ಕಾಸ್ಟಿಂಗ್ ಕೌಚ್. ಅಲ್ಪ ಸ್ವಲ್ಪ ಇಂಗ್ಲಿಷ್ ಗೊತ್ತಿರುವವರಿಗೆ ಇದು ಅರ್ಥವಾಗುವ ಪದ. ಸಿನಿಮಾಗಳಲ್ಲಿ ಅವಕಾಶ ನೀಡುವುದಕ್ಕೆ ನಟಿಯರನ್ನು ಒಪ್ಪಿಸುವ, ಮಂಚಕ್ಕೆ ಕರೆಯುವುದು ಸಾಮಾನ್ಯ. ಆದರೆ, ಹೀಗೆ ಹೇಳುವಾಗ ಅವರು ಹೇಗೆ ಮಾತಾಡ್ತಾರೆ.. ಯಾವ ರೀತಿ ಅಪ್ರೋಚ್ ಮಾಡ್ತಾರೆ.. ಇಂಥಾದ್ದೊಂದು ವಿಷಯ ಬಹಿರಂಗವಾಗಿದೆ. ಅದೂ ತೆಲುಗು ನಟ ಚಿರಂಜೀವಿ ಅವರ ಹೇಳಿಕೆಗೆ ರಿಯಾಕ್ಷನ್ ಕೊಡುವಾಗ ನಟಿಯೊಬ್ಬರು ವಿಷಯ ಹೇಳಿದ್ದಾರೆ.
ಇತ್ತೀಚೆಗೆ ತೆಲುಗಿನಲ್ಲಿ ʻಮನ ಶಂಕರ ವರಪ್ರಸಾದ ಗಾರುʼ ಹಿಟ್ ಆದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಚಿರಂಜೀವಿ ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನ್ನೋದು ಇಲ್ಲ. ಇಲ್ಲಿ ಕೆಲಸ ಮಾಡುವುದಕ್ಕೆ ಒಳ್ಳೆಯ ವಾತಾವರಣವಿದೆ. ನೀವು ಹೇಗಿರುತ್ತಿರೋ ಅದೇ ರೀತಿ ಚಿತ್ರರಂಗದಲ್ಲಿ ರಿಸಲ್ಟ್ ಸಿಗುತ್ತೆ ಎಂದಿದ್ದರು. ಅದಕ್ಕೆ ಉತ್ತರ ಕೊಟ್ಟಿರುವ ಗಾಯಕಿ ಚಿನ್ಮಯಿ ಶ್ರೀಪಾದ್ ” ಫಿಲ್ಮ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಅನ್ನೋದು ವ್ಯಾಪಕವಾಗಿ ಹಬ್ಬಿದೆ. ‘ಫುಲ್ ಕಮಿಟ್‌ಮೆಂಟ್’ ಕೊಡದೇ ಹೋದರೆ ಅವರಿಗೆ ಅವಕಾಶಗಳು ಕೊಡುವುದಿಲ್ಲ. ಇದು ಚಿತ್ರರಂಗದಲ್ಲಿ ಹಲವು ಮಹಿಳೆಯರು ಎದುರಿಸುತ್ತಿರುವ ಕಟು ಸತ್ಯ. ಕಮಿಟ್‌ಮೆಂಟ್ ಅನ್ನೋ ಪದ ವೃತ್ತಿಪರತೆ ಎಂದು ತೋರುವುದಾದರೂ, ಸಿನಿಮಾ ಇಂಡಸ್ಟ್ರಿಯಲ್ಲಿ ಈ ಪದಕ್ಕೆ ಬೇರೆಯದ್ದೇ ಅರ್ಥವಿದೆ. ಇಂಗ್ಲಿಷ್ ಶಿಕ್ಷಣ ಪಡೆದವರು ‘ಕಮಿಟ್‌ಮೆಂಟ್’ ಪದವನ್ನು ಕೆಲಸದ ಮೇಲಿನ ನಿಷ್ಠೆ, ಸಮಯಪಾಲನೆ, ವೃತ್ತಿಪರತೆ ಎಂದು ಅರ್ಥ ಮಾಡಿಕೊಂಡರೆ, ಅದು ತಪ್ಪು. ಹಲವು ಮಂದಿ ಮಹಿಳೆಯರಿಗೆ ಕೆಲಸ ಕೊಟ್ಟು ಲೈಂಗಿಕ ಅನುಕೂಲವನ್ನು ಕೇಳುವುದು ದೊಡ್ಡ ಸಮಸ್ಯೆ” ಎಂದು ಹೇಳಿದ್ದಾರೆ. ಆ ಮೂಲಕ ಸಿನಿಮಾದಲ್ಲಿ ನಡೆಯುವ ಕಮಿಟ್‌ಮೆಂಟ್ ವಿಷಯ ಕೆದಕಿದ್ದಾರೆ.
ನಟಿಯರನ್ನು ಕಾಸ್ಟಿಂಗ್ ಕೌಚ್‌ಗೆ ಒಪ್ಪಿಸುವ ಮುನ್ನ ಕೆಲವರು ʻವಿತ್ ಕಮಿಟ್‌ಮೆಂಟ್ʼ ʻವಿತೌಟ್ ಕಮಿಟ್‌ಮೆಂಟ್ʼ ಪದಗಳನ್ನು ಬಳಸುತ್ತಾರಂತೆ. ಅದು ಇಂಡಸ್ಟ್ರಿಯಲ್ಲಿರುವ ಬಹುತೇಕ ನಟಿಯರಿಗೆ ಅರ್ಥವಾಗಿ ಬಿಡುತ್ತದೆ. ಅದು ಸೀರಿಯಲ್ಲುಗಳಲ್ಲೂ ಇದೆ. ವಿತ್ ಕಮಿಟ್‌ಮೆಂಟ್ ಅಥವಾ ವಿತ್ ಪ್ಯಾಕೇಜ್ ಎಂದರೆ ಕೊಡುವ ಸಂಭಾವನೆ ಬೇರೆ. ವಿತೌಟ್ ಪ್ಯಾಕೇಜ್ ಎಂದರೆ ಸಿಗುವ ಸಂಭಾವನೆ ಬೇರೆ. ಅಪ್ಪಿತಪ್ಪಿಯೂ ಅಶ್ಲೀಲ ಪದಗಳನ್ನು ಬಳಸುವುದಿಲ್ಲ. ಹಾಗೆ ಮಾತಾಡುವಾಗಲೇ ಯಾರ ಯಾರ ಜೊತೆ ಅನ್ನೋದನ್ನು ಕೂಡಾ ಡಿಸೈಡ್ ಮಾಡ್ತಾರಂತೆ. ಅವರನ್ನು ಬಿಟ್ಟು ಮಿಕ್ಕವರ ಜೊತೆ ಕ್ಲೋಸ್ ಆಗೋಕೆ ಸಾಧ್ಯವೇ ಇಲ್ಲ ಎಂದು ಹೇಳ್ತಾರೆ. ಇದು ಚಿತ್ರರಂಗ, ಸೀರಿಯಲ್ ಬಣ್ಣದ ಲೋಕದ ಕಟು ಸತ್ಯ.
ಇನ್ನು ಕೆಲವು ನಟಿಯರ ಹತ್ತಿರ ಈ ಪದಗಳನ್ನು ಹೇಳುವುದಕ್ಕೆ ಹೆದರುವವರೂ ಇದ್ದಾರೆ. ಯಾಕೆಂದರೆ ಅವರು ಪಕ್ಕಾ ಪ್ರೊಫೆಷನಲ್. ನಟನೆ ಓಕೆ, ಮಿಕ್ಕಿದ್ದೆಲ್ಲ ಕೇಳೋದಾದ್ರೆ ಹತ್ತಿರಕ್ಕೂ ಬರಬೇಡಿ ಅನ್ನೋ ವೃತ್ತಿಪರ ಮನೋಭಾವದವರೂ ಇದ್ದಾರೆ. ವಿಶೇಷ ಎಂದರೆ ಸಿನಿಮಾ ರಂಗದಲ್ಲಿ ಗೆಲ್ಲುತ್ತಿರುವುದು ಅಂತಹವರು ಮಾತ್ರ. ಕಮಿಟ್‌ಮೆಂಟ್‌ಗೆ ಹೋದವರು ಬಂದಷ್ಟೇ ವೇಗದಲ್ಲಿ ಮರೆಯಾಗಿ ಹೋಗುತ್ತಿದ್ದಾರೆ.



