ಚಿರಂಜೀವಿ ಸರ್ಜಾ (Chiranjeevi Sarja) ಮೃತಪಟ್ಟು ಆಗಲೇ 3 ವರ್ಷಗಳಾಯ್ತು. ಇದೀಗ ಅವರ ಅಭಿನಯದ ಸಿನಿಮಾ ರಿಲೀಸ್ ಆಗುವುದಕ್ಕೆ ಮುಹೂರ್ತ ಕೂಡಿ ಬಂದಿದೆ. ಒಂದು ಸಿನಿಮಾ ಮಾಡಿ ಅದನ್ನು ರಿಲೀಸ್ ಮಾಡುವುದಕ್ಕೆ ಒದ್ದಾಡುತ್ತಿರುವ ರಾಜಮಾರ್ತಾಂಡ ಚಿತ್ರ ತಂಡಕ್ಕೆ ಕೊನೆಗೆ ಹೆಲ್ಪ್ ಮಾಡಿದ್ದು ಧ್ರುವ ಸರ್ಜಾ ಅವರೇ. ಡಬ್ಬಿಂಗ್ ಮಾಡಿಕೊಟ್ಟು, ಪ್ರಚಾರಕ್ಕೂ ಬರಲು ಒಪ್ಪಿದ್ದಾರಂತೆ ಧ್ರುವ ಸರ್ಜಾ(Dhruva Sarja) . ಅದು ಕೇವಲ ಅಣ್ಣನ ಮೇಲಿನ ಪ್ರೀತಿಗಾಗಿ.
ಚಿರಂಜೀವಿ ಸರ್ಜಾ (Chiranjeevi Sarja) ನಟನೆಯ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ (Raja marthanda) ಈಗ ಬಿಡುಗಡೆಗೆ ಸಿದ್ಧವಾಗಿದೆ. ರಾಜ ಮಾರ್ತಾಂಡದಲ್ಲಿ ಚಿರಂಜೀವಿ ಸರ್ಜಾ (Chiranjeevi Sarja) ನಾಯಕನಾಗಿ ಅಭಿನಯಿಸಿದ್ದರು. ತಮ್ಮ ಭಾಗದ ಚಿತ್ರೀಕರಣವನ್ನು ಚಿರಂಜೀವಿ ಸರ್ಜಾ ಮುಗಿಸಿಕೊಟ್ಟಿದ್ದರು. ಆದರೆ, ಡಬ್ಬಿಂಗ್ ಪಾತ್ರ ಪೂರ್ಣಗೊಂಡಿರಲಿಲ್ಲ. ಚಿರಂಜೀವಿ ಸರ್ಜಾ (Chiranjeevi Sarja) ನಿಧನದ ಬಳಿಕ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ (Dhruva Sarja) ಧ್ವನಿ ನೀಡಿದರು. ಇದೀಗ ರಾಜ ಮಾರ್ತಾಂಡ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ.
‘ರಾಜ ಮಾರ್ತಾಂಡ’ ಸಿನಿಮಾದ ಟ್ರೇಲರ್ ಅನ್ನು ಜೂನಿಯರ್ ಚಿರು (ರಾಯನ್ ರಾಜ್ ಸರ್ಜಾ) (Rayan Sarja) ಕೈಯಿಂದ ರಿಲೀಸ್ ಮಾಡಿಸಲಾಗಿತ್ತು. ಇದೀಗ ಸಿನಿಮಾವನ್ನು ಧ್ರುವ ಸರ್ಜಾ (Dhruva Sarja) ಅವರ ಹುಟ್ಟುಹಬ್ಬದಂದು ಅಕ್ಟೋಬರ್ 6ಕ್ಕೆ ರಿಲೀಸ್ ಮಾಡೋ ಪ್ಲಾನ್ ಇದೆ.
ಶಿವಕುಮಾರ್ ಅವರು ನಿರ್ಮಿಸಿರುವ, ರಾಮನಾರಾಯಣ್ ನಿರ್ದೇಶಿಸಿರುವ ‘ರಾಜ ಮಾರ್ತಾಂಡ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ (Chiranjeevi Sarja) ಅವರಿಗೆ ನಾಯಕಿಯಾಗಿ ದೀಪ್ತಿ ಸಾತಿ (Actress Deepthi), ಮೇಘಶ್ರೀ (Actress Meghashree) , ಟಗರು ಸರೋಜಾ (Tagaru fame) ಖ್ಯಾತಿಯ ತ್ರಿವೇಣಿ (Actress Thriveni) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವತ್ಥ್ ಮುಂತಾದವರು ಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಎಲ್ಲ ಓಕೆ, ಆದರೆ ಚಿರಂಜೀವಿ ಸರ್ಜಾ ಮೃತಪಟ್ಟು 3 ವರ್ಷಗಳಾಗಿವೆ. ಚಿರು ಮೃತಪಟ್ಟಾಗಲೇ ಎಲ್ಲ ಕಂಪ್ಲೀಟ್ ಆಗಿ ಡಬ್ಬಿಂಗ್ ಬಾಕಿ ಇತ್ತು. ಅದನ್ನು ಆಗಲೇ ಮುಗಿಸಿಕೊಂಡು ಒಂದ್ ಮೂರು ತಿಂಗಳಲ್ಲಿ ರಿಲೀಸ್ ಆಗಿದ್ದರೆ ನಿರ್ಮಾಪಕರಿಗೂ ಲಾಭವಾಗುತ್ತಿತ್ತು. ಅಭಿಮಾನಿಗಳಿಗೂ ಸಮಾಧಾನವಾಗುತ್ತಿತ್ತು. ಈಗ ಈ ಮೂರು ವರ್ಷದಲ್ಲಿ ಆ ನೋವಿನಿಂದ, ಆಘಾತದಿಂದ ಕುಟುಂಬವೇ ಹೊರ ಬಂದಿದೆ. ಈಗ ರಾಜಮಾರ್ತಾಂಡ ರಿಲೀಸ್ ಆಗುತ್ತಿದೆ.



