ಖಾಸಗಿ ಸಾರಿಗೆ ಬಸ್, ಕಾರು, ಟ್ಯಾಕ್ಸಿ, ಆಟೋ.. (Private bus, taxi, auto) ಸೇರಿದಂತೆ ಎಲ್ಲರೂ ಸೆಪ್ಟೆಂಬರ್ 11ರಂದು ಬಂದ್`ಗೆ (September 11 bundh) ಕರೆ ಕೊಟ್ಟಿದ್ದಾರೆ. ಈ ಹಿಂದೆ ಕಳೆದ ತಿಂಗಳು ಬಂದ್`ಗೆ ಕರೆ ಕೊಟ್ಟಿದ್ದರಾದರೂ.. ನಂತರ ಸರ್ಕಾರದ ಮನವಿಯ ಮೇರೆಗೆ ವಾಪಸ್ ತೆಗೆದುಕೊಂಡಿದ್ದವು. ಆದರೆ ಆಗ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿರುವ ಖಾಸಗಿ ಸಂಘಟನೆಗಳ ಒಕ್ಕೂಟ ಮತ್ತೆ ಬಂದ್`ಗೆ (September 11 bundh) ಕರೆ ಕೊಟ್ಟಿದೆ. ಆದರೆ ಸರ್ಕಾರ ಏನ್ ಬೇಕಾದ್ರೂ ಮಾಡ್ಕೊಳಿ, ನಾವ್ ಕೇರ್ ಮಾಡಲ್ಲ ಅನ್ನೋ ಉತ್ತರ ಕೊಟ್ಟಿದೆ.
ಖಾಸಗಿ ಸಾರಿಗೆ ಉದ್ಯಮದ ಸಮಸ್ಯೆ ನಿವಾರಿಸಲು ಆಗಸ್ಟ್ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕರೆದಿದ್ದ ಸಭೆಯನ್ನು ಬಹಿಷ್ಕರಿಸಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು (September 11 bundh)ಸೆ.11ರಂದು ಬೆಂಗಳೂರು ಬಂದ್ಗೆ ಕರೆ ನೀಡಿರುವುದು ಸರಿಯಲ್ಲ. ಹೀಗಾಗಿ ಮತ್ತೆ ಅವರನ್ನು ಮಾತುಕತೆಗೆ ಕರೆಯುವ ಪ್ರಶ್ನೆಯೇ ಇಲ್ಲ. ಬದಲಿಗೆ ಬಂದ್ ವೇಳೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Transport minister Ramalinga reddy) ತಿಳಿಸಿದ್ದಾರೆ.
ಕ್ಕೂಟದಲ್ಲಿನ 30ಕ್ಕೂ ಹೆಚ್ಚಿನ ಸಂಘಗಳ ಪ್ರಮುಖರನ್ನು ಕರೆದು ಸಭೆಯನ್ನೂ ಮಾಡಲಾಗಿತ್ತು. ಅದಾದ ನಂತರ ಆಗಸ್ಟ್ 21ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತೀರ್ಮಾನಿಸಿ, ಒಕ್ಕೂಟದಲ್ಲಿನ 10 ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಿದ್ದೆವು. ಆದರೆ, ಬಂದ್ಗೆ ಕರೆ ನೀಡಿರುವ ಒಕ್ಕೂಟ ಸಭೆಯನ್ನು ಬಹಿಷ್ಕರಿಸಿ, ಸಿಎಂಗೆ ಅವಮಾನ ಮಾಡಿತ್ತು ಎನ್ನುವುದು ಸಾರಿಗೆ ಸಚಿವ (Transport minister Ramalinga reddy) ರಾಮಲಿಂಗಾ ರೆಡ್ಡಿ ವಾದ.
ಸೆ. 11ರಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರಿಗೆ ಸಮಸ್ಯೆ ಉದ್ಭವವಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿರುವ ರಾಮಲಿಂಗ ರೆಡ್ಡಿ (Transport minister Ramalinga reddy), ಖಾಸಗಿ ಬಸ್ಗಳಿಗೆ ಶಕ್ತಿ ಯೋಜನೆ (Shakthi scheme) ವಿಸ್ತರಣೆ, ಜೀವಿತಾವಧಿ ತೆರಿಗೆ ಪಾವತಿಗೆ ಹಿಂದಿನ ವ್ಯವಸ್ಥೆ ಜಾರಿಗೊಳಿಸುವುದು, ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ಧರಿಸಬೇಕಿದ್ದು, ಆ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ರಾರಯಪಿಡೋ, ಓಲಾ, ಉಬರ್ ಸೇರಿದಂತೆ ಇನ್ನಿತರ ಆ್ಯಪ್ ಆಧಾರಿತ ಅಗ್ರಿಗೇಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಸಾರಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಲಿಖಿತವಾಗಿ ದೂರು ಕೊಡಬೇಕು ಹಾಗೂ ದಾಖಲೆಗಳನ್ನು ಕೊಡಬೇಕು. ಇಲ್ಲದಿದ್ದರೆ ಏನೂ ಮಾಡೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಮಾತುಕತೆಯ ಬಾಗಿಲನ್ನು ಓಪನ್ ಇಟ್ಟುಕೊಂಡಿದೆ. ಆದರೆ ಖಾಸಗಿಯವರೇ ಹೋಗಬೇಕು. ಸರ್ಕಾರದವರು ಕರೆಯೋದಿಲ್ಲ. ಕಷ್ಟ ಹೇಳ್ಕೋಬೇಕು. ಪರಿಹಾರದ ಗ್ಯಾರಂಟಿಯಂತೂ ಸದ್ಯಕ್ಕಿಲ್ಲ. ಕಾಯಬೇಕು. ತಾಳ್ಮವಹಿಸಬೇಕು.



