ಡಿಸಿಎಂ ಡಿಕೆ ಶಿವಕುಮಾರ್ ಅವರದ್ದೊಂದು ಟೀಂ ಆಕ್ಟಿವ್ ಅಗಿ ದೆಹಲಿಗೆ ತೆರಳಿರುವ ನಡುವೆಯೇ, ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ನಾಯಕರು ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಡಿಸಿಎಂ ಪರ ನೇತೃತ್ವ ವಹಿಸಿರುವುದು ಚೆಲುವರಾಯ ಸ್ವಾಮಿ ಅವರಾದರೆ.. ಸಿಎಂ ಪರ ನೇತೃತ್ವ ವಹಿಸಿರುವುದು ಸತೀಶ್ ಜಾರಕಿಹೊಳಿ. ಮಿಸ್ ಹೊಡೆಯುತ್ತಿರುವುದು ಸಚಿವ ಜಮೀರ್ ಅಹ್ಮದ್ ಅನುಪಸ್ಥಿತಿ.
ಖರ್ಗೆ ಜೊತೆ ಡಿಸಿಎಂ ಟೀಂ 10 ನಿಮಿಷ ಮೀಟಿಂಗ್ :
ದೆಹೆಲಿಯಲ್ಲಿ ಮಲ್ಲಿಕಾರ್ಜುನ ಭೇಟಿಗೆ ಆಗಮಿಸಿದ್ದ ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರಾದ ಆನೇಕಲ್ ಶಿವಣ್ಣ, ರಾಜೇಗೌಡ, ವಾಸು, ರಂಗನಾಥ್, ನೆಲಮಂಗಲ ಶಾಸಕ ಶ್ರೀನಿವಾಸ್, ಗುಬ್ಬಿ ಶಾಸಕ ಶ್ರೀನಿವಾಸ್, ಎಮ್ ಎಲ್ ಸಿ ರವಿ ಸೇರಿದಂತೆ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೀಟ್ ಮಾಡಿದ್ದಾರೆ. ಆದರೆ ಕೇವಲ 10 ನಿಮಿಷ ಮಾತ್ರ ಚರ್ಚೆ ನಡೆದಿದೆ. ಪ್ರಾಮಾಣಿಕವಾಗಿ ಸೋನಿಯಾ ಭೇಟಿಗೆ ಪ್ರಯತ್ನ ಪಡ್ತಾ ಇದ್ದಾರಂತೆ ಮಲ್ಲಿಕಾರ್ಜುನ ಖರ್ಗೆ. ಕೆಲವು ಶಾಸಕರು ಬಹಿರಂಗವಾಗಿ ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿದ್ದರೂ.. ಅಂತರಂಗದಲ್ಲಿ ಡಿಕೆ ಶಿವಕುಮಾರ್ ಪರ ಇದ್ದಾರಂತೆ. ಇಷ್ಟಾಗುತ್ತಿದ್ದಂತೆ ಸಿಎಂ ಬಣದ ಕೆಲವು ನಾಯಕರು ಆಕ್ಟಿವ್ ಆಗಿದ್ದಾರೆ.
ಸಾಹುಕಾರ್ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್
ಇತ್ತ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ದಲಿತ ಶಾಸಕರ ಡಿನ್ನರ್ ಮೀಟಿಂಗ್ ನಡೆಸಲಾಗಿದೆ. ದಲಿತ ಶಾಸಕರು ಮಹತ್ವದ ಸಭೆ ಸೇರಿದ್ದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗಾಳಿ ಬೀಸುತ್ತಿದೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವಂತಿದಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಮಹಾದೇವಪ್ಪ, ಮಾಜಿ ಸಚಿವ ಕೆ ಎನ್ ರಾಜಣ್ಣ, ಸಚಿವ ಮುನಿಯಪ್ಪ, ಸಚಿವ ದಿನೇಶ್ ಗುಂಡೂರಾವ್,ಎಸ್‌ಟಿ ಸಮುದಾಯ ಎನ್.ಟಿ ಶ್ರೀನಿವಾಸ್ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಒಂದುಗಂಟೆಯಿಂದ ದಲಿತ ನಾಯಕರು ಭಾರಿ ಚರ್ಚೆ ನಡೆಸಿದ್ದಾರೆ. ಊಟದ ಜೊತೆಗೆ ನಾಯಕರು ಚರ್ಚೆ ನಡೆಸಿದ್ದಾರೆ. ವಿಶೇಷ ಎಂದರೆ ಸಚಿವ ಸ್ಥಾನ ಕಳೆದುಕೊಂಡಿರುವ ಕೆಎನ್ ರಾಜಣ್ಣ ಈ ಸಭೆಗೆ ಹಾಜರಾಗಿರುವುದು. ಈ ಮೂಲಕ ನಾವು ರೇಸಿನಲ್ಲಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.
ಜಮೀರ್ ಅಹ್ಮದ್ ಎಲ್ಲಿ..?
ಸಚಿವ ಜಮೀರ್ ಅಹ್ಮದ್, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡವರು. ಇತ್ತೀಚೆಗೆ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ. 2028ಕ್ಕೆ ಬೇಕಾದರೆ ಡಿಕೆ ಶಿವಕುಮಾರ್ ಆಗಲಿ. ನಾವೇ ಗೆಲ್ಲಿಸ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರು ನಿವಾಸದ ಎದುರೇ ಹೇಳಿಕೆ ಕೊಟ್ಟಿದ್ದರು. ಆದರೆ.. ಆ ಹೇಳಿಕೆ ನಂತರ ಜಮೀರ್ ಅಹ್ಮದ್ ಮಿಸ್ಸಿಂಗ್. ಸಿದ್ದರಾಮಯ್ಯ ಪರ ನಡೆಯುತ್ತಿರುವ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಸಭೆಗಳಲ್ಲಿ ಜಮೀರ್ ಕಾಣುತ್ತಿಲ್ಲ. ಸಿದ್ದರಾಮಯ್ಯ ಹೇಳಿದ್ದಕ್ಕೆ ಆ ರೀತಿ ಹೇಳಿಕೆ ಕೊಟ್ಟಿದ್ದರಂತೆ ಜಮೀರ್. ಮುಂದೆ ಡಿಕೆ ಶಿವಕುಮಾರ್ ಸಿಎಂ ಆದರೆ.. ಭವಿಷ್ಯಕ್ಕೆ ತೊಂದರೆಯಾಗಬಹುದು ಎಂಬ ಕಾರಣದಿಂದ ಸಭೆಗಳಲ್ಲಿ ಪಾಲ್ಗೊಳ್ತಾ ಇಲ್ವಂತೆ.



