ಸಿಎಂ ಯೋಗಿ ಆದಿತ್ಯನಾಥ್ (CM Yogi Adithyanath) ಹಲವು ವಿಷಯಗಳಲ್ಲಿ ರೋಲ್ ಮಾಡೆಲ್. ಅವರು ಸನ್ಯಾಸಿಯಷ್ಟೇ ಅಲ್ಲ, ತಮ್ಮ ಅಕ್ಕಪಕ್ಕದಲ್ಲಿಯೂ ರಕ್ತಸಂಬಂಧಿ, ಬಂಧುಗಳನ್ನು ಇಟ್ಟುಕೊಂಡಿಲ್ಲ. ಸನ್ಯಾಸಿಯಾಗಿದ್ದ ಯೋಗಿ (CM Yogi Adithyanath) ತಾಯಿಯ ಅಂತ್ಯಸಂಸ್ಕಾರವನ್ನು ದೂರದಲ್ಲಿ ನಿಂತುಕೊಂಡೇ ನೋಡಿ ಕಣ್ಣೀರಿಟ್ಟಿದ್ದರು. ಮತ್ತೆ ಮರುಕ್ಷಣವೇ ಕರ್ತವ್ಯಕ್ಕೆ ಹಾಜರಾಗಿದ್ದರು. ಯೋಗಿಯವರ ತಂಗಿ ಈಗಲೂ ಉತ್ತರಾಖಂಡ್‍ನಲ್ಲಿ ಪುಟ್ಟದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದಾರೆ. ಇನ್ನು ಯೋಗಿ ಅವರ ತಮ್ಮ ಸೈನ್ಯದಲ್ಲಿದ್ದಾರೆ. ಅವರಿಗೆ ಈಗ ಪ್ರಮೋಷನ್ ಸಿಕ್ಕಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adithyanath) ಅವರ ಸಹೋದರ ಶೈಲೇಂದ್ರ ಮೋಹನ್ ಅವರನ್ನು ಸುಬೇದಾರ್ ಮೇಜರ್ ಆಗಿ ಬಡ್ತಿ ನೀಡಲಾಗಿದೆ, ಇದು ಗರ್ವಾಲ್ ಸ್ಕೌಟ್ಸ್ ರೆಜಿಮೆಂಟ್ನಲ್ಲಿ ಅತ್ಯುನ್ನತ ನಿಯೋಜಿತವಲ್ಲದ ಅಧಿಕಾರಿ ಶ್ರೇಣಿಯಾಗಿದೆ. ಅಧಿಕಾರಿಗಳ ಪ್ರಕಾರ, ಸುಬೇದಾರ್ ಮೇಜರ್ ಶೈಲೇಂದ್ರ ಅವರು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC : Line of Actual control) ಸೇವೆ ಸಲ್ಲಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಮೂವರು ಸಹೋದರರಿದ್ದಾರೆ. ಮನ್ವೇಂದ್ರ ಮೋಹನ್ ಅವರ ಅಣ್ಣನಾಗಿದ್ದರೆ, ಶೈಲೇಂದ್ರ ಮತ್ತು ಮಹೇಂದ್ರ ಮೋಹನ್ ಅವರಿಗಿಂತ ಚಿಕ್ಕವರು. ಗರ್ವಾಲ್ ಸ್ಕೌಟ್ ಘಟಕವು ಆಯಕಟ್ಟಿನ ಬೆಟ್ಟದ ಗಡಿಗಳನ್ನು ಕಾವಲು ಮಾಡುವ ಸಲುವಾಗಿ ಸ್ಥಳೀಯ ಸೈನಿಕರನ್ನೇ ಪ್ರತ್ಯೇಕವಾಗಿ ನೇಮಿಸಿಕೊಳ್ಳುತ್ತದೆ. ಎದುರು ಭಾಗದಲ್ಲಿ ನೆಲೆಸಿರುವ ಚೀನೀ ಪಡೆಗಳಿಂದ ಹೆಚ್ಚುತ್ತಿರುವ ಒಳನುಸುಳುವಿಕೆಯ ಬೆದರಿಕೆಗಳಿಂದಾಗಿ ಈ ಗಡಿಗಳು ಪ್ರಾಮುಖ್ಯತೆಯನ್ನು ಹೊಂದಿದೆ.
ಯೋಗಿ ಆದಿತ್ಯನಾಥ್ ಸ್ವಾಮೀಜಿ (CM Yogi Adithyanath). ಸನ್ಯಾಸಿ. ಗೋರಕ್`ಪುರ ಮಠದ ಪೀಠಾಧಿಪಾತಿಯಾಗಿರುವ ಯೋಗಿ ಆದಿತ್ಯನಾಥ್ ನಾಥ ಪರಂಪರೆಯ ನಿಯಮಗಳಂತೆಯೇ ಬದುಕುತ್ತಿದ್ದಾರೆ. ಸನ್ಯಾಸಿಯಾಗಿ ಸಂಸಾರ ಬಂಧನಗಳಿಂದ ಮುಕ್ತವಾಗಿರುವ ಯೋಗಿ, ಪೂರ್ವಾರ್ಶಶ್ರಮದವರ ಜೊತೆ ಪರಿಚಯ ಇಟ್ಟುಕೊಂಡಿದ್ದಾರೆಯೆ ಹೊರತು, ಸಂಬಂಧವನ್ನಲ್ಲ.
ಅವರು ಸಿಎಂ ಆದ ಹೊದರಲ್ಲಿ ಒಮ್ಮೆ ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಮಾಡಿದ್ದೆ ಎಂದು ಹೇಳಿಕೊಂಡಿದ್ದರು. ತಾನಷ್ಟೇ ಅಲ್ಲ, ತನ್ನ ಅಣ್ಣನೂ ರಾಷ್ಟ್ರಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ ಎಂದು ಅಣ್ಣ ಯೋಗಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ಶೈಲೇಂದ್ರ ಮೋಹನ್. ಶೈಲೇಂದ್ರ ಹಾಗೂ ಯೋಗಿ ಅವರನ್ನು ಇಡೀ ಕುಟುಂಬದವರು ಹೆಮ್ಮೆಯಿಂದ ಹೇಳಿಕೊಳ್ತಾರಂತೆ ಎಂದಿದ್ದರು ಶೈಲೇಂದ್ರ. ಅಂದಹಾಗೆ ಶೈಲೇಂದ್ರ ಅವರು ತಮ್ಮ ಅಣ್ಣನನ್ನು ಕರೆಯುವುದು ಮಹಾರಾಜ್ ಜೀ ಅಂತ.
ಇತ್ತೀಚೆಗೆ ಯೋಗಿ ಆದಿತ್ಯನಾಥ್ ಅವರ ತಂಗಿಯಿದ್ದ ಅಂಗಡಿಗೆ ಆಕಸ್ಮಿಕವಾಗಿ ಮೋದಿಯವರ ತಂಗಿಯೂ ಭೇಟಿ ಕೊಟ್ಟಿದ್ದರು. ನೀಲಕಂಠ ಧಾಮಕ್ಕೆ ಹೋಗುವ ಹಾದಿಯಲ್ಲಿ ನರೇಂದ್ರ ಮೋದಿ ಅವರ ಸಹೋದರಿ ವಾಸಂತಿ ಬೆನ್ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ದೇವಿ ಅವರನ್ನು ಭೇಟಿಯಾಗಿದ್ದು ಭಾರಿ ಸುದ್ದಿಯಾಗಿತ್ತು. , ವಾಸಂತಿ ಬೆನ್ ಅವರು ತಮ್ಮ ಪತಿ ಹಂಸ್ಮುಖ್ ಮತ್ತು ಕೆಲವು ಸಂಬಂಧಿಕರೊಂದಿಗೆ ಋಷಿಕೇಶಕ್ಕೆ ಖಾಸಗಿ ಭೇಟಿ ನೀಡಿದ್ದರು. ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಅವರು ಶಶಿದೇವಿ ಅವರ ಮಾ ಭುವನೇಶ್ವರಿ ಪ್ರಸಾದ್ ಭಂಡಾರ್ ಅಂಗಡಿಯಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುವ ಅವಕಾಶವನ್ನು ಪಡೆದರು. ಶಶಿದೇವಿಯವರ ಪತಿ ಜೈ ಶ್ರೀ ಗುರು ಗೋರಕ್ಷನಾಥ್ ಜೀ ಹೆಸರಿನ ಸಣ್ಣ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.



