Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ರವಿಚಂದ್ರನ್‌ಗೆ ಬುದ್ದಿ ಹೇಳಿದ ಕ್ರೇಜಿ ಪ್ರೇಕ್ಷಕರು..!

SpeciallU by SpeciallU
February 20, 2026
in Cinema, News
Reading Time: 1 min read
0 0
0
ರವಿಚಂದ್ರನ್‌ಗೆ ಬುದ್ದಿ ಹೇಳಿದ ಕ್ರೇಜಿ ಪ್ರೇಕ್ಷಕರು..!

ಕ್ರೇಜಿ ಸ್ಟಾರ್‌ ಎಂದು ಕರೆಸಿಕೊಳ್ಳುವ ರವಿಚಂದ್ರನ್‌, ಒಂದು ಹಿಟ್‌ ಸಿನಿಮಾ ಕೊಟ್ಟು ದಶಕಗಳೇ ಆಗಿವೆ. ರವಿಚಂದ್ರನ್‌ ತಮ್ಮ ಸಿನಿಮಾಗಳಿಗೆ ತಾವೇ ಕಥೆ, ಚಿತ್ರಕಥೆ, ನಿರ್ದೇಶನ, ನಟನೆ, ಸಂಗೀತ, ಕ್ಯಾಮೆರಾ, ಸಂಕಲನ.. ಎಲ್ಲವನ್ನೂ ʻಏಕಾಂಗಿʼಯಾಗಿ ಮಾಡುವ ಹಠಕ್ಕೆ ಬಿದ್ದರೋ.. ಆಗ ಪ್ರೇಕ್ಷಕರು ಅವರೇ ಆಗಿರಲಿ ಎಂಬ ಹಂತಕ್ಕೆ ಪ್ರೇಕ್ಷಕರು ಬಂದುಬಿಟ್ಟರು. ಇತ್ತೀಚೆಗೆ ರವಿಚಂದ್ರನ್‌ ಹೀರೋ ಆಗಿದ್ದ ಸಿನಿಮಾವೊಂದಕ್ಕೆ ಫಸ್ಟ್‌ ಡೇ.. ಫಸ್ಟ್‌ ಶೋಗೆ ಮಿನಿಮಮ್‌ ಪ್ರೇಕ್ಷಕರು ಇರಲಿಲ್ಲ. ಹೀಗಿರುವಾಗಲೇ ಪ್ರೇಕ್ಷಕರಿಗೆ ಬುದ್ದಿ ಹೇಳಿ.. ಪ್ರೇಕ್ಷಕರಿಂದಲೆ ಬುದ್ದಿ ಹೇಳಿಸಿಕೊಂಡಿದ್ದಾರೆ ರವಿಚಂದ್ರನ್.‌ ನಿಮಗೆ ಗೊತ್ತಿರಲಿ, ಚಿತ್ರರಂಗವನ್ನು ಹಾಳು ಮಾಡಿದವರಲ್ಲಿ ರವಿಚಂದ್ರನ್‌ ಅವರ ಪಾತ್ರವೂ ದೊಡ್ಡದು.

ರವಿಚಂದ್ರನ್‌ ಹೇಳಿರುವುದು ಎಂದ ಕಾರಣಕ್ಕೆ ಕಾಂಟ್ರವರ್ಸಿ ಅಗಿದ್ದರೂ,  ಟೀಕೆಗಳು ಬರುತ್ತಿದ್ದರೂ.. ಒಂದು ಲಿಮಿಟ್ಟಿನಲ್ಲೇ ಇವೆ. ಇಷ್ಟಕ್ಕೂ ರವಿಚಂದ್ರನ್‌ ಹೇಳಿರುವ ಮಾತುಗಳೇನು..?

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಒಬ್ಬ ಪ್ರೇಕ್ಷಕನಿಗೆ ₹100 ಕೊಟ್ಟು ಸಿನಿಮಾ ನೋಡೋಕೆ ಆಗಲ್ವಾ. ಸಿನಿಮಾಗೋಸ್ಕರ ನೂರು ರೂಪಾಯಿ ಖರ್ಚು ಮಾಡೋಕೆ ಆಗುವುದಿಲ್ಲವೇ? 100 ರೂಪಾಯಿ ಕೊಟ್ಟು ಸಿನಿಮಾ ನೋಡಿ, ಅದರಿಂದ ನಿಮ್ಮ ಗಂಟೇನೂ ಹೋಗಲ್ಲ ಎಂದು ಹೇಳಿದ್ದಾರೆ.

ರವಿಚಂದ್ರನ್‌ ಅವರು ವಾಸ್ತವದಿಂದ ದೂರ ಹೋಗಿದ್ದಾರೆ ಎಂಬುದಕ್ಕೆ ಬೇರೆ ರೀಸನ್‌ ಬೇಕಿಲ್ಲ. ಯಾವ ಥಿಯೇಟರಿನಲ್ಲೂ ಜಸ್ಟ್‌ 100 ರೂಪಾಯಿಗೆ ಟಿಕೆಟ್‌ ಸಿಗಲ್ಲ.
ಮೊಬೈಲ್‌ನಲ್ಲೇ ಕಳೆದು ಹೋಗಬೇಡಿ. ಚಿತ್ರಮಂದಿರಕ್ಕೆ ಬಂದು, ಸಿನಿಮಾ ನೋಡಿ. ಸಿನಿಮಾನ ಗೆಲ್ಲಿಸಿ, ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ನೀವು ಸಿನಿಮಾ ನೋಡಿದ ಬಳಿಕ ನಿಮಗೆ ಇಷ್ಟವಾಗಿಲ್ಲ ಅಂದರೂ ಏನೂ ಆಗುವುದಿಲ್ಲ. ಆದರೆ, ಚಿತ್ರಮಂದಿರಗಳಿಗೆ ಬಂದು ಮೊದಲು ಚಿತ್ರವನ್ನು ನೋಡಿ… ಎಂದಿದ್ದಾರೆ.

ಕೆಟ್ಟ ದರಿದ್ರ ಸಿನಿಮಾ ಮಾಡಿ.. ಪ್ರೇಕ್ಷಕರು ಬಂದು ನೋಡಬೇಕು ಎಂದರೆ ಹೇಗೆ..?

ಈಗಂತೂ ಲೈಕ್ಸ್ ಮತ್ತು ಕಾಮೆಂಟ್ಸ್ ಎನ್ನುತ್ತಲೇ ಇರುತ್ತಾರೆ. ಅದನ್ನ ಬಿಟ್ಟು ಹೊರಗೆ ಬನ್ನಿ, ಥಿಯೇಟರ್‌ಗೆ ಬಂದು ಸಿನಿಮಾ ನೋಡಿ. ಪ್ರೇಕ್ಷಕರನ್ನು ಹೊಗಳಿದ್ದೇವೆ. ಸಿನಿಮಾ ನೋಡಿ ಪ್ರಾರ್ಥಿಸಿದ್ದೇವೆ. ಮನವಿ ಮಾಡಿದ್ದೇವೆ. ಕೆಲವರು ಸಿನಿಮಾ ನೋಡಿ ಅಂತಾ ಚಪ್ಪಲಿಯಲ್ಲಿ ಹೊಡೆದುಕೊಂಡಿದ್ದಾರೆ. ಒಳ್ಳೆ ಸಿನಿಮಾಗಾಗಿ ಕೆಲವರು ಒಟ್ಟಾಗಿ ಸಿನಿಮಾ ನೋಡಿ ಅಂತ ಕರೆಕೊಟ್ಟಿದ್ದಾರೆ.

ಪ್ರೇಕ್ಷಕರ ಪ್ರಶ್ನೆ.. ಇಷ್ಟೇ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರೋಕೆ ಇನ್ನಿಲ್ಲದ ಬುದ್ದಿವಂತಿಕೆ ಉಪಯೋಗಿಸುವ ಅದೇ ಚಿತ್ರತಂಡ, ಚೆಂದದ ಸಿನಿಮಾ ಮಾಡೋಕೆ ಬುದ್ದಿವಂತಿಕೆ ಉಪಯೋಗಿಸಲಿ.
ರವಿಚಂದ್ರನ್‌ ಅವರ ಪ್ರಕಾರ ಸಿನಿಮಾ ಮಾಡುವುದು ಚಿತ್ರತಂಡದವರಾದರೆ, ಆಪರೇಷನ್‌ ಮಾಡುವುದು ಪ್ರೇಕ್ಷಕರಂತೆ. ʻಪ್ರತೀ ಸಲ ಸಿನಿಮಾ ಮಾಡಿದಾಗಲೂ ನಮಗೆ ಹೆರಿಗೆ ನೋವು ಇದ್ದದ್ದೇ. ಆದರೆ, ಆಪರೇಷನ್‌ ಮಾಡೋದು ನೀವು. ಸಿಸೇರಿಯನ್‌ ಮಾಡೋದು ನೀವು. ಏನಾದರೊಂದು ಮಾಡಿ. ಮೊದಲು ಬದುಕಿಸಿʼ ಎಂದಿದ್ದಾರೆ.

ರವಿಚಂದ್ರನ್‌ ಅವರು ಗೆದ್ದಿದ್ದು ರೀಮೇಕ್‌ ಯುಗದಲ್ಲಿ. ಬಹುಶಃ ಆಗ ಡಬ್ಬಿಂಗ್‌ ಇರುತ್ತಿದ್ದರೆ, ಎಲ್ಲ ಭಾಷೆಯ ಸಿನಿಮಾಗಳನ್ನು ಕನ್ನಡದಲ್ಲಿಯೇ ನೋಡುವ ಅವಕಾಶ ಸಿಕ್ಕಿದ್ದರೆ ರವಿಚಂದ್ರನ್‌ ಅವರಿಗೆ ಒಂದೇ ಒಂದು ಹಿಟ್‌ ಸಿನಿಮಾ ಕೂಡಾ ಇರುತ್ತಿರಲಿಲ್ಲ. ನೆಟ್ಟಗೆ ಕಥೆ, ಚಿತ್ರಕಥೆ ಮಾಡೋಕೆ ಬರಲ್ಲ. ಏನ್‌ ಹೇಳ್ತೀರಿ ಸಾರ್‌ ಎಂದಿದ್ದಾರೆ ಪ್ರೇಕ್ಷಕರು.

ರವಿಚಂದ್ರನ್‌ ಅವರ ವಾದದ ಪ್ರಕಾರ ವಾರ ವಾರ ರಿಲೀಸ್‌ ಆಗೋ ಸಿನಿಮಾಗಳನ್ನು ಅವು ಹೇಗಾದರೂ ಇರಲಿ, ನೋಡಿ ಗೆಲ್ಲಿಸಬೇಕು. ಕಮಕ್‌ ಕಿಮಕ್‌ ಅನ್ನೋ ಹಂಗಿಲ್ಲ. ಕಮೆಂಟ್‌ ಮಾಡೋ ಹಾಗಿಲ್ಲ. ಅನ್ಯಾಯವಾಗಿ ಪ್ರೇಕ್ಷಕರ ಜೇಬಿಂದ ಹಣ ಹೋದರೂ ಪರವಾಗಿಲ್ಲ. ಪ್ರೇಕ್ಷಕರು ಸಿನಿಮಾ ನೋಡಬೇಕು. ಗೆಲ್ಲಿಸಬೇಕು.

ಅದಕ್ಕೆ ಪ್ರೇಕ್ಷಕರ ವಾದ ಸಿಂಪಲ್ ಹೋಟೆಲ್‌ ಸರಿ ಇಲ್ಲ. ಊಟ ಸರಿ ಇಲ್ಲ. ಆತಿಥ್ಯವೂ ಸರಿ ಇಲ್ಲ ಎಂದ ಮೇಲೆ ಗ್ರಾಹಕರು ಹೋಟೆಲ್‌ಗೆ ಹೋಗಲ್ಲ. ಸಿನಿಮಾ ಕೂಡಾ ಡಿಫರೆಂಟ್‌ ಅಲ್ಲ ಎಂದಿದ್ದಾರೆ.
ಸಿನಿಮಾ ಮಾಡ್ಕೊಂಡು ಸ್ವಾತಂತ್ರ್ಯ ಹೋರಾಟಗಾರರ ತರ ಬಿಲ್ಡಪ್‌ ಕೊಡಬೇಡಿ. ಹೊಸ ಟೆಕ್ನಾಲಜಿಯಿಂದ ನಿಮಗಷ್ಟೇ ಅಲ್ಲ, ನಮಗೂ ಕಷ್ಟ ಆಗಿದೆ. ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗಿ, ಸಿನಿಮಾ ಮಾಡಿ.. ಆಸೆ.. ಕನಸು ಅಂದ್ಕೊಂಡು ಕೂತ್ರೆ ಆಗಲ್ಲ. ನಮಗೆ ಇಷ್ಟ ಆಗೋ ರೀತಿ ಸಿನಿಮಾ ಮಾಡಿ. ನೋಡ್ತೇವೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದು ತರೋಕೆ ಉಪಯೋಗಿಸುವ ಜಾಣ್ಮೆ, ಬುದ್ದಿವಂತಿಕೆಯನ್ನ ಸಿನಿಮಾ ಮಾಡೋಕೂ ಬಳಸಿ. ಸಿನಿಮಾ ಗೆಲ್ಲುತ್ತವೆ ಎಂದು ಹೇಳಿದ್ದಾರೆ.

ಬಹುತೇಕರು ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳೆಸಿದವರು ರವಿಚಂದ್ರನ್‌ ಎನ್ನುತ್ತಾರೆ. ಆದರೆ.. ಕನ್ನಡ ಚಿತ್ರರಂಗವನ್ನು ಹಾಳು ಮಾಡಿದವರೂ ಅವರೇ. ಸತತವಾಗಿ ರೀಮೇಕ್‌ ಮಾಡಿದರು. ಒಂದು ಹಂತಕ್ಕೆ ಗೆದ್ದರು. ಇವರ ಗೆಲುವು ನೋಡಿದ ಅನೇಕರು ತಾವೂ ರೀಮೇಕ್‌ ಮಾಡೋಕೆ ಹೋದರು. ಸುಲಭವಾದ ದಾರಿ ಅಲ್ಲವೇ. ಕಥೆ ಹುಡುಕುವ ಹಂಗಿಲ್ಲ. ಚಿತ್ರಕಥೆಗೆ ಕಷ್ಟ ಪಡುವಂತಿಲ್ಲ. ಹಾಡು, ಮ್ಯೂಸಿಕ್ಕನ್ನೂ ಕಾಪಿ ಮಾಡಬಹುದು. ಇಂತಹ ಹುಚ್ಚಿನಿಂದಾಗಿ ಕನ್ನಡದಲ್ಲಿ ಇವತ್ತಿಗೂ ಕಥೆ ಇದ್ದರೆ ಚಿತ್ರಕಥೆ ಸರಿ ಇರಲ್ಲ. ಚಿತ್ರಕಥೆ ಸರಿ ಇದ್ದರೆ ಸಂಭಾಷಣೆ ಸರಿ ಇರಲ್ಲ. ಒಂದು ಪರ್ಫೆಕ್ಟ್‌ ಸಿನಿಮಾ ಮಾಡುವುದೇ ಗೊತ್ತಿಲ್ಲ. ಹಿಟ್‌ ಚಿತ್ರಗಳನ್ನು ತೆಗೆದುಕೊಂಡರೂ.. ಪ್ರೇಕ್ಷಕರು ಅನುಸರಿಸಿಕೊಂಡು ನೋಡಿದ್ದಾರೆಯೇ ಹೊರತು, ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಸಿನಿಮಾದವರು ಕೊಟ್ಟಿಲ್ಲ. ಇದು ಸತ್ಯ.

Tags: #ರವಿಚಂದ್ರನ್‌ #ಸಿನಿಮಾ #ಟಿಕೆಟ್‌ #Ravichandran #cinema #ticket
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.