ಚನ್ನಪಟ್ಟಣ ಬೈ ಎಲೆಕ್ಷನ್ ಇನ್ನೂ ಘೋಷಣೆ ಆಗಿರಲಿಲ್ಲ. ಸಿಪಿ್ಯೋಗೇಶ್ವರ್ ಆಗಿನ್ನೂ ಬಿಜೆಪಿಯಲ್ಲೇ ಇದ್ದರು. ಆಗಲೂ ಕೂಡಾ ತಮಗೆ ನ್ಯಾಯ ಕೊಡಿಸಿ ಎಂದು ಸಿಪಿವೈ ಮಗಳು ಬೀದಿಗೆ ಬಂದಿದ್ದರು. ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಅಪ್ಪನ ವಿರುದ್ಧ ಮಗಳು ಎಲೆಕ್ಷನ್ನಿಗೆ ನಿಲ್ತಾರಾ ಅನ್ನೋ ಪ್ರಶ್ನೆ ಮೂಡಿದ್ದವು. ಅದಾದ ಮೇಲೆ ಸಿಪಿವೈ, ಕಾಂಗ್ರೆಸ್ಸಿಗೆ ಹೋದರು. ಆಗಲೂ ಡಿಕೆ ಬಳಿ ಕಣ್ಣೀರಿಟ್ಟಿದ್ದರು ಸಿಪಿವೈ ಮಗಳು. ಕೌಟುಂಬಿಕ ಸಮಸ್ಯೆಗೆ ನಾವು ಎಂಟ್ರಿ ಕೊಡಬಾರದು ಎಂದಿದ್ದರು ಡಿಕೆ. ಈಗ ಅದೇ ಕುಟುಂಬದ ದೂರು ಹೈಕಮಾಂಡ್ ಅಂಗಳ ತಲುಪಿದೆ.
ಸಿಪಿ ಯೋಗೇಶ್ವರ್ ಮೊದಲ ಪತ್ನಿ ಮಂಜುಳಾ ಹಾಗೂ ಮಗಳು ನಿಶಾ ಬಹಿರಂಗವಾಗಿ ಮತ್ತೊಮ್ಮೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಹೈಕಮಾಂಡ್ ಲೀಡರ್ ಸುರ್ಜೇವಾಲಾ ಅವರಿಗೂ ದೂರು ಕೊಟ್ಟಿದ್ದಾರೆ.ನಮ್ಮಲ್ಲಿ ನಡೆಯುತ್ತಿರುವ ಫ್ಯಾಮಿಲಿ ಸಮಸ್ಯೆ ಸುರ್ಜೆವಾಲ ಮುಂದಿಟ್ಟಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ ಅವರೊಂದಿಗೆ ಮಾತಾಡುವುದಾಗಿ ಭರವಸೆ ನೀಡಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ನಮ್ಮ ಕುಟುಂಬದ ವಿಚಾರ ಹೇಗಾಗಿದೆ ಅಂದರೆ ಅವರಿವರ ಕಚೇರಿ ಬಾಗಿಲು ತಟ್ಟಬೇಕಾದ ಸ್ಥಿತಿ ಬಂದಿದೆ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಸಿಪಿ ಯೋಗೇಶ್ವರ್ ಮೊದಲ ಪತ್ನಿ ಮಂಜುಳಾ.
ಸಿಪಿ ಯೋಗೇಶ್ವರ್ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಮಂಜುಳಾ/ಮಾಲವಿಕಾ ಸೋಲಂಕಿ. ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿದ್ಧಾರೆ. ಅವರಲ್ಲಿ ದೊಡ್ಡವರು ನಿಶಾ. ಇನ್ನೊಬ್ಬ ಮಗನಿದ್ದಾನೆ. ಶ್ರವಣ್. ಎರಡನೇ ಪತ್ನಿಗೂ ಒಬ್ಬ ಮಗ ಇದ್ದಾನೆ.
ನಮ್ಮಲ್ಲಿ ನಡೆಯುತ್ತಿರುವ ಫ್ಯಾಮಿಲಿ ಸಮಸ್ಯೆ ಸುರ್ಜೆವಾಲ ಮುಂದಿಟ್ಟಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ ಅವರೊಂದಿಗೆ ಮಾತಾಡುವುದಾಗಿ ಭರವಸೆ ನೀಡಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ನಮ್ಮ ಕುಟುಂಬದ ವಿಚಾರ ಹೇಗಾಗಿದೆ ಅಂದರೆ ಅವರಿವರ ಕಚೇರಿ ಬಾಗಿಲು ತಟ್ಟಬೇಕಾದ ಸ್ಥಿತಿ ಬಂದಿದೆ. ನಮ್ಮ ಕೌಟುಂಬಿಕ ಸಮಸ್ಯೆಯನ್ನು ಸುರ್ಜೇವಾಲಾ ಅವರ ಮುಂದಿಟ್ಟಿದ್ದೇವೆ. ಡಿಸಿಎಂ ಹಾಗೂ ಗೃಹ ಸಚಿವರ ಜತೆ ಮಾತನಾಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ ಮಂಜುಳಾ.
300 ಆಸ್ತಿಗಳ ಮೇಲೆ ತಡೆಯಾಜ್ಞೆ ತಂದಿದ್ದೇವೆ. ಈಗ ನಮ್ಮ ಮಕ್ಕಳಿಗೆ ಬೀದಿಗೆ ಬಂದು ಹೋರಾಟ ಮಾಡುವ ಶಕ್ತಿ ಇಲ್ಲ.ನಾವು ಈ ಹೋರಾಟ ಶುರು ಮಾಡಿಲ್ಲ. ಅವರೇ ಮೊದಲು ಕೇಸ್ ಹಾಕಿದ್ದು, ಅವರು ಕೋರ್ಟ್ ಕೇಸ್ ನಿಲ್ಲಿಸುತ್ತಿಲ್ಲ ಎಂದು ದೂರಿದ್ದಾರೆ.
ತಂದೆಯೇ ಮಕ್ಕಳ ವಿರುದ್ದ ಕೇಸ್‌ಗಳನ್ನ ಹಾಕಿದ್ದಾರೆ. ಎಂಟತ್ತು ವರ್ಷಗಳ ಅಲೆದು ಕಾನೂನು ಹೋರಾಟ ಮಾಡೋಕೆ ಆಗಲ್ಲ. ಈ ಬಗ್ಗೆ ಡಿಕೆಶಿ ಅವರನ್ನೂ ಭೇಟಿಯಾಗಿದ್ವಿ, ನಮಗೆ ನ್ಯಾಯ ಸಿಗಲಿಲ್ಲ.. ನನ್ನ ಮಕ್ಕಳು ನೆಮ್ಮದಿಯಾಗಿ ಅವರ ಜೀವನ ರೂಪಿಸಿಕೊಳ್ಳಬೇಕು. ನಮಗೆ ಆಸ್ತಿಯಲ್ಲಿ ಪಾಲು ಬರಬೇಕು. ಯಾವ ತಂದೆಯೂ ಈ ರೀತಿ ಮಕ್ಕಳ ಮೇಲೆಯೇ ಕೇಸ್‌ಗಳನ್ನ ಹಾಕಿಲ್ಲ ಎಂದ ಸಿಪಿವೈ ಮಾಜಿ ಪತ್ನಿ, ಸುರ್ಜೇವಾಲಾ ಅವರಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಯೋಗೇಶ್ವರ್ ಒಬ್ಬ ಜನಪ್ರತಿನಿಧಿ. ಅವರ ಕುಟುಂಬದ ವಿಷಯವನ್ನು ಅವರೇ ಬೀದಿಗೆ ತಂದಿದ್ದಾರೆ. ಇದರಿಂದ ಜನರಿಗೆ ಅವರು ಏನು ಸಂದೇಶ ಕೊಡ್ತಿದ್ದಾರೆ.. ಎನ್ನುವುದು ಯೋಗೇಶ್ವರ್ ಮೊದಲ ಪತ್ನಿಯ ಪ್ರಶ್ನೆ. ಅಂದಹಾಗೆ ಮಾಧ್ಯಮಗಳ ಮೂಲಕವೇ ನಡೆಯುತ್ತಿರುವ ಈ ಹೋರಾಟಕ್ಕೂ ದಶಕಗಳ ಇತಿಹಾಸ ಇದೆ. ಆಗಾಗ್ಗೆ ಬಂದು ಈ ರೀತಿ ದೂರುವುದೂ ಇದೆ. ಅತ್ತ ಯೋಗೇಶ್ವರ್ ಮಣಿಯುತ್ತಿಲ್ಲ. ಇವರು ಶರಣಾಗುತ್ತಿಲ್ಲ. ಬಗ್ಗುತ್ತಿಲ್ಲ.
ಯೋಗೇಶ್ವರ್ ಅವರು ತಮ್ಮ ಮೊದಲ ಪತ್ನಿಗೆ ಕಾನೂನು ಪ್ರಕಾರ ಡಿವೋರ್ಸ್ ನೀಡಿದ್ದಾರಾ..? ಡಿವೋರ್ಸ್ ನೀಡಿಲ್ಲದೇ ಮದುವೆಯಾಗಿದ್ದರೆ.. ಅದು ಕ್ರೈಂ ಆಗುತ್ತದಲ್ಲವೇ.. ಮೊದಲ ಪತ್ನಿ ದೂರು ದಾಖಲೆಗಳನ್ನಿಟ್ಟುಕೊಂಡು ದೂರು ನೀಡಿದರೆ.. ಶಾಸಕ ಸ್ಥಾನಕ್ಕೇ ಕಂಟಕವಾಗಬಹುದಲ್ಲವೇ.. ಬಹುಶಃ ವಿಚ್ಚೇದನ ಆಗಿರಬೇಕು.



