ಕನ್ನಡ ಚಿತ್ರರಂಗ (Kannada film industry) ಒಗ್ಗಟ್ಟು ಮೆರೆದಿದೆ. ನಮಗೆ ಅನ್ನ ನೀರು ಕೊಡುವ ಕಾವೇರಿ ವಿಷಯದಲ್ಲಿ (kaveri protest) ಚಿತ್ರರಂಗ ಯಾವತ್ತೂ ಕರ್ನಾಟಕದ ಜೊತೆಗೆ ನಿಂತಿದೆ. ಫಿಲ್ಮ್ ಚೇಂಬರ್ (kannada film chamber) ಪ್ರಕಾರ ಎಲ್ಲರೂ ಕಾವೇರಿ ಪ್ರತಿಭಟನೆಗೆ ಬೆಂಬಲ ಕೊಟ್ಟರು. ಶಿವರಾಜ್ ಕುಮಾರ್ (Shiva raj kumar) ಅವರ ನೇತೃತ್ವ ಎಂದು ಹೇಳಿದರು. ಇಷ್ಟೆಲ್ಲ ಆಗಿ ಚಿತ್ರರಂಗ, ಕಿರುತೆರೆಯ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ‘ಕಾವೇರಿ ನಮ್ಮದು’ (kaveri nammadu) ಎಂದು ಹೋರಾಟ ನಡೆಸಿ ಇಡೀ ಚಿತ್ರರಂಗ ಬೆಂಬಲ ಸೂಚಿಸಿತು.
ನಟ ಶಿವರಾಜ್ಕುಮಾರ್ (Shiva Raj kumar), ದರ್ಶನ್ (Darhan), ಉಪೇಂದ್ರ (Upendra), ಧ್ರುವ ಸರ್ಜಾ (Dhruva sarja), ಶ್ರೀಮುರಳಿ (sri muralil), ವಿಜಯ್ ರಾಘವೇಂದ್ರ (vijay raghavendra), ಅನು ಪ್ರಭಾಕರ್ (Anu prabhakar), ರಘು ಮುಖರ್ಜಿ, ಪೂಜಾ ಗಾಂಧಿ (pooja gandhi), ಹಂಸಲೇಖ, ಗಿರಿಜಾ ಲೋಕೇಶ್, ನವೀನ್ ಕೃಷ್ಣ, ಸುಂದರ್ ರಾಜ್, ಪ್ರಮೀಳಾ ಜೋಶಾಯ್, ಮಿತ್ರ, ರೂಪಿಕಾ, ಪದ್ಮಾ ವಾಸಂತಿ, ನಟ ಶ್ರೀನಾಥ್, ಧರ್ಮ ಕೀರ್ತಿರಾಜ್, ಶ್ರೀನಿವಾಸ್ ಮೂರ್ತಿ, ಅನಿರುದ್ಧ, ಚಿಕ್ಕಣ್ಣ ಮುಂತಾದವರು ಹೋರಾಟದಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯೆಯೂ ಆಗಿರುವ ಉಮಾಶ್ರೀ ಕೂಡಾ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಯಾರ್ ಯಾರೆಲ್ಲ ಬರಲಿಲ್ಲ..?
ನಟ ಯಶ್ (Yash) ಅವರು ಲಂಡನ್ನಲ್ಲಿದ್ದು, ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ. ಆದರೆ ಕನಿಷ್ಠ ಟ್ವೀಟ್ ಕೂಡಾ ಮಾಡಲಿಲ್ಲ.
ಕಿಚ್ಚ ಸುದೀಪ್ (Kichcha sudeep) ಆರಂಭದ ದಿನಗಳಲ್ಲಿ ಟ್ವೀಟ್ ಮಾಡಿದರೇ ಹೊರತು, ಪ್ರತಿಭಟನೆಯ ದಿನ ಸೋಷಿಯಲ್ ಮೀಡಿಯಾದಲ್ಲಿ (social media) ಮೌನವಾಗಿದ್ದರು.
ನಟ ಜಗ್ಗೇಶ್ (jaggesh) ಅವರಿಗೆ ಫಿಸಿಯೋಥೆರಪಿ (phisyotheropy) ಆಗಿದ್ದು, ವಿಶ್ರಾಂತಿಯಲ್ಲಿದ್ದು ಪ್ರತಿಭಟನೆಯಿಂದ ದೂರ ಉಳಿದಿದ್ದರು.
ನಟರಾದ ರಿಷಬ್ ಶೆಟ್ಟಿ (Rishab Shetty), ರಕ್ಷಿತ್ ಶೆಟ್ಟಿ (Rakshit shetty), ರಾಜ್ ಬಿ ಶೆಟ್ಟಿ (Raj B Shetyy) ಕೂಡಾ ಪ್ರತಿಭಟನೆಯ ಸ್ಥಳದತ್ತ ಸುಳಿಯಲಿಲ್ಲ.
ಸಂಸದರಾದ ಸುಮಲತಾ (sumalatha), ಅಭಿಷೇಕ್ ಕೂಡಾ ಇರಲಿಲ್ಲ. ದುನಿಯಾ ವಿಜಯ್ (dunia vijay) ಕಾಣಲಲಿಲ್ಲ.
ವಿದೇಶದಲ್ಲಿ ಶೂಟಿಂಗ್ ಮಾಡುತ್ತಿರುವವರನ್ನು ಬಿಟ್ಟು ಉಳಿದ ಎಲ್ಲ ಕಲಾವಿದರು ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ.



