ಒಂದೊಳ್ಳೆ ಇಂಟ್ರೆಸ್ಟಿಂಗ್ ಗಾಸಿಪ್ ಹಿಸ್ಟರಿ ಸ್ಟೋರಿ ಇದೆ..!
ಕಿಚ್ಚ ಸುದೀಪ್ (Kichcha Sudeep) : ವೃತ್ತಿ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಪಾರ್ಟ್‍ಟೈಂ ರಾಜಕಾರಣಿ. ಯಾವ ಪಕ್ಷಕ್ಕೂ ಸೇರಿಲ್ಲವಾದರೂ, ಬಿಜೆಪಿ ಜೊತೆ ಗುರುತಿಸಿಕೊಂಡಿರುವವರು. ಹೀಗಾಗಿಯೇ ಟೀಕೆಗೆ ಗುರಿಯಾಗಿರುವ ಸುದೀಪ್, ಈಗಲೂ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.
ಬಿಸಿ ಪಾಟೀಲ್ (BC Patil) : ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಫುಲ್ ಟೈಂ ರಾಜಕಾರಣಿ. ಮೊದಲು ಕಾಂಗ್ರೆಸ್ಸಿನಲ್ಲಿದ್ದರು ಹಾಗೂ ಈಗ ಬಿಜೆಪಿಯಿಲ್ಲಿದ್ದಾರೆ.
ರಾಜೂಗೌಡ (Raju Gowda) : ರಾಜಕಾರಣಿ. ಸಿನಿಮಾದವರ ಜೊತೆ ಸಂಪರ್ಕ ಇದೆ. ರಾಜೂಗೌಡ ಹಾಗೂ ಸುದೀಪ್ ಸಂಬಂಧಿಕರು.
ಇದಿಷ್ಟೂ ಆರಂಭದ ಮಾಹಿತಿ. ಕಿಚ್ಚ ಸುದೀಪ್ (Kichcha Sudeep) ಅವರ ಬರ್ತ್ ಡೇ ಪಾರ್ಟಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಯಾದರೆ ಓಕೆ, ಆದರೆ ಈ ಬಾರಿ ರಾಜಕೀಯ ವೇದಿಕೆಯಲ್ಲಿ ಚರ್ಚೆಯಾಗುತ್ತಿರುವುದು ವಿಶೇಷ. ಕಿಚ್ಚ ಸುದೀಪ್ (Kichcha Sudeep) ಹುಟ್ಟುಹಬ್ಬಕ್ಕೆ ಅತಿಥಿಗಳಾಗಿ ಬಂದಿದ್ದವರಲ್ಲಿ ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೂಡಾ ಇದ್ದರು. ಅವರ ಜೊತೆ ಮಾಜಿ ಸಚಿವರಾದ ಬಿ.ಸಿ.ಪಾಟೀಲ್ ಹಾಗೂ ರಾಜೂಗೌಡ ಸುಮಾರು ಅರ್ಧಗಂಟೆ ಮಾತನಾಡಿದ್ದು ದೊಡ್ಡ ಸಂಚಲನ ಸೃಷ್ಟಿಸಿದೆ.
ಬಿಸಿ ಪಾಟೀಲ್ ಚಿತ್ರರಂಗದವರೇ. ನಟ ಹಾಗೂ ನಿರ್ಮಾಪಕ. ರಾಜೂಗೌಡ ಅವರೂ ಕೂಡಾ ಸುದೀಪ್ ಆತ್ಮೀಯರ ಬಳಗದಲ್ಲಿರುವವರು. ಬಂಧುಗಳೂ ಹೌದು. ಜೊತೆಗೆ ಬಿಜೆಪಿಯವರು. ಇವರು ಸಹಜವಾಗಿಯೇ ಸುದೀಪ್ ಬರ್ತ್ ಡೇ ಪಾರ್ಟಿಯಲ್ಲಿರುತ್ತಾರೆ. ಇನ್ನು ಸುದೀಪ್ ಈ ಚುನಾವಣೆಯಲ್ಲಿಯೇ ಬಸವರಾಜ ಬೊಮ್ಮಾಯಿ ಪರ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಇದೀಗ ಡಿಕೆಶಿ, ಬಿಸಿ ಪಾಟೀಲ್ ಮತ್ತು ರಾಜೂಗೌಡ ಅವರ ಜೊತೆ ಮಾತುಕತೆ ನಡೆಸಿದ್ದು ಆಪರೇಷನ್ ಹಸ್ತ ಎಂಬ ಕೂಗು ಕೇಳಿ ಬಂದಿದೆ.
ಬಿಸಿ ಪಾಟೀಲ್ ಮತ್ತು ರಾಜೂಗೌಡ ಇಬ್ಬರೂ ತಾವು ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್, ಕಾಂಗ್ರೆಸ್ಸಿಗರೇ ಆದರೂ.. ಸುದೀಪ್ ಒಂದು ರೀತಿಯಲ್ಲಿ ಬಿಜೆಪಿಗೆ ಹತ್ತಿರವಾಗಿದ್ದರೂ.. ಅದನ್ನೂ ಮೀರಿದ ಸ್ನೇಹ ಬಾಂಧವ್ಯ ಸುದೀಪ್ ಮತ್ತು ಡಿಕೆಶಿ ಇಬ್ಬರಲ್ಲಿಯೂ ಇದೆ.
ಗುಸುಗುಸು : ರಾಜಕೀಯದಲ್ಲಿ ಗಾಸಿಪ್ಪುಗಳಿಗೆ ದೊಡ್ಡ ಆಯುಷ್ಯ ಇದೆ. ಗಾಸಿಪ್ ಗಾಸಿಪ್ ಎನ್ನುತ್ತಲೇ ಅದು ನಿಜವಾಗಿರುವ ಇತಿಹಾಸ ಇದೆ. ಉದಾಹರಣೆಗೆ ಬಂಗಾರಪ್ಪ ಸಿಎಂ ಆಗಿದ್ದಾಗ ವಿಶ್ವನಾಥ್ (ಹಳ್ಳಿಹಕ್ಕಿ) ಒಂದು ಬಂಡಾಯ ಸಭೆ ನಡೆಸುತ್ತಿದ್ದರು. ಆ ಸಭೆಯಲ್ಲಿ ಮೊದಲಿಗೆ ಇದ್ದದ್ದು ಅವರೊಬ್ಬರೇ. ಆದರೆ ಇಂಟೆಲಿಜೆನ್ಸ್`ನವರಿಗೆ ಹಲವು ನಾಯಕರು ಬಂದಿದ್ದರು ಎಂದು ಸುದ್ದಿ ಮುಟ್ಟುವಂತೆ ನೋಡಿಕೊಳ್ಳುತ್ತಿದ್ದರು. ಅದೇ ಸುದ್ದಿಯಾಗುತ್ತಿತ್ತು. ಕೊನೆಗೆ ಅದೇ ನಿಜ ಎಂದು ಭ್ರಮಿಸಿದ ಹಲವು ನಾಯಕರು ವಿಶ್ವನಾಥ್ ಜೊತೆ ಸೇರಿದರು. ವಿಶ್ವನಾಥ್ ಜೊತೆ ಇದ್ದವರ ಸಂಖ್ಯೆ 15ರಿಂದ 20 ತಲುಪಿತು. ಅಂತಿಮವಾಗಿ ಬಂಗಾರಪ್ಪ ಸರ್ಕಾರ ಬಿತ್ತು. ಭ್ರಮೆಯನ್ನೇ ಸತ್ಯ ಎಂಬಂಎ ಬಿಂಬಿಸಿ ಗೆದ್ದಿದ್ದರು ವಿಶ್ವನಾಥ್.



