ರಮ್ಯಾ.. 10 ವರ್ಷದಿಂದ ನಟಿಸದಿದ್ದರೇನಂತೆ.. ರಾಜಕೀಯಕ್ಕೆ ಧುಮುಕಿ ವಿರೋಧಿಗಳನ್ನು ಸೃಷ್ಟಿಸಿಕೊಂಡರೇನಂತೆ… ರಮ್ಯಾಗೆ ಮ್ಯಾಚ್ ಆಗಬಲ್ಲ ತಾಕತ್ತಿನ ಇನ್ನೊಬ್ಬ ನಟಿ ಕನ್ನಡಕ್ಕೆ ಸಿಕ್ಕಿಲ್ಲ. ಜನಪ್ರಿಯತೆ, ಕ್ರೇಜ್, ಸ್ಟಾರ್ ಗಿರಿ.. ಎಲ್ಲದರಲ್ಲೂ ಇವತ್ತಿಗೂ ರಮ್ಯಾಗೆ ದೊಡ್ಡ ಫ್ಯಾನ್ಸ್ ಬಳಗವೇ ಇದೆ. ಅಂತಹ ರಮ್ಯಾ ಅವರ ಸ್ಥಾನವನ್ನು ತುಂಬೋದಿಕ್ಕೆ ಹಲವರು ಪ್ರಯತ್ನ ಪಟ್ಟಿದ್ದಾರೆ. ಒಂದು ಹಂತಕ್ಕೆ ಹೋಗಿ.. ನಂತರ ಸೋತೂ ಇದ್ದಾರೆ. ಈಗ ಚೈತ್ರಾ ಆಚಾರ್ ಸರದಿ. ಹಾಗಂತ.. ರಮ್ಯಾಗೆ ಚೈತ್ರಾ ಅವರು ಪರ್ಫೆಕ್ಟ್ ರಿಪ್ಲೇಸ್ ಆಗ್ತಾರಾ..? ನೋ.. ಇದು ಕೇವಲ ಒಂದು ಸಿನಿಮಾದ ಕಥೆ.. ಅಷ್ಟೆ.
ಉತ್ತರಕಾಂಡ. ಈ ವರ್ಷದ ಬಿಗ್ ಸಿನಿಮಾಗಳಲ್ಲಿ ಒಂದು. ಹೀರೋ ಡಾಲಿ ಧನಂಜಯ. ಜೊತೆಯಲ್ಲಿ ಶಿವಣ್ಣ ಕೂಡಾ ಇದ್ದಾರೆ. ಕೆಆರ್ʻಜಿ ಸ್ಟುಡಿಯೋಸ್ʻನ ಕಾರ್ತಿಕ್ ಗೌಡ ಹಾಗೂ ಯೋಗಿ ರಾಜ್ ನಿರ್ಮಾಣದ ಚಿತ್ರಕ್ಕೆ ನಾಯಕಿಯಾಗಿ ರಮ್ಯಾ ಆಯ್ಕೆಯಾಗಿದ್ದರು. ಮುಹೂರ್ತವೂ ನಡೆದಿತ್ತು. ಆದರೆ.. ದಿಢೀರನೆ ರಮ್ಯಾ ಹೊರನಡೆದ ಕಾರಣ.. ಮೊತ್ತೊಬ್ಬರ ಹುಡುಕಾಟ ನಡೆದಿತ್ತು. ಈಗ ಚೈತ್ರಾ ಆಚಾರ್ ಉತ್ತರಕಾಂಡ ಟೀಂಗೆ ಎಂಟ್ರಿ ಕೊಟ್ಟಿದ್ಧಾರೆ.
ಚೈತ್ರಾ ಆಚಾರ್ ಅವರು ಉತ್ತರಕಾಂಡದಲ್ಲಿ ಲಚ್ಚಿ ಅನ್ನೋ ಪಾತ್ರದಲ್ಲಿ ನಟಿಸಲಿದ್ಧಾರೆ. ನಿರ್ದೇಶಕ ರೋಹಿತ್ ಪದಕಿ, ಚೈತ್ರಾ ಆಚಾರ್ ಅವರೇ ರಮ್ಯಾ ಅವರ ಸ್ಥಾನಕ್ಕೆ ಬಂದ್ರಾ ಅನ್ನೋದಕ್ಕೆ ಖಚಿತ ಉತ್ತರವನ್ನೇನೂ ಕೊಟ್ಟಿಲ್ಲ. ಡಾಲಿ ಧನಂಜಯ ಗಬ್ರು ಸತ್ಯನ ಪಾತ್ರದಲ್ಲಿ ನಟಿಸಲಿದ್ಧಾರೆ. ಶಿವಣ್ಣನ ರೋಲ್ ಏನು ಎನ್ನೋದು ಇನ್ನೂ ಗುಟ್ಟು ಗುಟ್ಟು.
ಚೈತ್ರಾ ಆಚಾರ್ ಇದುವರೆಗೆ ನಟಿಸಿರುವುದು ಕೆಲವೇ ಕೆಲವು ಚಿತ್ರಗಳು. ಮಹಿರ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಚೈತ್ರಾ ಆಚಾರ್, ಸಪ್ತ ಸಾಗರದಾಚೆ ಎಲ್ಲೋ ಹಾಗೂ ಟೋಬಿ ಚಿತ್ರಗಳಿಂದ ದೊಡ್ಡ ಹೆಸರು ಮಾಡಿದ್ರು. ಗಾಯಕಿಯೂ ಆಗಿರುವ ಚೈತ್ರಾ ʻಸೋಜುಗಾದ ಸೂಜು ಮಲ್ಲಿಗೆ.. ʼ (ಗರುಡ ಗಮನ ವೃಷಭ ವಾಹನ), ʻನೊಂದ್ಕೋಬ್ಯಾಡ್ವೆ..ʼ (ಟಗರು ಪಲ್ಯ), ʻನೀಲಾಕಾಶ ಕೇಳು.. ʼ (ಸಪ್ತ ಸಾಗರದಾಚೆ ಎಲ್ಲೋ).. ಸೇರಿದಂತೆ ಹಲವು ಹಿಟ್ ಹಾಡುಗಳನ್ನೂ ಕೊಟ್ಟಿದ್ಧಾರೆ. ಒಳ್ಳೆಯ ಡ್ಯಾನ್ಸರ್ ಕೂಡಾ.
ಪ್ರತಿಭಾವಂತರ ದೊಡ್ಡ ದಂಡಿಗೇ ಸೇರಿಕೊಂಡಿದ್ದಾರೆ. ಹೀಗಾಗಿಯೇ ಉತ್ತರಕಾಂಡದ ಮೇಲಿನ ನಿರೀಕ್ಷೆ ಜೋರಾಗಿದೆ. ರಮ್ಯಾ ಅವರು.. ಇಡೀ ಇಂಡಸ್ಟ್ರಿಯಲ್ಲಿ ರಮ್ಯಾಗೆ ರಿಪ್ಲೇಸ್ ಆಗ್ತಾರೋ ಇಲ್ವೋ.. ಸದ್ಯಕ್ಕೆ ಉತ್ತರಕಾಂಡದಲ್ಲಿ ರಮ್ಯಾ ಜಾಗಕ್ಕೆ ಬಂದಿದ್ದಾರೆ. ಚೈತ್ರಾ ಆಚಾರ್.. ಅರಳುತ್ತಿರುವ ಪ್ರತಿಭೆ. ಹಾಡುಗಾರ್ತಿ ಹಾಗೂ ನಟಿ. ಎರಡರಲ್ಲೂ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದೂ ಆಗಿದೆ. ಆದರೆ.. ಇನ್ನೂ ಸ್ಟಾರ್ ಪಟ್ಟ ಸಿಕ್ಕಿಲ್ಲ. ಸ್ಟಾರ್ ಪಟ್ಟ ಎನ್ನುವುದು ಪ್ರಯತ್ನ ಪಟ್ಟು ಬರುವುದಲ್ಲ.. ತಂತಾನಾಗಿಯೇ ಸೃಷ್ಟಿಯಾಗಬೇಕು. ಬೇಕು ಬೇಕು ಎಂದು ಕೇಳಿದಾಗ ಸಿಕ್ಕುವುದಿಲ್ಲ. ಬೇಡ ಬೇಡ ಎಂದಾಗ ಹೋಗುವುದೂ ಇಲ್ಲ. ಉದಾಹರಣೆ.. ಮೋಹಕ ತಾರೆ ರಮ್ಯಾ.



