11 ವರ್ಷಗಳ ಹಿಂದೆ ನಡೆದ ವಿದ್ಯಾರ್ಥಿನಿ ಸೌಜನ್ಯ (Soujanya rape & murder) ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕುರಿತ ಆರೋಪಗಳ ಕುರಿತಂತೆ ಧರ್ಮಸ್ಥಳ (Dharmasthala) ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Dr.Veerendra Heggade) ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ನಮ್ಮ ಮೇಲೆ ಮಾಡುತ್ತಿರುವ ಆರೋಪಗಳಿಗೂ ನಮಗೂ ಸಂಬಂಧವಿಲ್ಲ. ಸೌಜನ್ಯ ಪ್ರಕರಣವನ್ನು (Soujanya rape & murder) ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಪತ್ರ ಬರೆದಿದ್ದು ನಾನು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ, ಸಂಶೋಧನೆ ನಡೆಯಲಿ. ಇದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು (Dr.Veerendra Heggade) ಹೆಗ್ಗಡೆ ಹೇಳಿದ್ದಾರೆ.
ಪ್ರಕರಣದಲ್ಲಿ (Soujanya rape & murder) ಕ್ಷೇತ್ರದ (Dharmasthala) ವಿಚಾರವನ್ನು ಯಾಕೆ ಎಳೆದು ತರುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ. ಇದು ಕೇವಲ ಅಮಾಯಕ ಹುಡುಗಿಯ ಸಾವಿನ ವಿಚಾರವಲ್ಲ. ಇದರ ಹಿಂದೆ ಕ್ಷೇತ್ರದ ವಿಚಾರವಿದೆ. ನನಗೆ ಯಾವುದೇ ಭಯ, ಸಂಕೋಚ, ಸಂದೇಹ ಇಲ್ಲ. ನಮ್ಮ ವಿರುದ್ಧ ಶತುೃತ್ವಕ್ಕೆ ಕಾರಣ ಏನು? ನಮ್ಮ ಸಿಬ್ಬಂದಿಗಳಿಗೆ ಕ್ಷೇತ್ರದ ಕುರಿತ ವಿಚಾರಗಳು ತಿಳಿದಿದೆ. ಆದರೆ ನಮ್ಮ ಮೇಲೆ ಸತತ ಆರೋಪ ಮಾಡುತ್ತಿದ್ದರೂ ನಾವು ಸುಮ್ಮನಿದ್ದೇವೆ ಎಂದು ಮತ್ತಷ್ಟು ಆರೋಪ ಮಾಡಲಾಗುತ್ತದೆ. ನಾವು ಸುಮ್ಮನಿದ್ದೇವೆ ಅನ್ನೋದೇ ಒಂದು ಸಂಭಾಷಣೆ ಆಗಬಾರದು ಅನ್ನೋ ಕಾರಣಕ್ಕೆ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು (Dr.Veerendra Heggade) ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ (Soujanya rape & murder) ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ (Dharmasthala) ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ಆರೋಪಿ ಸಂತೋಷ್ ರಾವ್ನನ್ನು ಆರೋಪದಿಂದ ಖುಲಾಸೆಗೊಳಸಿತ್ತು. ನಿಜವಾದ ಅಪರಾಧಿಗಳು ಯಾರು ಎಂಬ ರಹಸ್ಯ ಇವತ್ತಿಗೂ ನಿಗೂಢವಾಗಿಯೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಧರ್ಮಸ್ಥಳದ ಸುತ್ತಮುತ್ತ ಹಲವು ಪ್ರಗತಿಪರ ಸಂಘಟನೆಗಳು ಧರ್ಮಸ್ಥಳದ ಮುಖ್ಯಸ್ಥರ ವಿರುದ್ಧವೇ ಆರೋಪ ಮಾಡುತ್ತಿದ್ಧಾರೆ. ಮೈಸೂರಿನ ಒಡನಾಡಿ ಸಂಸ್ಥೆಯೂ ಇದಕ್ಕೆ ದನಿಗೂಡಿಸಿದೆ.
ಹೋರಾಟಕ್ಕೆ ಇತ್ತೀಚೆಗೆ ಸೌಜನ್ಯ ತಾಯಿ ಕುಸುಮ, ಸೌಜನ್ಯ ಸಹೋದರಿ, ಸೋದರ ಮಾವ ವಿಠಲ್ ಗೌಡ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು, ಪ್ರಗತಿಪರ ಚಿಂತಕರಾದ ಸಿ ಬಸವಲಿಂಗಯ್ಯ, ನಾ ದಿವಾಕರ್, ಪ್ರೊಫೆಸರ್ ಕಾಳೇಗೌಡ ನಾಗವಾರ, ಸವಿತಾ ಪ ಮಲ್ಲೇಶ್ ಹಲವರು ದನಿಗೂಡಿಸಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸತತ ಆರೋಪ ಮಾಡಲಾಗುತ್ತಿದೆ. ಆರೋಪ-ಪ್ರತ್ಯಾರೋಪ , ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳು ಜೋರಾಗಿದೆ.
ಇವುಗಳಿಗೆಲ್ಲ ಇದೇ ಮೊದಲ ಬಾರಿಗೆ ಉತ್ತರ ನೀಡಿರುವ ವೀರೇಂದ್ರ ಹೆಗ್ಗಡೆ ಭಕ್ತರಿಗೆ ನಿಮ್ಮ ಶಿಸ್ತು, ನಿಯಮ ಮೀರಬೇಡಿ. ನನಗೆ ಯಾವ ಭಯವೂ ಇಲ್ಲ. ವೈಯುಕ್ತಿಕ ಅವಮಾನ, ವೈಯುಕ್ತಿಕ ಸಂಭಾಷಣೆ ಸರಿಯಲ್ಲ. ಇದನ್ನು ನಿಲ್ಲಿಸಬೇಕು. ಅಭಿಮಾನಿಗಳು ಸಂಯಮ ಪಾಲಿಸಬೇಕು. ನೈತಿಕ ಶಕ್ತಿ ಎಲ್ಲದಕ್ಕಿಂತ ದೊಡ್ಡದು (Dr.Veerendra Heggade) ಎಂದಿದ್ದಾರೆ.



