ಇತ್ತೀಚೆಗೆ ಹೃದಯಾಘಾತ (heart attack case) ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ವಯಸ್ಸಿನವರು ಹಾರ್ಟ್ ಅಟ್ಯಾಕ್ʻಗೆ ತುತ್ತಾಗುತ್ತಿದ್ಧಾರೆ. ಇದಕ್ಕೆಲ್ಲ ಕೋವಿಡ್ ಕಾರಣವೇ ಅಥವಾ ಕೋವಿಡ್ ವ್ಯಾಕ್ಸಿನ್ ಕಾರಣವೇ..? ಈ ಬಗ್ಗೆ ಅಧ್ಯಯನ ವರದಿಯೊಂದು ಬಂದಿದ್ದು, ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಅಲ್ಲ, ಆದರೆ ಕೋವಿಡ್ ಬಂದು ಹೋದ ನಂತರ ದೇಹ ದುರ್ಬಲವಾಗಿರುವುದೇ ಕಾರಣ ಎಂಬ ಅಂಶ ಬಯಲಾಗಿದೆ. Covid and heart attack relationship reveled by ICMR report
ಕೋವಿಡ್ ನಂತರ ದೇಶದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂಬ ವಾದಗಳ ನಡುವೆಯೇ, ತೀವ್ರ ಸ್ವರೂಪದಲ್ಲಿ ಕೊರೋನಾ ಸೋಂಕಿಗೆ ತುತ್ತಾದವರು ಕಠಿಣ ಕೆಲಸ ಅಥವಾ ಅತಿ ಹೆಚ್ಚು ಶ್ರಮ ಬೇಡುವ ಕೆಲಸದಿಂದ ದೂರ ಇದ್ದು, ಹೃದಯಾಘಾತದಿಂದ ಪಾರಾಗಬೇಕು ಎಂದು ಸ್ವತಃ ಕೇಂದ್ರ ಆರೋಗ್ಯ ಮಂತ್ರಿಯೇ ಕರೆ ಕೊಟ್ಟಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಅಧ್ಯಯನ ವರದಿ ಉಲ್ಲೇಖಿಸಿ ಸಲಹೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ (mansuk mandaveeya), ತೀವ್ರ ಕೋವಿಡ್ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದವರು ಸೇರಿದಂತೆ ಗಂಭೀರ ಆರೋಗ್ಯ ಪರಿಸ್ಥಿತಿ ಎದುರಿಸಿ ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಭಾರದ ಕೆಲಸ ಮಾಡಬಾರದು. ದೈಹಿಕ ವ್ಯಾಯಾಮದಂತಹ ಕಠಿಣ ಕಸರತ್ತು ಮಾಡುವುದನ್ನು ಎರಡು ವರ್ಷ ಕಾಲ ಮುಂದೂಡಬೇಕು ಎಂದಿದ್ದಾರೆ.
ವ್ಯಾಕ್ಸಿನ್ ಕಾರಣ ಅಲ್ಲ :
ಕೊರೊನಾ ಸೋಂಕಿತರು (corona patients) ಸ್ವಲ್ಪ ಸಮಯದವರೆಗೆ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್ ಕೂಡ ಮಾಡಬಾರದು ಎಂಬ ಸಲಹೆಯನ್ನು ICMR ಐಸಿಎಂಆರ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ. ಕೋವಿಡ್ ಸೋಂಕಿನ ಬಳಿಕ ದೇಶದಲ್ಲಿ ಹೃದಯಾಘಾತದ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂಬುದನ್ನು ಐಸಿಎಂಆರ್ ತಜ್ಞರು ಒಪ್ಪಿಕೊಂಡಿದ್ದಾರೆ. ಆದರೆ ಲಸಿಕೆಯ ಅಡ್ಡ ಪರಿಣಾಮದಿಂದ ಈ ಪ್ರಮಾಣ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪ್ರಬಲ ಪುರಾವೆಗಳಿಲ್ಲ. ಲಸಿಕೆಯಿಂದಲೇ ಹೃದಯಾಘಾತ ಸಂಭವಿಸಿದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಅಧ್ಯಯನದ ಬಳಿಕವಷ್ಟೇ ನೈಜ ಕಾರಣ ತಿಳಿದು ಬರಲಿದೆ ಎಂದಿದ್ದಾರೆ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ.
ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಜಾಗತಿಕವಾಗಿ ಹೃದಯಾಘಾತ ಪ್ರಮಾಣ ಶೇ.30ರಷ್ಟು ಹೆಚ್ಚಳವಾಗಿರುವುದು ದೃಢಪಟ್ಟಿದೆ. 24 ರಿಂದ 45 ವರ್ಷದ ವಯೋಮಾನದವರು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವುದು ಕಂಡು ಬಂದಿದೆ.



