ಇತ್ತೀಚೆಗೆ ಕೇರಳ ಸ್ಟೋರಿ ವಿವಾದ ಭಾರಿ ಸದ್ದು ಮಾಡುತ್ತಿದೆ. ಹಿಂದೂ, ಕ್ರಿಶ್ಚಿಯನ್ ಯುವತಿಯರನ್ನು ಪ್ರೀತಿ, ದೋಖಾ, ಬ್ರೇನ್ ವಾಷ್ ಮಾಡಿ ಉಗ್ರರಿಗೆ ಒಪ್ಪಿಸುವ ತಂತ್ರದ ಕುರಿತ ಕಥೆ ಅದು. ಅದು ನೈಜಕಥೆಯಾಧಾರಿತ ಚಿತ್ರ. ಇದರ ನಡುವೆ ಕೇವಲ ಯುವತಿಯರಷ್ಟೇ ಅಲ್ಲ, ಯುವಕರೂ ಟಾರ್ಗೆಟ್ ಆಗಿರುವ ವಿಷಯ ಬಹಿರಂಗವಾಗಿದೆ. ಮಧ್ಯಪ್ರದೇಶದಲ್ಲಿ.
ಇತ್ತೀಚೆಗೆ ಮಧ್ಯಪ್ರದೇಶದ ಪೊಲೀಸರು ಹಿಜಾಬ್-ಉಲ್-ತೆಹ್ರೀರ್ ಸಂಘಟನೆಯ ಜಾಲ ಭೇದಿಸಿ, ಐವರನ್ನು ಅರೆಸ್ಟ್ ಮಾಡಿದ್ದರು. ಆಘಾತಕಾರಿ ವಿಷಯವೆಂದರೆ ಆ ಐವರಲ್ಲಿ ಇಬ್ಬರು ಮೂಲತಃ ಹಿಂದೂಗಳಾಗಿದ್ದು, ಮತಾಂತರವಾದವರು. ಹಿಂದೂ ಯುವತಿಯರನ್ನು ಮದುವೆಯಾಗಿ ಕನ್ವರ್ಟ್ ಆದವರು.
ಭೋಪಾಲ್ ಮೂಲದ ಜಿಮ್ ತರಬೇತುದಾರ ಯಾಸಿರ್ ಖಾನ್ ಮತ್ತು ಹೈದರಾಬಾದ್ ಮೂಲದ ಮೊಹಮ್ಮದ್ ಸಲೀಂ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳು. ಮೊಹಮ್ಮದ್ ಸಲೀಂ ರಾಜಕಾರಣಿ ಕುಟುಂಬದಿಂದ ನಡೆಸುತ್ತಿರುವ ಹೈದರಾಬಾದ್ನ ಕಾಲೇಜೊಂದರಲ್ಲಿ ಫಾರ್ಮಸಿ ಉಪನ್ಯಾಸಕರಾಗಿದ್ದರು. ಮೊಹಮ್ಮದ್ ಸಲೀಂ ( ಸೌರಭ್ ರಾಜ್ ವೈದ್ಯ), ಅಬ್ದುರ್ ರೆಹಮಾನ್ ( ದೇವಿ ನಾರಾಯಣ ಪಾಂಡಾ) ಮತ್ತು ಮೊಹಮ್ಮದ್ ಅಬ್ಬಾಸ್ ಅಲಿ ( ಬೇನು ಕುಮಾರ್) ಸೇರಿದಂತೆ ಐವರು ಆರೋಪಿಗಳು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದವರು.
ಇವರಲ್ಲಿ ಸಲೀಂ ಅಲಿಯಾಸ್ ಸೌರಭ್ ರಾಜ್ ವೈದ್ಯ ಎಂಬಾತ ಲೆಕ್ಚರರ್ ಆಗಿದ್ದವನು. ಆಯುರ್ವೇದಿಕ್ ಡಾಕ್ಟರ್. ಇವರ ಸೀನಿಯರ್ ಕಮಲ್ ಎಂಬ ಡಾಕ್ಟರ್ ಯಾವ ಪರಿ ಬ್ರೇನ್ ವಾಷ್ ಮಾಡಿದ್ದನೆಂದರೆ, ಇದು ತಪ್ಪು ಮಗನೇ ಎಂದು ಹೇಳಿದ್ದ ತಂದೆಯನ್ನೇ ಹೊಡೆದಿದ್ದ ಎಂದು ನೆನಪಿಸಿಕೊಂಡಿದ್ದಾರೆ ಆತನ ತಂದೆ. ಆತ ತನ್ನ ತಂಗಿಯರಿಂದ ರಾಖಿ ಕಟ್ಟಿಸಿಕೊಳ್ಳೋದು ನಿಲ್ಲಿಸಿದಾಗ ಅನುಮಾನ ಶುರುವಾಯ್ತು. ಆತನ ಮುಸ್ಲಿಂ ಧರ್ಮ ಪ್ರೇಮ ಹಾಗೂ ಹಿಂದೂಗಳನ್ನು ಅವಮಾನಿಸುವುದು ಜಾಸ್ತಿಯಾದಾಗ ಆತನನ್ನು ಮನೆಯಿಂದ ಹೊರಹಾಕಿದೆವು ಎನ್ನುತ್ತಾರೆ ಆತನ ತಂದೆ.
ಹಿಜಾಬ್-ಉಲ್-ತೆಹ್ರೀರ್ ಸಂಘಟನೆ ಇರುವುದೇ ಈ ಕೆಲಸಗಳಿಗೆ. ಹದಿಹರೆಯದ ಯುವಕ-ಯುವತಿಯರನ್ನು ನಾನಾ ಆಮಿಷ ತೋರಿಸಿ ಮತಾಂತರ ಮಾಡುವುದೇ ಈ ಸಂಘಟನೆಯ ಕೆಲಸ. ಈಗಾಗಲೇ 16 ದೇಶಗಳಲ್ಲಿ ಈ ಸಂಘಟನೆ ನಿಷೇಧಿಸಲ್ಪಟ್ಟಿದೆ.



