ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದಾಗಿ ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ಪಾರ್ವತಿ ಅವರನ್ನು ದಾಖಲು ಮಾಡಲಾಗಿದೆ. ಪಾರ್ವತಿ ಅವರಿಗೆ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಡಾ. ಬಿಸಿ ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಐಸಿಯುನಲ್ಲಿ ಪಾರ್ವತಿಗೆ ಚಿಕಿತ್ಸೆ ನೀಡುತ್ತಿದ್ದು ನಾಳೆಯವರೆಗೂ ನಿಗವಹಿಸಲು ಸೂಚಿಸಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯ ದೆಹಲಿಯಲ್ಲಿದ್ದವರು ದಿಢೀರನೆ ವಾಪಸ್ ಆಗುವುದಕ್ಕೆ ಪತ್ನಿ ಪಾರ್ವತಿಯವರ ಆರೋಗ್ಯ ಕೆಟ್ಟಿದ್ದು ಕೂಡಾ ಕಾರಣ. ಮಗ ಯತೀಂದ್ರ ಕೂಡಾ ಡಾಕ್ಟರ್. ತಾಯಿಯನ್ನು ಪಕ್ಕದಲ್ಲಿದ್ದುಕೊಂಡು ನೋಡಿಕೊಳ್ಳುತ್ತಿರುವುದು ಅವರೇ. ಪಾರ್ವತಿ ಅವರು ಸಿದ್ದರಾಮಯ್ಯ ಅವರ ಹಳೆಯ ಗೆಳೆಯರಿಗೆ ಚೆನ್ನಾಗಿ ಪರಿಚಯ ಇದ್ದವರು. ಹೀಗಾಗಿಯೇ ಸಿದ್ಧರಾಮಯ್ಯ ಅವರ ಹಳೆಯ ಫ್ರೆಂಡ್ಸ್ ದೀಢೀರನೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಆರೋಗ್ಯ ವಿಚಾರಿಸಿಕೊಂಡಿದ್ದಾರೆ.
ಪೋಲೋ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿ ಮಾತನಾಡಿ ಸಿಎಂ ಪತ್ನಿ ಅವರ ಆರೋಗ್ಯ ವಿಚಾರಿಸಲು ಬಂದೆ. ಯಾರನ್ನೂ ನೋಡಲು ಬಿಡ್ತಿಲ್ಲ. ಯತೀಂದ್ರ ಅವರನ್ನ ಮಾತಾಡಿಸಿದೆ. ಆರೋಗ್ಯವಾಗಿದ್ದಾರೆ ಏನೂ ಸಮಸ್ಯೆಯಿಲ್ಲ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಯಿಯವರ ಆರೋಗ್ಯ ಸ್ಥಿರವಾಗಿದೆ. ಉಸಿರಾಟದ ಸಮಸ್ಯೆಯಿಂದ ಅಡ್ಮಿಟ್ ಮಾಡಿದ್ವಿ. ಲಂಗ್ಸ್ ಅಲ್ಲಿ ನೀರು ತುಂಬಿಕೊಂಡಿತ್ತು. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆತಂಕ ಪಡುವಂತದ್ದೇನಿಲ್ಲ. ತಂದೆಯವರು ಸಹ ದೆಹಲಿಯಿಂದ ವಾಪಸ್ ಆದ ನಂತರ ಬರ್ತಾರೆ ಎಂದು ಯತೀಂದ್ರ ತಿಳಿಸಿರುವುದಾಗಿ ಶಾಸಕರು ಹೇಳಿದ್ದಾರೆ ಯತೀಂದ್ರ.



