ಜೋಗಿ ಪ್ರೇಮ್ ಚಿತ್ರಗಳೆಂದರೆ.. ಅವರ ಚಿತ್ರಗಳಲ್ಲಿರೋ ಹಾಡುಗಳು. ಪ್ರೇಮ್ ಅವರ ಫಸ್ಟ್ ಸಿನಿಮಾ ಕರಿಯ ಚಿತ್ರದಿಂದಲೂ ಸಾಬೀತಾಗಿರುವ ಅಂಶ ಅದು. ದೊಡ್ಡ ಟ್ರ್ಯಾಕ್ ರೆಕಾರ್ಡ್ ಸೃಷ್ಟಿಸಿರೋ ಪ್ರೇಮ್ ಅವರ ಸಿನಿಮಾಗಳಲ್ಲಿ ಹಾಡುಗಳು ಅದ್ಭುತವಾಗಿರುತ್ತವೆ.
ಕರಿಯ : ನನ್ನಲಿ ನಾನಿಲ್ಲ.., ಕೆಂಚಾಲೋ ಮಂಚಾಲೋ.. ,
ಎಕ್ಸ್ʻಕ್ಯೂಸ್ ಮಿ : ಪ್ರೀತ್ಸೆ ಅಂತಾ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು.., ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ.. , ಎಕ್ಸ್ ಕ್ಯೂಸ್ ಮಿ.. , ಪ್ರೀತಿ ಏಕೆ ಭೂಮಿ ಮೇಲಿದೆ.., ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ.. ,
ಜೋಗಿ : ಬೇಡುವನು ವರವನ್ನು.. , ಹೊಡಿ ಮಗ.. , ಏಳು ಮಲೆ ಮೇಲೇರಿ.. , ಎಲ್ಲೋ ಜೋಗಪ್ಪ ನಿನ್ನ ಅರಮನೆ..,
ಈ ಪ್ರೀತಿ ಏಕೆ ಭೂಮಿ ಮೇಲಿದೆ : ಸುಳ್ಳೇ ಸುಳ್ಳು, ಈ ಪ್ರೀತಿ ಯಾಕೆ..
ರಾಜ್ ದಿ ಶೋ ಮ್ಯಾನ್ : ಹೇ ಪಾರು.. , ಮುತ್ತುರಾಜ ಕಾಲಿಟ್ಟ ಸೈಡು ಬಿಡಲೇ.. , ಪೋಲಿ ಇವನು..,
ಜೋಗಯ್ಯ : ಕುರಿ ಕೋಳಿನ.. , ಹೆತ್ತವಳಲ್ಲಾ ಅವಳು.. , ಜೋಗಯ್ಯ ಬಾ.. , ಗಂಗೆಯೇ ಅವನ..,
ವಿಲನ್ : ಐ ಆಮ್ ವಿಲ್ಲನ್.., ಟಿಕ್ ಟಿಕ್ ಟಿಕ್.. , ಬೋಲೋ ಬೋಲೋ ರಾಮಪ್ಪ.., ರಣರಣ ರಾವಣ.., ನೋಡಿವಳಂದಾವ..
ಏಕ್ ಲವ್ ಯಾ.. : ಯಾರೆ ಯಾರೇ.., ಹೇಳು ಯಾಕೆ.., ಮೀಟ್ ಮಾಡನ ಇಲ್ಲ ಡೇಟ್ ಮಾಡಣ.., ಮತ್ತೆ ನೋಡಬೇಡ..
ಹೀಗೆ.. ಜೋಗಿ, ಜೋಗಯ್ಯ, ವಿಲನ್, ಏಕ್ ಲವ್ ಯಾ.. ಹೀಗೆ ಯಾವ ಚಿತ್ರಗಳಲ್ಲೂ ಸಂಗೀತ ಮೆಲೋಡಿಯಾಗಿಯೂ ಗೆದ್ದಿದೆ. ಅಬ್ಬರದಲ್ಲೂ ಗೆದ್ದಿದೆ. ಹೀಗಾಗಿ ಕೆಡಿಯ ಹಾಡುಗಳ ಮೇಲೆ ದೊಡ್ಡ ನಿರೀಕ್ಷೆಯಂತೂ ಇದೆ. ಡಿಸೆಂಬರ್ 24ರಂದು ‘ಕೆಡಿ’ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಲಿದೆ.
ಕೆಡಿ. ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಮತ್ತು ಡೈರೆಕ್ಟರ್ ಜೋಗಿ ಪ್ರೇಮ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ, ರಿಲೀಸ್ ಆಗೋಕೆ ರೆಡಿಯಾಗುತ್ತಿದೆ. 80ರ ದಶಕದ ಕಥೆಯಲ್ಲಿ ಧ್ರುವ ಸರ್ಜಾ ಎದುರು ರೀಷ್ಮಾ ನಾಣಯ್ಯ ನಾಯಕಿಯಾಗಿದ್ದರೆ, ಪ್ರಮುಖ ಪಾತ್ರಗಳಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಸಂಜಯ್ ದತ್, ನೋರಾ ಫತೇಹಿ.. ಮೊದಲಾದವರೆಲ್ಲ ನಟಿಸಿದ್ದಾರೆ. ಇದೀಗ ಸಿನಿಮಾದ ಮೊದಲ ಹಾಡು ಡಿ.೨೪ಕ್ಕೆ ರಿಲೀಸ್ ಆಗುತ್ತಿದೆ.
ಒಂದು ಹಾಡನ್ನು ಸೆಟ್ ಹಾಕಿ ಚಿತ್ರೀಕರಣ ಮಾಡುತ್ತೇವೆ. ಮತ್ತೊಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸುವ ಪ್ಲ್ಯಾನ್ ಇದೆ. ಡಿಸೆಂಬರ್ 24ಕ್ಕೆ ನಮ್ಮ ಸಿನಿಮಾದ ‘ಶಿವ ಶಿವ..’ ಎಂಬ ಸಾಂಗ್ ಆನಂದ್ ಆಡಿಯೋ ಮೂಲಕ ರಿಲೀಸ್ ಆಗಲಿದೆ. ಆನಂದ್ ಮಾಸ್ಟರ್ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಕೈಲಾಶ್ ಖೇರ್ ಮತ್ತು ನಾನು ಹಾಡಿದ್ದೇವೆ. ಇನ್ನುಳಿದ ಭಾಷೆಗಳಲ್ಲಿ ಅಲ್ಲಿನ ಗಾಯಕರು ಹಾಡಿದ್ದಾರೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ’ ಎಂದು ಜೋಗಿ ಪ್ರೇಮ್ ಮಾಹಿತಿ ನೀಡಿದ್ದಾರೆ. ಚಿತ್ರದ ಸುದ್ದಿಗೋಷ್ಟಿಯಲ್ಲಿ ಪ್ರೇಮ್ ಜೊತೆ ನಟ ಧ್ರುವ ಸರ್ಜಾ ಹಾಗೂ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಹಾಜರಿದ್ದು,ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಿ, ಎರಡನೇ ಹಾಡನ್ನು ಮುಂಬೈನಲ್ಲಿ ರಿಲೀಸ್ ಮಾಡಲು ‘ಕೆಡಿ’ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಆಡಿಯೋ ಹಕ್ಕುಗಳು ಮಾತ್ರ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎಂದಿರುವ ಸುಪ್ರೀತ್ ಸಿನಿಮಾದ ಬ್ಯುಸಿನೆಸ್ ಬಗ್ಗೆ ನಾವು ಇನ್ನೂ ಕಮಿಟ್ ಆಗಿಲ್ಲ ಎಂದಿದ್ದಾರೆ.



