ಆಗಸ್ಟ್ 1ನೇ ತಾರೀಕಿನಿಂದ ನಂದಿನಿ ಹಾಲಿನ ದರ (Nandini Milk) ಹೆಚ್ಚಳವಾಗಲಿದೆ. ಲೀಟರ್ ಹಾಲಿಗೆ 3 ರೂ.ನಂತೆ ಏರಿಕೆ ಮಾಡುವ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. (KMF) ಕೆಎಂಎಫ್ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದೆ.
ರೈತರು, ಒಕ್ಕೂಟದ ಬೇಡಿಕೆ (KMF) 5 ರೂ ಇತ್ತು. 3 ರೂ ಏರಿಕೆಗೆ ಅಸ್ತು ಎನ್ನಲಾಗಿದೆ. ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆ ಆಗಲಿದೆ. ದರ ಏರಿಕೆ ಹಣ ರೈತರಿಗೆ ತಲುಪಿಸುವ ವ್ಯವಸ್ಥೆ ಕೂಡ ಆಗಲಿದೆ (KMF) ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.
ಬೆಲೆ ಏರಿಕೆ ನಂತರ ಯಾವ್ಯಾವ ಮಾದರಿ ಹಾಲಿಗೆ ಎಷ್ಟೆಷ್ಟು ದರ ಇರಲಿದೆ?
(Nandini Milk) ಟೋನ್ಡ್ ಹಾಲಿನ (ನೀಲಿ ಪ್ಯಾಕೆಟ್) (toned milk) ದರ ಲೀಟರಿಗೆ ಈಗ 39 ರೂ. ಇದೆ. ಆಗಸ್ಟ್ ಒಂದರಿಂದ ಅದೇ ಟೋನ್ಡ್ ಹಾಲಿನ (toned milk) ದರ 42 ರೂ. ಆಗಲಿದೆ.
(Nandini Milk) ಹಸಿರು ಪ್ಯಾಕೆಟ್ ಹಾಲಿನ ದರ ಈಗ ಲೀಟರಿಗೆ 41 ರೂ. ಇದೆ. ಆಗಸ್ಟ್ 1ರಿಂದ ಆ ಹಾಲಿನ 44 ರೂ. ಆಗಲಿದೆ.
ಇನ್ನು (Nandini Milk) ಕೇಸರಿ ಪ್ಯಾಕೆಟ್ ಹಾಲು (ಶುಭಂ) ಲೀಟರಿಗೆ (Shubham milk) 45 ರೂ. ಇತ್ತು. ಈ ಹಾಲು ಇನ್ನು ಮುಂದೆ ಆಗಸ್ಟ್ 1ನೇ ತಾರೀಕಿನಿಂದ 48 ರೂ. ಆಗಲಿದೆ.
ಅರ್ಧ ಲೀಟರ್ ಪ್ರಾಬ್ಲಂ ಶುರು..!
ಎಚ್`ಸಿಎಂ ಗ್ರೀನ್ ಅರ್ಧ ಲೀಟರ್ ಹಾಲಿಗೆ 22 ರೂ. ಇತ್ತು. ಲೀಟರಿಗೆ 3 ರೂ. ಆದರೆ ಅರ್ಧ ಲೀಟರಿಗೆ ಒಂದೂವರೆ ರೂ. ಆಗಲಿದೆ. ಆಗ ಅರ್ಧ ಲೀಟರ್ ಪ್ಯಾಕೆಟ್`ಗೆ ಗ್ರಾಹಕರು 23 ರೂ. 50 ಪೈಸೆ ಕೊಡಬೇಕು. ಸಮೃದ್ಧಿ ಹಾಲು ಅರ್ಧ ಲೀಟರ್ ಬೇಕೆಂದರೆ ಈಗ 24 ರೂ. ಇದೆ. ಅರ್ಧ ಲೀಟರಿಗೆ ಇನ್ನು ಮುಂದೆ 25 ರೂ. 50 ಪೈಸೆ ಕೊಡಬೇಕು. ಅಲ್ಲಿಗೆ ಚಿಲ್ಲರೆ ಸಮಸ್ಯೆ, ಅಂಗಡಿಯವರು ರೌಂಡ್ ಬಿಲ್ ಮಾಡುವುದು ಶುರುವಾಗಲಿದೆ.
ರೈತರಿಗೆ (Farmers) ಲಾಭನಾ..? ಒಕ್ಕೂಟಕ್ಕೆ (KMF) ಲಾಭನಾ..?
ಹಾಲಿನ ದರ ಏರಿಕೆಯಿಂದಾಗಿ ಗ್ರಾಹಕರಿಗೆ ಹೊರೆ ಬೀಳುವುದಂತೂ ಫಿಕ್ಸ್. ಆದರೆ ಇದರ ಲಾಭ ರೈತರಿಗಾದರೂ ಸಿಗುತ್ತದೆಯೇ ಎಂದು ನೋಡಿದರೆ, ಭಾಗಶಃ ಹೌದು. ಶೇ.70ರಷ್ಟು ಹಣ ಹಾಲು ಕರೆಯುವವರಿಗೆ ಅಂದರೆ ರೈತರಿಗೆ ಹೋಗುತ್ತದೆ ಎನ್ನಲಾಗಿದೆ. ಸದ್ಯ ಕೆಎಂಎಫ್ ರೈತರಿಂದ 31.14 ರೂ. ಜತೆಗೆ ಸರ್ಕಾರದಿಂದ ಐದು ಪ್ರೋತ್ಸಾಹ ಧನ ಸೇರಿ 36 ರೂಪಾಯಿಗೆ ಖರೀದಿ ಮಾಡುತ್ತಿದೆ. ಇನ್ನು ಮುಂದೆ ಆಗಸ್ಟ್ 1ರ ನಂತರ ರೈತರಿಗೆ ಲೀಟರ್ ಹಾಲಿಗೆ 33 ರೂ. ಸಿಗಬಹುದು. (ಇದು ಹಾಲಿನ ಒಕ್ಕೂಟಗಳ ಲೆಕ್ಕಾಚಾರಕ್ಕೆ ತಕ್ಕಂತೆ ಬದಲಾಗಬಹುದು) ಉಳಿದ ಒಂದು ರೂ. ಹಣ ನೇರವಾಗಿ ಒಕ್ಕೂಟಗಳಿಗೆ ಸೇರಲಿದೆ ಎನ್ನಲಾಗಿದೆ.
ಪ್ರಸ್ತುತ ಕೆಎಂಎಫ್ (KMF) ಹಾಲಿನ ದರ ಹೆಚ್ಚಳದ ಬಗ್ಗೆ ಮಾತ್ರ ಪ್ರಸ್ತಾವನೆ ನೀಡಿತ್ತು. ಸಭೆಯ ಬಳಿಕವೂ ಎಲ್ಲಾ ಮಾದರಿಗಳ ಹಾಲು ದರ ಹೆಚ್ಚಳ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ಆದರೆ, ಮೊಸರು ಸೇರಿದಂತೆ ನಂದಿನಿಯ ಇತರೆ ಉತ್ಪನ್ನಗಳ ದರ ಹೆಚ್ಚಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ, ಹಾಲು ಹೊರತು ಪಡಿಸಿ ಇತರೆ ಉತ್ಪನ್ನ ದರ ಹೆಚ್ಚಳ ಅನುಮಾನ ಎನ್ನಲಾಗಿದೆ.
ಸಭೆಯಲ್ಲಿ ಕೆಎಂಎಫ್ (KMF) ಅಧ್ಯಕ್ಷ ಭೀಮಾ ನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಕೆಎಂಎಫ್ ನಿರ್ದೇಶಕ ಎಚ್.ಡಿ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಲೂರು ಶಾಸಕ ನಂಜೇಗೌಡರು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.



