ಒಂದು ಟಗರು. ದೇವರಿಗೆ ಹರಕೆ ಹೊತ್ತಿರುವ ಟಗರನ್ನು ಬಲಿ ಕೊಡುವುದಕ್ಕೂ ಮುನ್ನ ಒಂದು ಕಥೆ ನಡೆಯುತ್ತದೆ. ನಂತರ ಟಗರು ಬಲಿ ಪೀಠದಿಂದ ತಪ್ಪಿಸಿಕೊಳ್ಳುತ್ತೆ. ಇದರ ನಡುವೆ ನಡೆಯುವ ಒಂದು ಪ್ರೇಮ ಕಥೆ. ಮಗಳೆಲ್ಲಿ ಓಡಿ ಹೋಗ್ತಾಳೋ ಎಂದು ಕಾಯುವ ಅಮ್ಮ, ಅಮ್ಮನನ್ನು ಆಟವಾಡಿಸುವ ಮಗಳು.. ಅಪ್ಪಟ ಮಂಡ್ಯ ಮಳವಳಿ ಭಾಷೆಯಲ್ಲಿರುವ ಟಗರು ಪಲ್ಯ ಚಿತ್ರದ ಟ್ರೇಲರ್ ಸಖತ್ ಕ್ರೇಜ್ ಹುಟ್ಟುಹಾಕಿದೆ. ಮಂಡ್ಯ ಕನ್ನಡದ್ದೇ ಒಂದು ಸೊಗಡಾದರೆ, ಮಳವಳ್ಳಿಯ ಶೈಲಿಯೇ ಬೇರೆ. ಅಂತಹ ಮಳವಳ್ಳಿಯಲ್ಲಿ ನಡೆಯುವ ಕಥೆಯನ್ನ ಅಪ್ಪಟ ಅದೇ ಭಾಷೆಯ ಸೊಗಡಿನಲ್ಲಿ ತರುತ್ತಿದ್ದಾರೆ ಡಾಲಿ ಧನಂಜಯ.
ಹೀರೋ ನಾಗಭೂಷಣ್. ಹೀರೋಯಿನ್ ಅಮೃತಾ ಪ್ರೇಮ್. ಗೆಳೆಯನನ್ನೇ ಚಿತ್ರದ ಮೂಲಕ ನಾಯಕ ನಟನನ್ನಾಗಿಸಿದ್ದಾರೆ ಡಾಲಿ ದನಂಜಯ್. ನೆನಪಿರಲಿ ಪ್ರೇಮ್ ಮಗಳು ಇದೇ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರಿಗಿದು ಮೊದಲ ಸಿನಿಮಾ. ರಂಗಾಯಣ ರಘು ಮತ್ತು ತಾರಾ ಸೀನಿಯರ್ ಜೋಡಿಯಾಗಿ ನಟಿಸಿದ್ದಾರೆ. ಉಮೇಶ್ ಕೆ ಕೃಪಾ ಡೈರೆಕ್ಟರ್. ಇದೀಗ ಈ ಚಿತ್ರವನ್ನ ನೋಡುವುದಕ್ಕೆ ಸಿಎಂ ಸಿದ್ದರಾಮಯ್ಯ ಬರೋ ನಿರೀಕ್ಷೆ ಇದೆ.
‘ಟಗರು ಪಲ್ಯ’ ಸಿನಿಮಾದ ನಿರ್ಮಾಪಕ ಡಾಲಿ ಧನಂಜಯ್ ಅವರು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ತಮ್ಮ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ವೀಕ್ಷಣೆಗೆ ಬರಬೇಕೆಂದು ಆಹ್ವಾನ ನೀಡಿದ್ದಾರೆ. ಡಾಲಿ ಆಹ್ವಾನಕ್ಕೆ ಧನಾತ್ಮಕವಾಗಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಡಾಲಿ ಧನಂಜಯ್ ಅವರನ್ನು ಬಿಜೆಪಿ ನಾಯಕಿ ನಟಿ ತಾರಾ ಅವರೊಂದಿಗೆ ಭೇಟಿ ಮಾಡಿದ್ದೇ ವಿಶೇಷವಾಗಿತ್ತು.
ಧನಂಜಯ್ ಹಾಗೂ ತಾರಾ ತಮ್ಮನ್ನು ಭೇಟಿಯಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ”ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ “ಟಗರು ಪಲ್ಯ” ಸಿನೆಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು” ಎಂದು ಬರೆದುಕೊಂಡಿದ್ದಾರೆ.
ದೇವರಿಗೆ ಹರಕೆ ಕೊಡಲು ತಂದ ಟಗರು ಹಾಗೂ ಅದರ ಸುತ್ತ ನಡೆಯುವ ಘಟನೆಗಳನ್ನೇ ಸಿನಿಮಾ ಮಾಡಲಾಗಿದೆ. ಸಿನಿಮಾವನ್ನು ಉಮೇಶ್ ಕೆ ಕೃಪಾ ನಿರ್ದೇಶನ ಮಾಡಿದ್ದು, ಟ್ರೇಲರ್ ಅಂತೂ ಸಖತ್ ಲೈವ್ಲಿ ಲವ್ಲಿಯಾಗಿದೆ. ಪುಟ್ಟ ಪಾತ್ರದಲ್ಲೂ ಕಾಣಿಸಿಕೊಂಡಿರೋ ಸಂಗೀತ ನಿರ್ದೇಶಕ ವಾಸುಕಿ ವೈಭವ್, ಈ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ಕೆಲವು ಹಾಡುಗಳನ್ನು ಡಾಲಿ ಧನಂಜಯ್ ಅವರೇ ಬರೆದಿದ್ದಾರೆ.



