ಆಪರೇಷನ್ ಸಿಂಧೂರ ಶುರುವಾದ ಬಳಿಕ 4ನೇ ದಿನಕ್ಕೆ ಪಾಕಿಸ್ತಾನ, ಭಾರತದ ಎದುರು ಕದನ ವಿರಾಮದ ಪ್ರಸ್ತಾಪವನ್ನಿಟ್ಟಿತು. ಅದೂ ಅಮೆರಿಕದ ಮೂಲಕ. ಭಾರತವೂ ಸಡನ್ ಆಗಿ ಬಂದು, ಕದನ ವಿರಾಮ ಜಾರಿಯಲ್ಲಿದೆ ಎಂದು ಘೋಷಿಸಿ ಹೋಯಿತು. ಆದರೆ ಅದಕ್ಕೂ ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ʻಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿವೆʼ ಎಂದು ಟ್ವೀಟ್ ಮಾಡಿ ಬಿಟ್ಟಿದ್ದರು. ಮೋದಿ ಭಕ್ತರು ಮೊದಲ ಬಾರಿ ಮೋದಿ ಮೇಲೆ ಸಿಟ್ಟಾದರು. ಕಾರಣ ಇಷ್ಠೇ. ಕದನ ವಿರಾಮ ಮೋದಿ ಭಕ್ತರಷ್ಟೇ ಅಲ್ಲ, ಯಾರಿಗೂ ಅಗತ್ಯ ಇರಲಿಲ್ಲ. ನಿವೃತ್ತ ಸೇನಾಧಿಕಾರಿಗಳೂ ಕೂಡಾ ಮೋದಿ ವಿರುದ್ಧ ಗರಂ ಆದರು. ಪರಿಸ್ಥಿತಿ ಎಲ್ಲವೂ ಭಾರತಕ್ಕೆ ಅನುಕೂಲಕರವಿದ್ದಾಗ ಮಾತುಕತೆಗೆ ಹೋಗಿದ್ದೇಕೆ.. ಎಂದು ಆಕ್ರೋಶಗೊಂಡರು. ಅದಕ್ಕೆ ತಕ್ಕಂತೆ ಪಾಕಿಸ್ತಾನ, ಕದನ ವಿರಾಮ ಘೋಷಿಸಿದ ಮೂರೇ ಮೂರು ಗಂಟೆಯಲ್ಲಿ ಶೆಲ್, ಡ್ರೋಣ್, ಮೋರ್ಟರ್ ದಾಳಿ ನಡೆಸಿತ್ತು.
ಕಾಂಗ್ರೆಸ್ಸಿಗರು ಮೋದಿಯನ್ನು ಇಂದಿರಾ ಗಾಂಧಿಗೆ ಹೋಲಿಸಿ, ಲೇವಡಿ ಮಾಡೋಕೆ ಶುರು ಮಾಡಿದರು. ಬಾಂಗ್ಲಾ ವಿಮೋಚನೆ ಯುದ್ಧವಾದಾಗಲೂ ಅಮೆರಿಕ ಮಧ್ಯ ಪ್ರವೇಶ ಮಾಡಿತ್ತು. ಆಗ ಇಂದಿರಾ, ಈ ವ್ಯವಹಾರಕ್ಕೆ ತಲೆ ಹಾಕಬೇಡಿ ಎಂದು ಆಚೆ ಅಟ್ಟಿದ್ದರಂತೆ. ಆದರೆ ಮೋದಿ, ಅಮೆರಿಕದ ಬೂಟು ನೆಕ್ಕುತ್ತಿದ್ದಾರೆ, ಶರಣಾಗಿದ್ಧಾರೆ, ಭಾರತ ಏನು ಮಾಡುವುದಕ್ಕೂ ಅಮೆರಿಕ ಓಕೆ ಎನ್ನಬೇಕಾದ ಪರಿಸ್ಥಿತಿ ಇದೆ ಎಂದೆಲ್ಲ ಟೀಕೆ ಮಾಡತೊಡಗಿದರೆ, ಇತ್ತ ಮೋದಿಯನ್ನು ಆರಾಧಿಸುವವರು ಅರೆ ಮನಸ್ಸಿನಿಂದಲೇ ಮೋದಿಯನ್ನು ಬಯ್ಯೋಕೆ ಶುರು ಮಾಡಿದರು. ಆದರೆ.. ಆಗಿದ್ದೇನೆಂದರೆ..
ಅಂತಾರಾಷ್ಟ್ರೀಯ ಮಟ್ಟದ ಲೆಕ್ಕಾಚಾರಗಳೇ ಬೇರೆ. ಯಾವುದಾದರೊಂದು ಆಪ್ತ ರಾಷ್ಟ್ರ ಆ ರೀತಿ ಪ್ರಪೋಸಲ್ ಇಟ್ಟಾಗ ನೋ ಎನ್ನುವುದಕ್ಕೆ ಆಗುವುದಿಲ್ಲ. ಏಕೆಂದರೆ ಭಾರತಕ್ಕೆ, ಅಮೆರಿಕ ಕೇವಲ ಮಿತ್ರ ರಾಷ್ಟ್ರವಲ್ಲ, ಆಪ್ತ ರಾಷ್ಟ್ರವೂ ಹೌದು. ಶಶಿ ತರೂರ್ ಮಾತು ಕೇಳಿದರೆ ಅದು ಅರ್ಥವಾಗುತ್ತದೆ. 1971ರ ಪರಿಸ್ಥಿತಿಯೇ ಬೇರೆ.. 2025ರ ಪರಿಸ್ಥಿತಿಯೇ ಬೇರೆ.
1971ರಲ್ಲಿ ಭಾರತ ಮತ್ತು ಅಮೆರಿಕದ ಮಧ್ಯೆ ದೊಡ್ಡ ಮಟ್ಟದಲ್ಲಿ ಆರ್ಥಿಕ ವ್ಯವಹಾರಗಳಿರಲಿಲ್ಲ. ಈಗ ಆ ಪರಿಸ್ಥಿತಿ ಇಲ್ಲ. ಅಮೆರಿಕಕ್ಕೆ ಭಾರತ ಹೇಗೆ ಅನಿವಾರ್ಯವೋ.. ಭಾರಕ್ಕೆ ಅಮೆರಿಕ ಕೂಡಾ ಹಾಗೆಯೇ ಅನಿವಾರ್ಯ. ಇನ್ನು ಹಠಮಾರಿ ಧೋರಣೆ ತಳೆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಇರುವ ಬೆಂಬಲ ಕುಸಿಯಬಹುದು. ಶಶಿ ತರೂರ್ ಹೇಳಿದ್ದೂ ಇದನ್ನೇ.
ಇನ್ನು ಈ ಕದನ ವಿರಾಮದ ನಂತರ, ಪಾಕಿಸ್ತಾನ ಮತ್ತೊಮ್ಮೆ ಜಗತ್ತಿನ ಎದುರು ತಾನು ನಂಬಿಕಸ್ಥ ಅಲ್ಲ ಎನ್ನುವುದನ್ನು ತೋರಿಸಿಕೊಂಡರೆ, ಭಾರತ ಸಂತ್ರಸ್ತ ದೇಶವಾಗಿ ಹೊರಹೊಮ್ಮಿದೆ. ಅಷ್ಟೇ.
ಒಂದಂತೂ ಸತ್ಯ, ಈಗ ಯುದ್ಧ ಮಾಡಿದರೆ ಭಯೋತ್ಪಾದನೆ ಅಂತ್ಯವಂತೂ ಆಗುವುದಿಲ್ಲ. ಇದು ನಿರಂತರ. ಪಹಲ್‌ಗಾಂ ರೀತಿಯ ದಾಳಿಗಳು ನಡೆಯುತ್ತಲೇ ಇರುತ್ತವೆ. ಹಾಗೆ ನಡೆದಾಗಲೆಲ್ಲ ಉತ್ತರ ಕೊಡುತ್ತಲೇ ಇರಬೇಕು. ಆಗುವುದು ಇದೇ.
ಪಾಕಿಸ್ತಾನ 3-4 ಭಾಗವಾಗಿ ಬಿಡಬೇಕು ಎಂದು ಆಲೋಚಿಸುವವರು ವಾಸ್ತ್ ಅರ್ಥ ಮಾಡಿಕೊಳ್ಳಬೇಕು. 1971ರಲ್ಲಿ ಪಾಕಿಸ್ತಾನದಿಂದ ಇಬ್ಭಾಗವಾಗಿ ಬಾಂಗ್ಲಾದೇಶವೇನೋ ಉದ್ಭವವಾಯ್ತು. ಈಗೇನು ಅದು ಮಿತ್ರ ರಾಷ್ಟ್ರವಾ..? ತಮ್ಮ ಹೊಲಸು ಚಾಳಿ ತೋರಿಸಿಲ್ಲವೇ.. ಅನುಮಾನವೇ ಬೇಡ.. ಬಾಂಗ್ಲಾದೇಶ ವಿಷಯದಲ್ಲೂ ಭಾರತ, ಈಗ ಪಾಕ್ ವಿರುದ್ಧ ತೆಗೆದುಕೊಂಡ ಕ್ರಮಗಳನ್ನೇ ತೆಗೆದುಕೊಳ್ಳಬೇಕಾದ ದಿನಗಳು ಬರುತ್ತವೆ. ಅದಂತೂ ಖಚಿತ.



