ಸಚಿವ ಜಮೀರ್ ಅಹ್ಮದ್ ಮತ್ತೊಮ್ಮೆ ಕಾಂಟ್ರವರ್ಸಿಗೆ ಕಲ್ಲು ಹೊಡೆದಿದ್ದಾರೆ. ಇತ್ತೀಚೆಗೆ ಬೀದರ್‌ನಲ್ಲಿ ನಡೆದ ವಕ್ಫ್ ಅದಾಲತ್‌ನಲ್ಲಿ ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದಲೇ ಗೆದ್ದಿದ್ದು. ಮುಸ್ಲಿಂಮರ ಕೆಲಸವನ್ನ ಸಚಿವ ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲವೂ ನಡೆದಿದ್ದು ವೇದಿಕೆಯ ಮೇಲಿದ್ದಾಗಲೇ ಎನ್ನುವುದು ವಿಶೇಷ.
ಸಿರ್ಫ್ ಔರ್ ಸಿರ್ಫ್ ಮುಸ್ಲಿಂ ಓಟ್‌ಸೆ ಸಾಗರ್ ಖಂಡ್ರೆ ಜೀತೆ ಸೋ ಹೈ. ಹಮಾರಾ ಕಾಮ್ ಝಕ್ ಮಾರ್‌ಕೆ ಕರ್ನಾ ಪಡ್ತಾ ಹೈ. (ಕೇವಲ ಅಂದರೆ ಕೇವಲ ಮುಸ್ಲಿಂಮರ ಮತದಿಂದ ಸಾಗರ್ ಖಂಡ್ರೆ ಗೆದ್ದಿದ್ದಾನೆ. ನಮ್ಮ ಕೆಲಸವನ್ನು ತಲೆ ಬಗ್ಗಿಸಿಕೊಂಡು ಅವನು ಮಾಡಬೇಕು) ಎಂದು ಹೇಳಿಕೆ ಕೊಟ್ಟಿದ್ಧಾರೆ. ಖಬರ್ ಸ್ತಾನ್ʻಗೆ ಸರ್ಕಾರಿ ಜಾಗ ನೀಡುವ ಸಲುವಾಗಿ ವ್ಯಕ್ತಿಯೊಬ್ಬ ಮನವಿ ಪತ್ರ ತಂದಿದ್ದ.ಅರಣ್ಯ ಪ್ರದೇಶದ ಜಾಗವಾಗಿದ್ದರಿಂದ ಖಬರಸ್ತಾನಗೆ (ಸ್ಮಶಾನ) ಜಾಗ ನೀಡುತ್ತಿಲ್ಲ ಎಂದು ಹೇಳಿದ್ದ.ನಾನು ಈಶ್ವರ ಖಂಡ್ರೆ ಜೊತೆ ಮಾತನಾಡ್ತಿನಿ, ನಾನು ಮಾಡಿಸ್ತಿನಿ ಬಿಡು ಎಂದು ಸರ್ವೆ ನಂಬರ್ 93 ಖಬರ್‌ಸ್ತಾನ ಜಾಗದ ವಿಚಾರವಾಗಿ ಅವನಲ್ಲಿ ಮಾತನಾಡುತ್ತೇನೆ. ಮುಸ್ಲಿಮರ ಕೆಲಸ ಮಾಡ್ಲೇಬೇಕು ಎಂದಿದ್ದಾರೆ ಜಮೀರ್.
ಇದು ವಿವಾದವಾಗಿದೆ. ಆರ್. ಅಶೋಕ್, ಸಿಟಿ ರವಿ ಮೊದಲಾದವರೆಲ್ಲ ವಿವಾದ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಟಿವಿ ಮೈಕ್ʻಗಳ ಎದುರು ಮಾತನಾಡಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಸಂವಿಧಾನ ವಿರೋಧಿ ಕಾಂಗ್ರೆಸ್ ಕೂಡಲೇ ಜಮೀರ್ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಈಗಾಗಲೇ, ವಕ್ಫ್ ಗೆ ಕೊಟ್ಟಿರುವ ಆಸ್ತಿ ಅನುತ್ಪಾದಕವಾಗಿದೆ. ಅರಣ್ಯ ಭೂಮಿಯ ಒಂದು ಇಂಚು ಭೂಮಿಯನ್ನು ವಕ್ಫ್ ಗೆ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಜಮೀರ್ ಅಹ್ಮದ್ ರಾಜೀನಾಮೆ ಪಡೆಯಬೇಕು ಇಲ್ಲದೇ ಹೋದಲ್ಲಿ ಸಂಪುಟದಿಂದ ವಜಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ಒತ್ತಾಯಿಸಿದ್ದಾರೆ.
ಜಮೀರ್ ಅಹ್ಮದ್ ಸ್ಪಷ್ಟನೆ ಏನು?
ಮುಸ್ಲಿಮರು ಒನ್‌ಸೈಡ್ ಮತ ನೀಡಿದ್ರು ಎಂದಿದ್ದೇನೆ. ಸಾಗರ್ ಖಂಡ್ರೆ 6 ಲಕ್ಷ ವೋಟ್ ಪಡೆದಿದ್ದಾರೆ. ಮುಸ್ಲಿಮರು 2 ಲಕ್ಷ ವೋಟ್ ನೀಡಿದ್ದಾರೆ. ಕೇವಲ 2 ಲಕ್ಷ ವೋಟ್‌ನಿಂದ ಗೆಲ್ಲಲು ಸಾಧ್ಯನಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ?ಕೇವಲ ಮುಸ್ಲಿಮರು ಮಾತ್ರವಲ್ಲ, ನೀವೆಲ್ಲ ಸೇರಿ ಮತ ನೀಡಿದ್ದೀರಿ. ಎಂಪಿನೂ ನಮ್ಮವರೂ, ಸಚಿವರೂ ನಮ್ಮವರಿದ್ದಾರೆ. ಆ ಕಾರಣಕ್ಕೆ ಗೆದ್ದಿದ್ದಾರೆ ಎಂದು ಹೇಳಿದ್ದೇನೆ. ಇಷ್ಟು ವರ್ಷ ನಮ್ಮ ಎಂಪಿ ಇರಲಿಲ್ಲ, ಬಿಜೆಪಿ ಎಂಪಿ ಇದ್ದರು. ಈಗ ನಮ್ಮ ಎಂಪಿ ಬಂದಿದ್ದಾರೆ, ಕೆಲಸ ಮಾಡಿಸಿಕೊಳ್ಳಬಹುದು ಎಂದಿದ್ದೇನೆ. ಚಾಮರಾಜಪೇಟೆಯಲ್ಲಿ ಮುಸಲ್ಮಾನರಿಗಿಂತ ಹೆಚ್ಚು ಹಿಂದೂ ವೋಟುಗಳು ನನಗೆ ಸಿಕ್ಕಿವೆ, ರವಿ ಇಂಥ ಹೇಳಿಕೆಗಳನ್ನು ನೀಡಿಯೇ ತಮ್ಮ ಕ್ಷೇತ್ರದಲ್ಲಿ ಸೋತಿದ್ದು ಎಂದು ಹೇಳಿದ್ದಾರೆ.
ಮುಸ್ಲಿಮರ ಕೆಲಸವನ್ನು ಈಶ್ವರ್ ಖಂಡ್ರೆ ತಲೆಬಾಗಿಸಿ ಮಾಡಬೇಕು ಎಂದು ಹೇಳಿದ್ದೀರಲ್ಲ ಎಂಬ ಪ್ರಶ್ನೆಗೆ ಇಲ್ಲ, ತಾವು ಹಾಗೆ ಹೇಳಿಯೇ ಇಲ್ಲ ಎಂದಿದ್ದಾರೆ. ಹೆಚ್ಚಿನ ಮುಸಲ್ಮಾನರು ಸಾಗರ್ ಗೆ ವೋಟು ಹಾಕಿರುವುದರಿಂದ ಅವರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದುಹೇಳಿದ್ದೇನಷ್ಟೇ ಎನ್ನುವುದು ಜಮೀರ್ ವಾದ.



