ಪತ್ರಕರ್ತರೆಂದು (Journalilst) ವೇಷ ಹಾಕಿಕೊಂಡು ಹೊಟ್ಟೆ ಹೊರೆದುಕೊಳ್ಳುವವರೇನೂ ಕಡಿಮೆ ಇಲ್ಲ. ಮೋಸ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಪತ್ರಕರ್ತರೆಂದು (Journalilst) ಹೇಳಿದಾಗ ದೋಖಾ ಬಿಸಿನೆಸ್ ಮಾಡುವವರು ಹೆದರುತ್ತಾರೆ. ಪೊಲೀಸರಿಗೆ (police) ದೂರು ಕೊಟ್ಟರೆ ಒಳ್ಳೆಯದೆಂದು ಗೊತ್ತಿದ್ದರೂ, ಆಮೇಲೆ ಪೊಲೀಸರಿಗೂ ಗೊತ್ತಾದರೆ ಕಥೆ ಏನು ಎಂಬ ಭಯಕ್ಕೆ ಬೀಳುತ್ತಾರೆ. ವ್ಯಾಪಾರಿಗಳ ಇಂತಹ ವೀಕ್`ನೆಸ್ಸನ್ನೇ ಬಂಡವಾಳ ಮಾಡಿಕೊಂಡಿದ್ದ ನಾಲ್ವರು ಪತ್ರಕರ್ತರು ಅರೆಸ್ಟ್ ಆಗಿದ್ದಾರೆ.
ಹಾಗಂತ ಅರೆಸ್ಟ್ ಆದವರೇನೂ ರಾಜ್ಯದ ಪ್ರತಿಷ್ಠಿತ ಟಿವಿ ಚಾನೆಲ್ (news Channel) ವರದಿಗಾರರಲ್ಲ. ರಾಜ್ಯ ಮಟ್ಟದ ಪತ್ರಿಕಾ ವರದಿಗಾರರೂ (News paper) ಅಲ್ಲ. ಯೂಟ್ಯೂಬ್ ಚಾನೆಲ್ (Youtube channel) ವರದಿಗಾರರು. ಆರೋಪಿಗಳು (Mahalakshmi Layout) ಮಹಾಲಕ್ಷ್ಮಿ ಲೇಔಟ್‍ನವರು. ಆತ್ಮಾನಂದ ಅಲಿಯಾಸ್ ಕೃಷ್ಣೇಗೌಡ. ಆನಂದ ಅಲಿಯಾಸ್ ಫಿಗರ್ ಆನಂದ, ಶ್ರೀನಿವಾಸ್ ಅಲಿಯಾಸ್ ರೇಷ್ಮೆನಾಡು ಶ್ರೀನಿವಾಸ್ ಹಾಗೂ ಕೇಶವಮೂರ್ತಿ ಬಂಧಿತ ಆರೋಪಿಗಳು.
ನಕಲಿ ಪತ್ರಕರ್ತರು ಮಾಡಿದ ಕ್ರೈಂ ಏನು?
ಕೆ.ಆರ್.ಪುರದಲ್ಲಿ ಸಾದಿಕ್ ಖಾನ್ ಎಂಬುವವರು ಮಾಂಸದ ಅಂಗಡಿ (meat shop) ಇಟ್ಟುಕೊಂಡಿದ್ದಾರೆ. ಆ ಮಾಂಸದ ಅಂಗಡಿಯಲ್ಲಿ (meat shop) ಹಫ್ತಾ ವಸೂಲಿಗೆ ಇಳಿದಿದ್ದ ಆರೋಪ ಈ ಪತ್ರಕರ್ತರ ಮೇಲಿದೆ. ಈ ಆರೋಪಿಗಳು ನಿಮ್ಮ ಮಾಂಸದಂಗಡಿಯಲ್ಲಿ ನಿಷೇದಿತ ಮಾಂಸ (banned meat) ಮಾರುತ್ತಿದ್ದೀರ ಎಂದು ಸುದ್ದಿ ಮಾಡುತ್ತೇನೆ ಎಂದು ಹೆದರಿಸುತ್ತಿದ್ದರು. ಇವರಿಗೆ ನಂದಿನಿ ಲೇಔಟ್`ನಲ್ಲಿ `ಎ.ಕೆ.ನ್ಯೂಸ್’(AK News) ಎಂಬ ಯೂಟ್ಯೂಬ್ ಚಾನೆಲ್ ಇತ್ತು. ಜೊತೆಗೆ ಕೆಲವೊಂದು ಸಂಘಟನೆಗಳೂ ಇವರ ಜೊತೆಗಿದ್ದವು. ನಿಷೇಧಿತ ಮಾಂಸ ಮಾರುವುದು ಎಂದರೆ ಏನೆಂದು ಓದುಗರಿಗೆ ಬಿಡಿಸಿ ಹೇಳಬೇಕಿಲ್ಲ. ಇದೇ ಸಾದಿಕ್ ಅವರ ಸೋದರನ ಮಾಂಸದ ಅಂಗಡಿಗೂ ಇದೇ ರೀತಿ ಬ್ಲಾಕ್`ಮೇಲ್ ಮಾಡಿದ್ದ ಆರೋಪಿಗಳು, ಆ ಅಂಗಡಿ ಮೇಲೆ ರೇಡ್ ಮಾಡಿಸಿದ್ದರು. ಹೀಗಾಗಿ ಹೆದರಿದ್ದ ಸಾದಿಕ್ ಖಾನ್, ಒಮ್ಮೆ 2 ಲಕ್ಷ ಹಣವನ್ನೂ ಕೊಟ್ಟಿದ್ದರಂತೆ. ಆದರೆ ಅದಾದ ಮೇಲೆ ಪ್ರತಿ ತಿಂಗಳೂ ಹಣಕ್ಕೆ ಡಿಮ್ಯಾಂಡ್ ಇಟ್ಟಾಗ ಬೇಸತ್ತ ಸಾದಿಕ್, ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ ಆರೋಪಿಗಳು ಇದೇ ರೀತಿ ಹಲವರಿಗೆ ಬೆದರಿಸಿ 80 ಲಕ್ಷಕ್ಕೂ ಹೆಚ್ಚು ವಸೂಲಿ ಮಾಡಿದ್ದರಂತೆ. ಪೊಲೀಸ್ ವಿಚಾರಣೆ ನಡೆಯುತ್ತಿದೆ.



