ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಆರಂಭವಾದಾಗಿನಿಂದ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.ಅದರಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳಗೊಂಡಿದೆ.
ಮೊದಲ ದಿನ ಅರ್ಧ ದಿನವಾದ ಕಾರಣ ಹಾಗೂ ಭಾನುವಾರವಾಗಿದ್ದ ಕಾರಣ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಇಡೀ ದಿನ ಓಡಾಡಿದವರ ಸಂಖ್ಯೆ ನಾಲ್ಕೂ ನಿಗಮಗಳ ಬಸ್ಗಳಲ್ಲಿ 5.71 ಲಕ್ಷ ಮಹಿಳಾ ಪ್ರಯಾಣಿಕರು ಮಾತ್ರ. ಇದಕ್ಕೆ ತಗುಲಿದ ಖರ್ಚು ಕೇವಲ 1 ಕೋಟಿ 40 ಲಕ್ಷ.


ಮೂರನೇ ದಿನ ಬಸ್ಸಿನಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ 51.52 ಲಕ್ಷ . ಖರ್ಚಾಗಿದ್ದು 10.82 ಕೋಟಿ .
ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಹೆಚ್ಚಿನ ಮಹಿಳೆಯರು ಪ್ರಯಾಣಿಸಿದ್ದಾರೆ. ಮೂರು ದಿನದಲ್ಲಿ 98.58 ಲಕ್ಷ ಮಹಿಳೆಯರು ನಾಲ್ಕೂ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣಿಸಿದ ಒಟ್ಟು ಮೊತ್ತ 21.05 ಕೋಟಿ ರು.ಗಳಾಗಿದೆ.



