ಅಪ್ಪ ಅಮ್ಮ ಇಲ್ಲದ ಸಮಯದಲ್ಲಿ ಮನೆಗೇ ನುಗ್ತಾರೆ. ಮಕ್ಕಳನ್ನು ಹೆದರಿಸಿ ವಿಷ ಕುಡಿಸ್ತಾರೆ. ಯಾರೂ.. ಏನೂ.. ಗೊತ್ತಾಗಲ್ಲ. ಓಡಿ ಹೋಗ್ತಾರೆ. ಇಂತಹ ಎರಡು ಘಟನೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದ್ದು, ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ. (Children poisoned by unknown criminals) ಅದೃಷ್ಟವಶಾತ್ ಇಬ್ಬರೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಬೆಂಗಳೂರಿನ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ 01 : ಬೆಂಗಳೂರು ಗ್ರಾಮಾಂತರ (Benaluru Rural) ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ದೊಡ್ಡಸಣ್ಣೆ ಗ್ರಾಮದ ಅಶೋಕ್ ಮತ್ತು ಶಿಲ್ಪಾ ದಂಪತಿ ನೆನ್ನೆ ಬೆಳಗ್ಗೆ ನಿದ್ದೆಯೆದ್ದವರೆ ಕೆಲಸಕ್ಕೆ ಅಂತ ತಮ್ಮ ಹೂತೋಟಕ್ಕೆ ತೆರಳಿದ್ದಾರೆ. ಇತ್ತ ಪೋಷಕರು ತೋಟದ ಕಡೆ ತೆರಳುತ್ತಿದ್ದಂತೆ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯಲ್ಲಿದ್ದ ಪಲ್ಲವಿಯನ್ನ ಹೆದರಿಸಿ ವಿಷದ ಬಾಟಲ್ ಅನ್ನ ಕುಡಿಸಿ ಎಸ್ಕೇಪ್ ಆಗಿದ್ದರು. (Children poisoned by unknown criminals)
ಘಟನೆ 02 : ಮೊದಲ ಘಟನೆ ನಡೆದು ಸುಧಾರಿಸಿಕೊಳ್ಳುವ ಮುನ್ನವೇ, ಮಾರನೇ ದಿನವೇ (Pallavi) ಪಲ್ಲವಿ ಚಿಕ್ಕಪ್ಪನ ಮಗಳು (Anusha) ಅನುಷಾಳಿಗೂ ಇದೇ ರೀತಿ ಹೆದರಿಸಿ ವಿಷ ಕುಡಿಸಿ ಎಸ್ಕೇಪ್ ಆಗಿದ್ದಾರೆ ಕ್ರಿಮಿನಲ್ಸ್. ದುಷ್ಟರು ಓಡಿಹೋದ ಮೇಲೆ ಮಕ್ಕಳು ಕೂಗಿಕೊಂಡಿದ್ದು, ವಿಷಯ ಹೇಳಿದ್ದಾರೆ. ಯಾರಾದ್ರಾ ಮಕ್ಕಳಿಗೆ ವಿಷ ಹಾಕ್ತಾರಾ.. ಎಂದು ಮೊದಲು ಮಕ್ಕಳನ್ನೇ ಸಂಶಯಿಸಿದ್ದಾರೆ ಗ್ರಾಮಸ್ಥರು. ಆನಂತರ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಆ ನಂತರವೇ ವಿಷಪ್ರಾಶನ ಬೆಳಕಿಗೆ ಬಂದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಪಲ್ಲವಿಗೆ ವಿಷ ಕುಡಿಸಿದ ಬಳಿಕ ಪೊಲೀಸ್ ಕಂಪ್ಲೇಂಟ್ ಆಗಿತ್ತು. ಆದರೆ ಆರೋಪಿಗಳಿಗೆ ಭಯವೇ ಇಲ್ಲ. ಮರುದಿನವೇ ಅನುಷಾಳಿಗೆ ವಿಷ ಕುಡಿಸಿದ್ದಾರೆ. ಕುಡಿಯದಿದ್ದರೆ ಕೊಲ್ಲುತ್ತೇವೆ ಎಂದು ಮಣಿಕಟ್ಟಿನ ನರದ ಬಳಿ ಚಾಕುವಿನಿಂದ ಕತ್ತರಿಸಿದ್ದಾರೆ.
ಏನಿರಬಹುದು ಹಿಂದಿನ ಕಥೆ?
ಪಲ್ಲವಿ ತಾಯಿ ಶಿಲ್ಪ ಗ್ರಾಮ ಪಂಚಾಯಿತಿ ಸದಸ್ಯೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿ ಗೆಲ್ಲಿಸಿದ್ದರಂತೆ. ಪೊಲೀಸರಿಗೆ ಇನ್ನು ಆರೋಪಿಗಳೂ ಸಿಕ್ಕಿಲ್ಲ. ಸಾಕ್ಷ್ಯವೂ ಸಿಕ್ಕಿಲ್ಲ. ಸಾಕ್ಷ್ಯ ಸಿಕ್ಕರೂ ತನಿಖೆ ಒಂದು ಹಂತಕ್ಕೆ ಬಂದ ಮೇಲೆಯೇ ಹೇಳುವುದು. ಸದ್ಯಕ್ಕೆ ಇದು ಸಂಶಯವಷ್ಟೇ.
ವೈಯುಕ್ತಿಕ ದ್ವೇಷಗಳಿದಲ್ಲಿ ನೇರ ನೇರವಾಗಿ ಗುದ್ದಾಡುವುದನ್ನ ಬಿಟ್ಟು ಮನೆಯಲ್ಲಿದ್ದ ಮಕ್ಕಳಿಗೆ ವಿಷ ಕುಡಿಸಿ ಅಮಾನವೀಯವಾಗಿ ನಡೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸ. ಆದರೆ ಘಟನೆಯ ನಂತರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಮಕ್ಕಳನ್ನು ಮನೆಯಿಂದ ಹೊರಗೇ ಕಳಿಸುತ್ತಿಲ್ಲವಂತೆ.



