ಚಂದ್ರಯಾನ 3(Chandrayan 3)ಯನ್ನು ಪ್ರಕಾಶ್ ರಾಜ್ (Prakash Raj) ಲೇವಡಿ ಮಾಡಿದ್ದ ವಿವಾದದಲ್ಲಿ ಸಿಲುಕಿದ್ದ ನಟ ಪ್ರಕಾಶ್ ರಾಜ್(Prakash Raj), ವಿವಾದ ಭುಗಿಲಾಗಿ ಕಾಡುತ್ತಿರುವಾಗ ಕೊನೆಗೂ ಸ್ಪಷ್ಟನೆ ಕೊಟ್ಟಿದ್ದಾರೆ. ಇಷ್ಟಕ್ಕೂ ಅವರು ಕೊಟ್ಟಿರುವ ಸ್ಪಷ್ಟನೆ ಇಷ್ಟು. ನಾನು 1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲಿಗ, ಅಮೆರಿಕ ಗಗನಯಾನಿ ನೀಲ್ ಆರ್ಮಸ್ಟ್ರಾಂಗ್ (Neel Armstrong) ಅವರನ್ನು ಉಲ್ಲೇಖಿಸಿ ಹಳೆಯ ಜೋಕ್ ಟ್ವೀಟ್ ಮಾಡಿದ್ದೆ. ಅವರ ಸಾಧನೆಯನ್ನು ಕೇರಳದ ಚಾಯ್ವಾಲಾ (Kerala chaiwala)ಒಬ್ಬ ಸಂಭ್ರಮಿಸುವ ಚಿತ್ರ ಅದು. ಆದರೆ ಇದರಲ್ಲಿ ಟ್ರೋಲ್ಗಳು ಯಾವ ಚಾಯ್ವಾಲಾನನ್ನು ಕಂಡರು?..
ಇದು ಸ್ಪಷ್ಟನೆಯೋ.. ಮತ್ತೆ ಕೆರಳಿಸುವ ತಂತ್ರವೋ.. ಅರ್ಥವಾಗುತ್ತಿಲ್ಲ. ಹಳೆಯ ಟ್ವೀಟಿನಲ್ಲಿ . ಲೋಟವೊಂದರಲ್ಲಿ ಚಹಾ ಸುರಿಯುತ್ತಿರುವ ವ್ಯಕ್ತಿಯೊಬ್ಬರ ವ್ಯಂಗ್ಯಚಿತ್ರವನ್ನು ರಾಜ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದರು. ‘ಇದೀಗ ಬಂದ ಸುದ್ದಿ: ಚಂದ್ರನಿಂದ ಬಂದ ಮೊದಲ ಚಿತ್ರ. ವಿಕ್ರಮ್ ಲ್ಯಾಂಡರ್ (Vikram Lander) . ಜಸ್ಟ್ ಆಸ್ಕಿಂಗ್ (Just Asking) ಎಂದು ಬರೆದುಕೊಂಡಿದ್ದರು. ರಾಜ್ ಅವರು ಷೇರ್ ಮಾಡಿದ್ದ ಕಾರ್ಟೂನ್, ಇಸ್ರೋ ಮಾಜಿ ಮುಖ್ಯಸ್ಥ ಶಿವನ್ ಅವರನ್ನು ಹೋಲುತ್ತಿತ್ತು. ಇದೀಗ ಮತ್ತೊಮ್ಮೆ ಟ್ವೀಟ್ ಮಾಡಿ, ಮತ್ತೊಮ್ಮೆ ಕೆಣಕಿದ್ದಾರೆ ಪ್ರಕಾಶ್ ರಾಜ್.
ಪ್ರಕಾಶ್ ರಾಜ್ (Prakash Raj) ಅವರ ವರ್ತನೆಯನ್ನು ಖುದ್ದು ಕಾಂಗ್ರೆಸ್ ನಾಯಕರೂ ಸಮರ್ಥನೆ ಮಾಡಿಲ್ಲ. ಎಡಪಂಥೀಯರೂ ಮೌನಕ್ಕೆ ಶರಣಾಗಿದ್ದಾರೆ. ಆದರೆ ಪ್ರಕಾಶ್ ರಾಜ್ (Prakash Raj) ಇರುವುದೇ ಹಾಗೆ.. ಅವರು ಹೇಳಿದ್ದೇ ಸರಿ ಎಂದು ವಾದಿಸುವ ಪ್ರಕಾಶ್ ರೈ (Prakash Rai) , ಅದನ್ನು ಸರಿ ಎಂದು ಸಾಧಿಸಲು ಇರುವ ಎಲ್ಲ ಮಾರ್ಗಗಳನ್ನೂ ಬಳಸುತ್ತಾರೆ. ಅವುಗಳಲ್ಲಿ ಒಂದು ಅಸ್ತ್ರ ಟೀಕಿಸುವವರು ಜ್ಞಾನಿಗಳಲ್ಲ. ಅವರಿಗೆ ವಿಷಯವೇ ಗೊತ್ತಿಲ್ಲ ಎಂದು ವಾದಿಸುವುದೂ ಒಂದು.
ವ್ಯಂಗ್ಯಚಿತ್ರದ ಕಥೆ : ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರಯಾನಕ್ಕೆ ಹೋದಾಗ ಮಾಡಿದ್ದ ವ್ಯಂಗ್ಯ ಚಿತ್ರ ಇದಲ್ಲ. ಆದರೆ ಮಲಯಾಳಿಗಳು ಎಲ್ಲೆಲ್ಲಿಯೂ ಇರುತ್ತಾರೆ. ಮಲಯಾಳಿಗಳು ಇಲ್ಲದ ದೇಶವೇ ಇಲ್ಲ ಎನ್ನುವುದು ಭಾರತೀಯರ ನಂಬಿಕೆ. ಅದಕ್ಕೆ ತಕ್ಕಂತೆ ರೂಪುಗೊಂಡಿದ್ದ ಒಂದು ಜೋಕು ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನಲ್ಲಿಗೆ ಕಾಲಿಟ್ಟಾಗ ಅಲ್ಲಿಯೂ ಅವನಿಗೆ ಮಲಯಾಳಿಗಳು ವೆಲ್`ಕಂ ಹೇಳಿದ್ದರು ಎನ್ನುವುದು. ಆದರೆ ಅದನ್ನು ಕಾರ್ಟೂನ್ ಮಾಡುವಾಗ ಇಲ್ಲದ ರೂಪಕಗಳನ್ನು ಬಳಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಟೀಕೆ : ಪ್ರಕಾಶ್ ರಾಜ್ ಅವರ ಈ ನಾಚಿಕೆಗೇಡಿನ ಟ್ವೀಟನ್ನು ನಾನು ಖಂಡಿಸುತ್ತೇನೆ. ಇಸ್ರೋದ ಯಶಸ್ಸು ಭಾರತದ ಯಶಸ್ಸು’ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. ಪ್ರಕಾಶ್ ಜೀ, ಈ ಚಂದ್ರಯಾನ ಮಿಷನ್ ಇಸ್ರೋದಿಂದ ಬಂದದ್ದು. ಬಿಜೆಪಿಯದಲ್ಲ. ಅದು ಯಶಸ್ವಿಯಾದರೆ, ಅದು ಭಾರತಕ್ಕಾಗಿ ಯಾವುದೇ ಪಕ್ಷಕ್ಕಾಗಿ ಅಲ್ಲ. ಈ ಮಿಷನ್ ವಿಫಲವಾಗಬೇಕೆಂದು ನೀವು ಏಕೆ ಬಯಸುತ್ತೀರಿ? ಬಿಜೆಪಿ ಕೇವಲ ಆಡಳಿತ ಪಕ್ಷ. ಒಂದು ದಿನ ಹೋಗುತ್ತದೆ. ಆದರೆ ಇಸ್ರೋ ಸಾಧನೆ ವರ್ಷಗಳ ಕಾಲ ಉಳಿಯುತ್ತದೆ ಮತ್ತು ನಮಗೆ ಹೆಮ್ಮೆ ತರುತ್ತದೆ’ ಎಂದು ಬರೆದಿದ್ದಾರೆ.
ಇಷ್ಟಕ್ಕೇ ಸುಮ್ನಾಗಿಲ್ಲ ಪ್ರಕಾಶ್ ರಾಜ್. ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಇಂಡಿಯಾ ಟುಡೇಯವರು (India Today) ಮಾಡಿರುವ ವಿಡಿಯೋವನ್ನೂ ಕೂಡಾ ಹಾಕಿ, ಇಂಡಿಯಾ ಟುಡೇಯವರೇ ನೀವೂ ಕೂಡಾ ವಿಜ್ಞಾನಿಗಳನ್ನು ಅವಮಾನಿಸಿದ್ದೀರಾ.. ಅದು ಹೇಗೆ ಪ್ರಕಾಶ್ ರಾಜ್ ಮಾದರಿಯಲ್ಲಿ ವ್ಯಂಗ್ಯ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ದ್ವೇಷ ಯಾವಾಗಲೂ ದ್ವೇಷವನ್ನೇ ಹರಡುತ್ತದೆ. ನಾನು ಕೇರಳ ಚಾಯ್`ವಾಲಾನನ್ನು ಸೆಲಬ್ರೇಟ್ ಮಾಡಿದರೆ, ಟ್ರೋಲಿಗರಿಗೆ ಅಲ್ಲಿ ಇನ್ನೇನೋ ಕಾಣಿಸಿತು. ಒಂದು ಜೋಕ್‍ನ್ನು ಅರ್ಥ ಮಾಡಿಕೊಳ್ಳೋದು ಯಾವಾಗ ಕಲಿಯುತ್ತೀರಿ.. ದೊಡ್ಡವರಾಗಿ ಎಂದಿದ್ದಾರೆ ಪ್ರಕಾಶ್ ರಾಜ್. ಅಂದಹಾಗೆ ಪ್ರಕಾಶ್ ರಾಜ್ ನಿಜಕ್ಕೂ ದೊಡ್ಡವರಾಗಿದ್ದಾರಾ.. ಹಿರಿಯರಾಗಿದ್ದಾರಾ.. ಜಸ್ಟ್ ಆಸ್ಕಿಂಗ್ ಎನ್ನುವುದು ಪ್ರಶ್ನೆ.



