕ ರಾಶಿಯವರು ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಒಂದ್ಸಲ ಡಿಸೈಡ್ ಮಾಡಿದ್ರೆ, ಅವರ ಮಾತನ್ನು ಅವರೇ ಕೇಳೋದಿಲ್ಲ. ಹೀಗಾಗಿ ಇವರೊಂದಿಗೆ ಸಾಗಲು ಇತರರು ಭಯ ಪಡುತ್ತಾರೆ. ಇವರದ್ದು ಸದಾ ರಹಸ್ಯ ಕಾಪಾಡಿಕೊಳ್ಳೂವ ವ್ಯಕ್ತಿತ್ವ. ಹೀಗಾಗಿ ಇವರು ಯಾರೊಂದಿಗೂ ಬಹುಬೇಗ ಹೊಂದಿಕೊಳ್ಳುವುದಿಲ್ಲ. ತಮ್ಮನ್ನು ಅರ್ಥ ಮಾಡಿಕೊಳ್ಳುವ ಹಾಗೂ ನಂಬಿಕೆಯುಳ್ಳವರೊಂದಿಗೆ ಮಾತ್ರ ಬೆರೆಯುತ್ತಾರೆ.



