ಚಿತ್ರನಟಿ ರಶ್ಮಿಕಾ ಮಂದಣ್ಣ ಅವರ ಮ್ಯಾನೇಜರ್ ಅವರಿಗೆ ಮೋಸ ಮಾಡಿದ್ದಾರೆ. ಸುಮಾರು 80 ಲಕ್ಷ ಲಪಟಾಯಿಸಿದ್ದಾರೆ. ಹಾಗೆ ಮೋಸ ಹೋಗಿದ್ದು ಗೊತ್ತಾದ ನಂತರ ಮ್ಯಾನೇಜರ್`ರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದಕ್ಕೆಲ್ಲ ರಶ್ಮಿಕಾ ಮಂದಣ್ಣ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅವರ ಮ್ಯಾನೇಜರ್ ಅವರಿಗೆ ಮೋಸ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾದರೆ ಕೆಲಸ ಬಿಟ್ಟಿದ್ದೇಕೆ..?
ತಮ್ಮ ಮ್ಯಾನೇಜರ್ ಪಕ್ಕಾ ಪ್ರೊಫೆಷನಲ್. ವೃತ್ತಿಪರತೆಗೆ ಬದ್ಧರಾಗಿದ್ದವರು. ಪರಸ್ಪರ ಒಪ್ಪಂದದ ಮೇಲೇ ಅವರು ಕೆಲಸ ಬಿಟ್ಟಿದ್ದಾರೆ. ಮೋಸ ಮಾಡಿಲ್ಲ. ಅವರು ಬೇರೆ ಕೆಲಸಕ್ಕೆ ಶಿಫ್ಟ್ ಆಗಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ.
ರಶ್ಮಿಕಾ ಹಾಗೂ ಅವರ ಮ್ಯಾನೇಜರ್ ಬೇರಾದ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳನ್ನು ನಿಗ್ರಹಿಸಲು ಮತ್ತು ಅವರ ವೃತ್ತಿಪರ ಸಂಬಂಧದ ಸುತ್ತಲಿನ ಆಧಾರರಹಿತ ವದಂತಿಗಳನ್ನು ಕೊನೆಗೊಳಿಸಲು ಈ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ” ಎಂದು ರಶ್ಮಿಕಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.



