ಕೇರಳದ ಕೋಯಿಕ್ಕೋಡ್ನಲ್ಲಿ ರಾಧಾಕೃಷ್ಣನ್ ಎಂಬ ಯುವಕ ವಾಟ್ಸಪ್ ಮೋಸದಿಂದ (Whats app) 40 ಸಾವಿರ ಕಳೆದುಕೊಂಡಿದ್ದಾನೆ. ವಿಚಿತ್ರವೆಂದರೆ ಈತ (Whats app video call) ವಿಡಿಯೋ ಕಾಲ್ನಲ್ಲಿ ಮಾತನಾಡಿ, 40 ಸಾವಿರ ಹಣ ಕಳೆದುಕೊಂಡಿದ್ದಾನೆ ಎನ್ನುವುದು. ರಾಧಾಕೃಷ್ಣನ್ ವ್ಯಾಟ್ಸ್ಆ್ಯಪ್ಗೆ (Whats app) ಅಪರಿಚಿತ ನಂಬರ್ನಿಂದ ಒಂದು ವಿಡಿಯೋ ಕಾಲ್ (Whats app Video call) ಬಂದಿದೆ. ವಿಡಿಯೋ ಕಾಲ್ನಲ್ಲಿ ಇದ್ದದ್ದು ಆತನ ಸಹೋದ್ಯೋಗಿ. ಆತ ತನಗೆ ಅರ್ಜೆಂಟ್ ಇದೆ ಎಂದು ಹೇಳಿ 40 ಸಾವಿರ ಹಣ ಕೇಳಿದ್ದಾನೆ. ಈತ ಟ್ರಾನ್ಸ್ಫರ್ ಮಾಡಿದ್ದಾನೆ. ಆದರೆ.. ವಿಚಿತ್ರ ಆದರೂ ಸತ್ಯವೇನು ಗೊತ್ತೇ.. ಕಾಲ್ ಮಾಡಿದ್ದವನು ಆತನ ಸಹೋದ್ಯೋಗಿ ಅಲ್ಲ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಮೂಲಕ ಸೃಷ್ಟಿಸಿದ್ದ ಒಂದು ಗೊಂಬೆ.
ಡೀಪ್ಫೇಕ್ ಸ್ಕಾಮ್ (Deep Fake Scam) ಮೂಲಕ ಸಹೋದ್ಯೋಗಿಯನ್ನು ಹೋಲುವ ಕೃತಕ ವ್ಯಕ್ತಿಯನ್ನು ಸೃಷ್ಟಿಸಿ, ವಿಡಿಯೋ ಕಾಲ್ ಮಾಡಿ ಹಣ ದೋಚಿದ್ದಾರೆ ಖದೀಮರು.
ಕರೆ ಮಾಡಿದ್ದ ವ್ಯಕ್ತಿ ಅಂದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelegence) ವ್ಯಕ್ತಿ ರಾಧಾಕೃಷ್ಣನ್ ಕೆಲ ಸಹದ್ಯೋಗಿಗಳ ಹೆಸರನ್ನು ಹೇಳಿದ್ದನಂತೆ. ಈ ಮೂಲಕ ರಾಧಾಕೃಷ್ಣನ್ ವಿಶ್ವಾಸ ಪಡೆದುಕೊಂಡಿದ್ದಾನೆ. ನಂತರ ಆಪ್ತರೊಬ್ಬರು ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ, ಅರ್ಜೆಂಟ್ ಎಂದು ಒಂದು ಅಕೌಂಟ್ ನಂಬರ್ ಕೊಟ್ಟಿದ್ದಾನೆ. ಮಾತನಾಡುತ್ತಿರುವುದು ತನ್ನ ಮಿತ್ರನೇ ಎಂದುಕೊಂಡ ರಾಧಾಕೃಷ್ಣನ್ ಹಣ ಹಾಕಿದ್ದಾನೆ. ಹಣ ಸ್ವೀಕರಿಸಿದ ವಂಚಕ, ಧನ್ಯವಾದಗಳು ಎಂದು ಸಂದೇಶ ಹಾಕಿದ್ದಾನೆ.
ಅದಾದ ನಂತರ ಮತ್ತೊಂದು ವಿಡಿಯೋ ಕಾಲ್ ಬಂದಿದೆ. ಕರೆ ಸ್ವೀಕರಿಸಿದ ರಾಧಾಕೃಷ್ಣನ್ಗೆ ಮಾತು, ಮುಖಚರ್ಯೆ ಏನೋ ವ್ಯತ್ಯಾಸವಿದೆಯಲ್ಲ ಎನ್ನಿಸಿದೆ. ಮಾತಿನ ನಡುವೆ 35,000 ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಈ ವೇಳೆ ಅನುಮಾನ ಹೆಚ್ಚಾಗಿದೆ. ಹೀಗಾಗಿ ತನ್ನ ಬಳಿ ಇದ್ದ ಮಾಜಿ ಸಹದ್ಯೋಗಿ ಹಳೆ ನಂಬರ್ಗೆ ಕರೆ ಮಾಡಿದ್ದಾನೆ. ಈ ವೇಳೆ ತಾನು ಮೋಸಹೋಗಿರುವುದು ರಾಧಾಕೃಷ್ಣನ್ಗೆ ಅರಿವಾಗಿದೆ. ಈ ಕುರಿತು ರಾಧಾಕೃಷ್ಣನ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ ಈ ರೀತಿಯ ಚೀಟಿಂಗ್ಗೆ ವಂಚಕ ಬಳಸಿರುವುದು ಡೀಪ್ಫೇಕ್ ಸ್ಕಾಮ್.
ಏನಿದು ಡೀಪ್ಫೇಕ್ ಸ್ಕಾಮ್? (Deep Fake Scam)
AI ತಂತ್ರಜ್ಞಾನದ ಮೂಲಕ ಡೀಪ್ಫೇಕ್ ಯಾವ ರೂಪದಲ್ಲಿ ಮಾಡಲಾಗುತ್ತಿದೆ ಅನ್ನೋ ಸಣ್ಣ ಊಹೆಯನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ ಆಪ್ತರ ಧ್ವನಿಯಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಬಹುದು, ನಿಮ್ಮ ಆಪ್ತರ ಫೋಟೋ ಬಳಸಿ AI ತಂತ್ರಜ್ಞಾನದ ಮೂಲಕ ಡೀಪ್ಫೇಕ್ (Deep Fake Scam) ವಿಡಿಯೋ ಕಾಲ್ ಮಾಡುತ್ತಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಕೆಲ ಅನುಮಾನಗಳ ಮೂಡಲಿದೆ. ಮೊದಲ ನೋಟಕ್ಕೆ ಯಾವುದೇ ವ್ಯತ್ಯಾಸಗಳು ಬರುವುದಿಲ್ಲ. ಹೀಗಾಗಿ ಸೈಬರ್ ತಜ್ಞರು ಕೆಲ ಎಚ್ಚರಿಕೆಯನ್ನು ನೀಡಿದ್ದಾರೆ. ಡೀಪ್ಫೇಕ್ ಕಾಲ್ ಆಗಿದ್ದರೆ ವಿಡಿಯೋ ಕರೆಯ ಕ್ವಾಲಿಟಿ ಕಳಪೆಯಾಗಿರುತ್ತದೆ. ಕಳಪೆ ವಿಡಿಯೋ ಕ್ವಾಲಿಟಿಯ ಅಪರಿಚಿತ ಕರೆಯಾಗಿದ್ದರೆ ಎಚ್ಚರಿಕೆ ವಹಿಸುವುದು ಅಗತ್ಯ. ಇತ್ತ ಡಿಪ್ಫೇಕ್ ವಾಯ್ಸ್ ಕಾಲ್ ಆಗಿದ್ದರೂ ಈ ಧ್ವನಿಯ ಕ್ವಾಲಿಟಿ ಕಳಪೆಯಾಗಿರುತ್ತದೆ. ಇನ್ನು ಹಣ ವರ್ಗಾವಣೆ ಮಾಡುವ ಮೊದಲು ಅವರಿಗೆ ಕರೆ ಮಾಡಿ, ಅಥವಾ ಇನ್ಯಾವುದೇ ಮೂಲಗಳಿಂದ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.
AI ತಂತ್ರಜ್ಞಾನ ಇದೀಗ ಮಾನವ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಇದೀಗ ದಂಧೆಕೋರರು, ಸೈಬರ್ ಹ್ಯಾಕರ್ಸ್ ಇದೇ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಳ್ಳುತ್ತಿರುವುದು ಅಪಾಯ ಹೆಚ್ಚಿಸಿದೆ.



