ಐಸೋಲೇಷನ್ (isolation), ಕಂಟೈನ್ಮೆಂಟ್ ಝೋನ್ (containment zone).. ಪದಗಳನ್ನೆಲ್ಲ ಜನ ಮರೆಯುತ್ತಿರುವ ಹೊತ್ತಿನಲ್ಲೀಯೇ ಮತ್ತೊಂದು ಭಯನಾಕ ವೈರಸ್ ಸದ್ದು ಮಾಡುತ್ತಿದೆ. ಝೀಕಾ ವೈರಸ್ (Zeeka virus) ಎಂಬ ವೈರಾಣು ಮತ್ತೆ ಭಯ ಹುಟ್ಟಿಸುತ್ತಿದೆ. ಜನರಿಗೆ ಮತ್ತೆ ಕೊರೊನಾ ವೈರಸ್ (corona virus) ಕಾಲದ ನರಕ ಯಾತನೆಯ ದಿನಗಳು ನೆನಪಾಗುವಂತೆ ಮಾಡುತ್ತಿದೆ. ಏಕೆಂದರೆ ಒಬ್ಬ ವ್ಯಕ್ತಿಗೆ ಝೀಕಾ ವೈರಸ್ (Zeeka virus) ಕಾಣಿಸಿಕೊಂಡರೂ ಕೂಡಾ, ಆ ವ್ಯಕ್ತಿ ಇರುವ ಪ್ರದೇಶದ ಸುತ್ತ ಮುತ್ತ ಐದು ಕಿ.ಮೀ. ವ್ಯಾಪ್ತಿಯಲ್ಲಿ ಬೇರೆಯವರ ಓಡಾಟಕ್ಕೆ ನಿರ್ಬಂಧ ಇರಲಿದೆ. ಹೊಸಬರು ಆ ಪ್ರದೇಶಕ್ಕೆ ಬರುವಂತಿಲ್ಲ. ಅದೇ ಪ್ರದೇಶದಲ್ಲಿರುವವರು ಬಾರ್ಡರ್ ದಾಟಿ ಹೊರಗೆ ಹೋಗುವಂತಿಲ್ಲ. ಸೇಮ್ ಕೊರೊನಾ ಕಾಲದ ಸ್ಥಿತಿ. ಕಂಟೈನ್ಮೆಂಟ್ ಝೋನ್ ಎಂದರೆ ಏನೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಲ್ಲವೇ.
ಕರ್ನಾಟಕ ರಾಜ್ಯ ಸರ್ಕಾರ ಎಚ್ಚರಿಕೆ :
ಮನುಷ್ಯರಲ್ಲಿ ಝೀಕಾ ಪಾಸಿಟಿವ್ ಬಂದಿಲ್ಲ. ಸೊಳ್ಳೆಗಳಿಗೆ ಬಂದಿದೆ, ಸೊಳ್ಳೆಗಳ ಪೂಲ್ ನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಬಗ್ಗೆ 10 ದಿನಗಳ ಹಿಂದೆ ವರದಿ ಬಂದಿದೆ. ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಆದರೆ ಝೀಕಾ ಮತ್ತು ನಿಫಾ ವೈರಸ್ ಬೇರೆ ಬೇರೆಯಾಗಿವೆ. ನಿಫಾ ಗಂಭೀರ ಸ್ವರೂಪದ ವೈರಾಣು ಆದರೆ ಝೀಕಾ ಬಗ್ಗೆ ಭಯ ಬೇಡ. ಆದರೂ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು ಎಂದಿರುವುದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.
ಏನಿದು ಝೀಕಾ ವೈರಸ್
ಝೀಕಾ ವೈರಸ್ ಸೋಂಕು ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಸಾಮಾನ್ಯವಾಗಿ ಯಾವುದೇ ರೋಗ ಲಕ್ಷಣಗಳನ್ನು ಉಂಟುಮಾಡುವುದಿಲ್ಲ ಆದರೆ ಜ್ವರ, ಕೀಲು ನೋವು ಅಥವಾ ಕಣ್ಣಿನ ಬಿಳಿಭಾಗವನ್ನು ಆವರಿಸುವ ಪೊರೆಯ ಸೋಂಕಿಗೆ ಇದು ಕಾರಣವಾಗಬಹುದು. ಗರ್ಭಿಣಿಯರಲ್ಲಿ ಝೀಕಾ ವೈರಸ್ ಸೋಂಕು ಮೈಕ್ರೊಸೆಫಾಲಿ (ಗಂಭೀರ ಜನ್ಮ ದೋಷ) ಮತ್ತು ಮಗುವಿನ ಕಣ್ಣು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಸೊಳ್ಳೆಗಳ ಮೂಲಕ ಈ ಸೋಂಕು ಹರಡುತ್ತದೆ. ಪ್ರಾರಂಭದಲ್ಲಿ ಸೌಮ್ಯ ಲಕ್ಷಣ ತೋರಲಿದೆ. ನಂತರದಲ್ಲಿ ಜೀವ ತೆಗೆಯುವ ರೋಗವಾಗಿ ಬದಲಾಗುತ್ತದೆ. ಈ ರೋಗದ ಲಕ್ಷಣಗಳು ವಾರದೊಳಗೆ ಕಣ್ಮರೆಯಾಗುತ್ತವೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಹೀಗಾಗಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.
ಝೀಕಾ ವೈರಸ್ಸಿಗೆ ಔಷಧಿ ಇಲ್ಲ :
ಝೀಕಾ ವೈರಸ್ ಸೋಂಕಿಗೆ ಒಳಗಾದವರು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣ ಗಳನ್ನು ತೋರಿಸುವುದಿಲ್ಲ. ಅನುಭವಿಸುವುದೂ ಇಲ್ಲ. ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತೆ ಇರುತ್ತದೆ. ಜ್ವರ, ದದ್ದು, ತಲೆನೋವು, ಕೀಲುನೊವು, ಆಯಾಸ, ಕೆನ್ನೆಗಳ ಊತ, ಬೆವರುವುದು, ತಣ್ಣಗಾಗುಧಿವುದು, ವಾಂತಿ, ಕೆಂಪಾದ ಕಣ್ಣು ಗಳು ಇತ್ಯಾದಿ ಲಕ್ಷಣಗಳು ಗೋಚರಿಸುತ್ತವೆ. ಔಷಧ ಇಲ್ಲ ಪ್ರಸ್ತುತ ಝೀಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಔಷಧ ಇಲ್ಲ. ಸದ್ಯ ನಿಮ್ಮ ವೈದ್ಯರು ಜ್ವರ ಕಡಿಮೆ ಮಾಡುವವರು ಮತ್ತು ವಾಂತಿ ಮತ್ತು ದದ್ದುಗಳಿಗೆ ಔಷಧಗಳನ್ನು ಸೂಚಿಸಬಹುದು.
ಚಿಕ್ಕಬಳ್ಳಾಪುರದಲ್ಲಿ ಪತ್ತೆ : ರಾಜಧಾನಿ ಬೆಂಗಳೂರಿನ ನೆರೆಯ ಜಿಲ್ಲೆಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಇರುವುದು ಪತ್ತೆಯಾಗಿದೆ. ಝೀಕಾ ವೈರಸ್ ಹರಡದಂತೆ ತಡೆಯುವ ಮುಂಜಾಗರೂಕತಾ ಕ್ರಮವಾಗಿ ರಾಜ್ಯದ 68 ಕಡೆಗಳಲ್ಲಿನ ಸೊಳ್ಳೆಗಳನ್ನು ಹಿಡಿದು ಅವುಗಳಲ್ಲಿ ರೋಗಕಾರಕ ವೈರಸ್ ಇದೆಯೇ ಎಂದು ಪರಿಣತರು ಪರೀಕ್ಷೆ ನಡೆಸಿದ್ದರು. ಇದರ ಅನ್ವಯ ಚಿಕ್ಕಬಳ್ಳಾಪುರದ ಆರು ಪ್ರದೇಶಗಳಲ್ಲಿ ಸೊಳ್ಳೆಗಳನ್ನು ಹಿಡಿದು ಪರೀಕ್ಷಿಸಲಾಗಿತ್ತು. ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ವೈರಸ್‌ಗಳು ಪತ್ತೆಯಾದ ಬೆನ್ನಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ವಿಶೇಷ ಸಭೆ ನಡೆಸಿ, ವೈರಸ್ ಹರಡದಂತೆ ತಡೆಯಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದ್ದಾರೆ. ತಲಕಾಯಲ ಬೆಟ್ಟದಿಂದ 5 ಕಿ.ಮೀ. ವ್ಯಾಪ್ತಿಯ ವೆಂಕಟಾ ಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿಮನೆ ಮನೆಗೆ ಭೇಟಿ ನೀಡಿ 30 ಗರ್ಭಿಣಿಯರು ಮತ್ತು ಜ್ವರಪೀಡಿತ 7 ಮಂದಿ ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ.



