ಕರ್ನಾಟಕದಲ್ಲಿ (Karnataka) ಹಿಜಾಬ್ ವಿವಾದ (Hijab Controversy) ಜೋರಾಗಿ.. ಉಡುಪಿಯ (Udupi Hijab Controversy) ನಾಲ್ವರು ವಿದ್ಯಾರ್ಥಿನಿಯರಿಂದ ಶುರುವಾದ ಗಲಾಟೆ ದೇಶದಾದ್ಯಂತ ವಿಸ್ತರಿಸಿ ದೊಡ್ಡ ಸುದ್ದಿಯೇ ಆಗಿ ಹೋಯ್ತು. ಇಂದಿಗೂ ಸುಪ್ರೀಂಕೋರ್ಟಿನಲ್ಲಿ (Supreme court) ವಿಚಾರಣೆ ನಡೆಯುತ್ತಿದೆ. ರಾಜ್ಯದಲ್ಲಿ ಶಾಲೆಗಳಲ್ಲಿ ಮಾತ್ರವೇ ಅದೂ ಪಾಠಗಳು ನಡೆಯುವಾ ಹಿಜಾಬ್ (Hijab Ban) ತೆಗೆಯುವಂತೆ ಆದೇಶಿಸಲಾಗಿತ್ತು. ಇದು ಹೊಸ ನಿಯಮವೇನೂ ಆಗಿರಲಿಲ್ಲ. ಕೆಲವು ಕಡೆ ಇತ್ತು. ಕೆಲವು ಕಡೆ ಇರಲಿಲ್ಲ. ಆದರೆ ನಿಷೇಧ ಹಲವು ವರ್ಷಗಳಿಂದಲೂ ಇದ್ದ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿನಿಯರು ಅದನ್ನು ಪ್ರಶ್ನಿಸಿ, ಹಿಂದೂ-ಮುಸ್ಲಿಂ ಹೋರಾಟವಾಗಿ ಬದಲಾಗಿದ್ದು ಇತಿಹಾಸ. ಇದು ಸರಿಯೋ.. ತಪ್ಪೋ.. ಸಂವಿಧಾನ ಬದ್ಧವೋ.. ಅಲ್ಲವೋ.. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬರುವುದಿನ್ನೂ ಬಾಕಿ ಇದೆ. ಆದರೆ, ಅತ್ತ ಫ್ರಾನ್ಸ್`ನಲ್ಲಿ ಶಾಲೆಗಳಲ್ಲಿ ಮುಸ್ಲಿಂ ಉಡುಪು ಧರಿಸುವುದಕ್ಕೇ ನಿಷೇಧ ಹೇರಲಾಗಿದೆ.
ಫ್ರಾನ್ಸ್`ನ (France) ಯಾವುದೇ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab Ban) ಧರಿಸುವಂತಿಲ್ಲ. ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಹೊಂದಿದ ಬಟ್ಟೆಯನ್ನು ಕಟ್ಟುನಿಟ್ಟಾಗಿ ನಿಷೇಧ (Hijab Ban) ಮಾಡಲು ಫ್ರಾನ್ಸ್ ನಿರ್ಧರಸಿದೆ. ಶಾಲೆಗಳಲ್ಲಿ ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಸಡಿಲವಾದ, ಪೂರ್ಣ-ಉದ್ದದ ನಿಲುವಂಗಿಯನ್ನು ಧರಿಸುವುದನ್ನು ಫ್ರಾನ್ಸ್ ನಿಷೇಧಿಸುತ್ತದೆ ಎಂದು ಅಲ್ಲಿನ ಶಿಕ್ಷಣ ಸಚಿವ ಗೇಬ್ರಿಯಲ್ ಅಟ್ಟಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸೆಪ್ಟೆಂಬರ್ 4 ರಿಂದ ರಾಷ್ಟ್ರವ್ಯಾಪಿ ತರಗತಿಗಳಿಗೆ ಹಿಂತಿರುಗುವ ಮೊದಲು ಶಾಲಾ ಮುಖ್ಯಸ್ಥರಿಗೆ “ರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟ ನಿಯಮಗಳನ್ನು ನೀಡುವುದಾಗಿಯೂ ತಿಳಿಸಿದ್ದಾರೆ.
ಇನ್ನು ಮುಂದೆ ಶಾಲೆಗಳಲ್ಲಿ ಅಬಯಾ ಧರಿಸಲು (Hijab Ban) ಅವಕಾಶವಿರುವುದಿಲ್ಲ. ಸೆಪ್ಟೆಂಬರ್ ನಾಲ್ಕರಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವುದಕ್ಕೂ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ತರುವುದಾಗಿ ಹೇಳಿದ್ದಾರೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವದನ್ನು ಧೀರ್ಘಕಾಲದಿಂದ ಫ್ರೆಂಚ್ ಶಾಲೆಗಳಲ್ಲಿ ನಿಷೇಧಿಸಲಾಗಿದೆ. ಬಲಪಂಥೀಯರು ಅಬಯಾ ನಿಷೇಧಕ್ಕೆ ಒತ್ತಾಯಿಸಿದರೆ, ಎಡಪಂಥೀಯರು ಇದು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಿದ್ದಾರೆ.
ಶಾಲೆಗಳಲ್ಲಿ ಇನ್ನು ಮುಂದೆ ಅಬಯಾವನ್ನು ಧರಿಸಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಗೇಬ್ರಿಯಲ್ ಯಾವುದೇ ವಿದ್ಯಾರ್ಥಿ ತರಗತಿಗೆ ಕಾಲಿಟ್ಟಾಗ ಅವರ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು, ಶಾಲೆಗಳಲ್ಲಿ ಎಲ್ಲಾ ಮಕ್ಕಳು ಒಂದೇ ಒಂದೇ ರೀತಿಯ ಸಮವಸ್ತ್ರದಲ್ಲಿ ಇರಬೇಕು ಎಂದಿದ್ದಾರೆ ಫ್ರಾನ್ಸ್ ಶಿಕ್ಷಣ ಸಚಿವ. ಆದರೆ ಇತ್ತೀಚೆಗೆ ಯೂರೋಪ್ ರಾಷ್ಟ್ರಗಳಲ್ಲಿ ಮುಸ್ಲಿಂ ಸಂಘಟನೆಗಳು ದಾಂಧಲೆ ನಡೆಸಿದ್ದವು. ನಿರಾಶ್ರಿತರೆಂದು ಆಶ್ರಯ ಅರಸಿ ಬಂದಿದ್ದ ಮುಸ್ಲಿಂ ರಾಷ್ಟ್ರಗಳಲ್ಲಿನ ಜನ ಇಟಲಿ, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿಗಳಲ್ಲಿ ಗಲಾಟೆ ಮಾಡಿದ್ದರು. ನಗರ, ಚರ್ಚು, ಲೈಬ್ರೆರಿ ಮೊದಲಾದ ಕಡೆ ಬೆಂಕಿ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿಯೇ (Hijab Ban) ಈ ನಿರ್ಧಾರ ನೋಡಲಾಗುತ್ತಿದೆ. ಆದರೆ ಸರ್ಕಾರದ ವಾದ ಮಾತ್ರ ಇದು.



