ʻಬಿಗ್ ಬಾಸ್ʼ ಸೇರಿದವರು ಮಾಡಿರುವ ಸಾಧನೆ ಏನು..? ಹೀಗೊಂದು ಪ್ರಶ್ನೆ ಮೂಡುವುದು ಸಹಜ. ಆದರೆ.. ಬಿಗ್ ಬಾಸ್ ಶೋನಲ್ಲಿ ಸಾಧನೆ ಮುಖ್ಯವಲ್ಲ, ಕಾಂಟ್ರವರ್ಸಿ ಮುಖ್ಯ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗಿದೆ. ಈ ಬಾರಿಯೂ ಅಷ್ಟೇ.. ಬಿಗ್ ಬಾಸ್ ಶುರು ಆಗಿದೆ. ಈ ಬಾರಿ 19 ಸ್ಪರ್ಧಿಗಳಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಹೋಗಿರೋ ಒಬ್ಬೊಬ್ಬರ ಕಥೆಯಲ್ಲೂ ಕಾಂಟ್ರವರ್ಸಿಗಳೇ ತುಂಬಿ ತುಳುಕ್ತಾ ಇವೆ.
ಡಾಗ್ ಸತೀಶನ ದಾಖಲೆ ನೋಡಿ. ಡಾಗ್ ಬ್ರೀಡರ್ ಅಂತಾನೇ ದೊಡ್ಡ ಹೆಸರು ಮಾಡಿರೋ ಈತ, ನನ್ನ ಬಳಿ 100 ಕೋಟಿ ಡಾಗ್ ಇದೆ ಎಂದು ಹೇಳಿ ಫೇಮಸ್ ಆಗಿದ್ದ. ಇಡಿಯವರೆಲ್ಲ ಬಂದು ಚೆಕ್ ಮಾಡೋ ಹಾಗೆ ಮಾಡಿದ್ದ. ಸುಳ್ಳು ಹೇಳಿ ಫೇಮಸ್ ಆಗಿದ್ದವನೀಗ ಬಿಗ್ ಬಾಸ್ ಸೆಲಬ್ರಿಟಿ.
ಗಿಲ್ಲಿ ನಟ. ಕಾಮಿಡಿಗಿಂತ ಹೆಚ್ಚಾಗಿ ಸಿಕ್ಕ ಸಿಕ್ಕದ್ದಕ್ಕೆಲ್ಲ ಚಿತ್ರ ವಿಚಿತ್ರ ಟರ್ನು ಟ್ವಿಸ್ಟು ಕೊಟ್ಟು ಕಾಮಿಡಿ ಮಾಡೋವ್ನು. ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಕ್ವಾಟ್ಲೆ ಕಿಚನ್.. ಇತ್ಯಾದಿ ನೆನಪಿಸಿಕೊಂಡ್ರೆ ಗಿಲ್ಲಿ ನಟ ಯಾರು ಅನ್ನೋದು ಗೊತ್ತಾಗುತ್ತೆ. ಕಾಮಿಡಿಗಿಂತ ಈತ ತರಲೆ, ತಿಕ್ಕಲಾಟ ಮಾಡ್ಕೊಂಡೇ ಫೇಮಸ್ ಆಗಿದ್ದ ವ್ಯಕ್ತಿ.
ಮಾಳು.. ಅದೇ ರೀ ʻನಾ ಡ್ರೈವರಾ.. ನೀ ನನ್ನ ಲವ್ವರಾ..ʼ ಹಾಡಿನ ಮೂಲಕ ಸಂಚಲನ ಸೃಷ್ಟಿಸಿದ್ದ ವ್ಯಕ್ತಿ. ಮಾಳು ನಿಪನಾಳ. ಉತ್ತರ ಕರ್ನಾಟಕದ ಪ್ರತಿಭೆ. ಯೋಗರಾಜ್ ಭಟ್ ಅವರ ‘ಕರಟಕ ದಮನಕ’ ಸಿನಿಮಾದಲ್ಲಿ ‘ಹಿತಲಕ ಕರಿಬ್ಯಾಡ’ ಹಾಡನ್ನೂ ಸಹ ನಿಪನಾಳ ಹಾಡಿರೋ ಮಾಳು, ತನ್ನ ಕುಟುಂಬದವರ ಮೇಲೆಯೇ ಹಲ್ಲೆ ಮಾಡಿ ಸುದ್ದಿಯಾಗಿದ್ದ ವ್ಯಕ್ತಿ.
ಇನ್ನು ಜಾಹ್ನವಿ : ಬೇರೆ ಬೇರೆ ನ್ಯೂಸ್ ಚಾನೆಲ್ ಹಾಗೂ ಮನರಂಜನಾ ಚಾನೆಲ್ಲುಗಳಲ್ಲಿ ಕೆಲಸ ಮಾಡಿದ್ದ ಆಂಕರ್. ಗಿಚ್ಚ ಗಿಲಿಗಿಲಿ, ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿ ಇರೋ ಈಕೆ ಸವಿರುಚಿ ಶೋ ನಿರೂಪಕಿಯಾಗಿದ್ದವರು. ಆದರೆ ವೈಯಕ್ತಿಕವಾಗಿ ಬ್ರೇಕಪ್ ಆಗಿ, ಆ ಮೂಲಕವೇ ಸುದ್ದಿಯಾಗಿದ್ದವರು. ಅವರೂ ಈಗ ಬಿಗ್ ಬಾಸ್ ಮನೆ ಸೇರ್ಕೊಂಡಿದ್ದಾರೆ.
ಇನ್ನು ಧ್ರುವಂತ್. ಈತ ಮುದ್ದು ಲಕ್ಷ್ಮೀ ಸೀರಿಯಲ್ಲಿನಲ್ಲಿ ನಟಿಸ್ತಾ ಅನ್ನೋದು ಜನರಿಗ ಗೊತ್ತಾಗಿದ್ದು, ಈತನ ಮೇಲೆ ಇನ್ನೊಬ್ಬ ನಟಿಗೆ ಲೈಂಗಿಕ ಕಿರುಕುಳ ಆರೋಪ ಮಾಡಿದಾಗ. ಈತನ ಮೇಲೆ ರೇಪ್ ಕೇಸ್ ಕೂಡಾ ಇದೆ.
ಚಂದ್ರಪ್ರಭ ಅನ್ನೋ ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಮಜಾ ಟಾಕೀಸ್.. ಇತ್ಯಾದಿ ರಿಯಾಲಿಟಿ ಶೋ ನಟ, ಇತ್ತೀಚೆಗೆ ಗಾರೆ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ಟಿವಿ ಶೋಗಳೇ ಇಲ್ಲ ಅಂತಾ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ, ಈತನ ಮೇಲೆ ಹಿಟ್ & ರನ್ ಕೇಸ್ ಇದೆ.
ಇನ್ನೊಬ್ಬ ನಟಿ ಅಶ್ವಿನಿ. ನಟಿಸಿರೋದು ಎರಡೋ ಮೂರೋ ಸೀರಿಯಲ್ ಆದ್ರೂ, ಈಕೆ ತನ್ನ ತಂದೆ ತಾಯಿ ಕುಟುಂಬದಿಂದ ದೂರ ಇದ್ದಾರಂತೆ. ಅದ್ರಿಂದಾನೇ ಬಿಗ್ ಬಾಸ್ ಮನೆ ಸೇರೋ ಕ್ವಾಲಿಟಿ ಸಿಕ್ಕಿದ್ಯಂತೆ.
ಇನ್ನು ರಕ್ಷಿತಾ ಶೆಟ್ಟಿ ಕೆಟ್ಟ ಕೆಟ್ಟ ಕನ್ನಡ ಮಾತನಾಡಿದ್ದಕ್ಕೆ ಫೇಮಸ್ ಆದ್ರೆ, ಕಾಕ್ರೋಚ್ ಸುಧಿ.. ಯಾವನ್ರೀ ಬಿಗ್ ಬಾಸ್ ಶೋಗೆ ಬರ್ತಾನೆ. ಕೆಲಸ ಇಲ್ಲದೋವ್ರು ಬರಬೇಕಷ್ಟೇ ಅಂತ ಕಾಂಟ್ರವರ್ಸಿ ಮಾಡಿ ಸುದ್ದಿಯಾಗಿದ್ದ ನಟ. ಕ್ರೈಂ ಕೇಸುಗಳಿಗೆ ಹೋಲಿಸಿದ್ರೆ ಇವರದ್ದೊಂಥರಾ ಡಿಫರೆಂಟ್ ಕೇಸು.
ಇಷ್ಟೂ ಜನ ಕಾಂಟ್ರವರ್ಸಿಗಳಿಂದಲೇ ಸುದ್ದಿಯಾಗಿ ಬಿಗ್ ಬಾಸ್ ಮನೆ ಸೇರಿದ್ದಾರೆ. ಸದ್ಯದ ಮಟ್ಟಿಗೆ ಸೀರಿಯಲ್ ನಟಿಯರಾದ ಕರಿಮಣಿ ಸೀರಿಯಲ್ ಖ್ಯಾತಿಯ ಸ್ಪಂದನಾ ಸೋಮಣ್ಣ, ಮನದ ಕಡಲು ಚಿತ್ರದ ಹೀರೋಯಿನ್ ಆಗಿದ್ದ ರಾಶಿಕಾ ಶೆಟ್ಟಿ, ಸಿಲ್ಲಿ ಲಲ್ಲಿ ಖ್ಯಾತಿಯ ಮಂಜುಭಾಷಿಣಿ, ಯೂಟ್ಯೂಬರ್ ಮಲ್ಲಮ್ಮ, ಕೊತ್ತಲವಾಡಿ ಹೀರೋಯಿನ್ ಕಾವ್ಯಾ ಶೈವ, ಬಾಡಿಬಿಲ್ಡರ್ ಕರಿಬಸಪ್ಪ,
ಧನುಷ್, ಅಶ್ವಿನಿ ಗೌಡ, ಅಭಿಷೇಕ್, ಆರ್.ಜೆ.ಅಮಿತ್ ಅವರ ಮೇಲೆ ಕಾಂಟ್ರವರ್ಸಿ ಇಲ್ಲ.



