ಸ್ವೀಟು ತಿನ್ನಬೇಡಿ. ಕೆಮಿಕಲ್ ಹಾಕ್ತಾರೆ. ಪಾನಿಪೂರಿ, ಗೋಬಿಯಲ್ಲೂ ಕೆಮಿಕಲ್ ಹಾಕ್ತಾರೆ. ದೋಸೆ, ಬೋಂಡಾಗಳಲ್ಲಿ ಕೆಟ್ಟ ಆಯಿಲ್ ಬಳಸ್ತಾರೆ. ಕೇಕು, ಮೈಸೂರು ಪಾಕ್.. ಯಾವುದೂ ಸೇಫ್ ಅಲ್ಲ. ಹೀಗಿರೋವಾಗ ಯಾವುದನ್ನು ತಿನ್ನಬೇಕುಕ ಎಂದು ಜನ ಗೊಂದಲದಲ್ಲಿರೋವಾಗ್ಲೇ ಈ ಕೆಮಿಕಲ್ ಭಯ ಖಾರಾ, ಮಿಕ್ಚರಿಗೂ ಬಂದಿದೆ.
ಖಾರ ತಿಂಡಿ ತಿನಿಸುಗಳಿಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಧೃಡಪಟ್ಟಿದೆ. ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ಪರೀಕ್ಷೆಯಲ್ಲಿ ಸಾಬೀತಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವರದಿ ಸಲ್ಲಿಸಲಾಗಿದ್ದು, ಮಿಕ್ಚರ್ ಸೇರಿ ಖಾರಾ ತಿಂಡಿಗಳಲ್ಲೂ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ತಕ ಬಣ್ಣ ಬಳಕೆ ಧೃಡವಾಗಿರುವ ಹಿನ್ನೆಲೆ ಕ್ರಮಕ್ಕೆ ಮುಂದಾಗಿದೆ ಸರ್ಕಾರ.
ಆಹಾರ ಪದಾರ್ಥಗಳಲ್ಲಿ ಅಸುರಕ್ಷಿತ ಹಾಗೂ ನಿಷೇಧಿತ ಕೃತಕ ಬಣ್ಣಗಳ ಬಳಕೆ ಪತ್ತೆಗೆ ಸಂಬಂಧಿಸಿದಂತೆ ಅಭಿಯಾನವನ್ನು ಕರ್ನಾಟಕದ ಸರ್ಕಾರದ ಆರೋಗ್ಯ ಇಲಾಖೆ ನಡೆಸುತ್ತಿದೆ. 2024–25 ಹಾಗೂ 2025-–26ನೇ ಸಾಲಿಗೆ 19 ಅಭಿಯಾನಗಳನ್ನು ಇಲಾಖೆ ನಡೆಸಿದೆ. ವಿವಿಧ ಆಹಾರ ತಿನಿಸುಗಳ ಸಾವಿರಾರು ಮಾದರಿಗಳನ್ನು ಸಂಗ್ರಹಿಸಿದೆ . ಈ ಮಾದರಿಗಳನ್ನು ಇಲಾಖೆಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ಅಸುರಕ್ಷಿತ ಮಾದರಿಗಳನ್ನು ಪತ್ತೆ ಮಾಡಲಾಗಿದೆ. ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಕೃತಕ ಬಣ್ಣ ಬಳಕೆ ಮಾಡಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. 2014ರ ಫೆಬ್ರವರಿ ತಿಂಗಳಿಂದ ಈ ವಿಶೇಷ ಅಭಿಯಾನ ಪ್ರಾರಂಭವಾಗಿದೆ. 2025ರ ಮೇ ಅಂತ್ಯದ ವೇಳೆಗೆ 19 ಬಗೆಯ ತಿನಿಸು ಹಾಗೂ ಪಾನೀಯಗಳ 3,787 ಮಾದರಿಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಮಾದರಿಗಳನ್ನು ಬೀದಿ ಬದಿ ಆಹಾರದ ಮಳಿಗೆಗಳು ಹಾಗೂ ಹೋಟೆಲ್‌ಗಳಿಂದ ಸಂಗ್ರಹಿಸಲಾಗಿತ್ತು. ಇವುಗಳಲ್ಲಿ 374 ಮಾದರಿಗಳು ಅಸುರಕ್ಷಿತವೆಂಬ ವರದಿಗಳು ಬಂದಿವೆ. ಜಿಲೇಬಿ, ಕೇಕ್, ಖೋವಾ, ಚಟ್ನಿಗಳು, ಸಾಸ್‌ಗಳು, ಕಬಾಬ್ ಪರೀಕ್ಷೆ ಮಾಡಲಾಗಿದೆ. ಶರಬತ್ತು, ಐಸ್‌ಕ್ರೀಂ, ಹಣ್ಣಿನ ಜ್ಯೂಸ್‌ಗಳು, ತಂಪು ಪಾನೀಯಗಳ ಮಾದರಿಗಳನ್ನೂ ಸಂಗ್ರಹಿಸಿ, ವಿಶ್ಲೇಷಣೆ ಮಾಡಲಾಗಿದೆ. ಗೋಬಿ ಮಂಚೂರಿ ಮತ್ತು ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿರ್ಬಂಧಿಸಿ ಆದೇಶ. ಬಾಂಬೆ ಮಿಠಾಯಿಗಳಿಗೆ ಸಹ ಕೃತಕ ಬಣ್ಣ ಬಳಕೆ ನಿರ್ಬಂಧಿಸಿ, ಆದೇಶ ಹೊರಡಿಸಿದೆ.



