ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಹಾಲಿ ವಿರೋಧ ಪಕ್ಷದ ನಾಯಕ ಹಿಂಡನ್ ಬರ್ಗ್ ವರದಿ ಹಾಗೂ ಅದಾನಿ ಕುಟುಂಬದ ಆಸ್ತಿ, ಷೇರುಗಳ ಮೌಲ್ಯದ ಬಗ್ಗೆ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಟೀಕಿಸುತ್ತಲೇ ಇರುತ್ತಾರೆ. ಅಂಬಾನಿ, ಅದಾನಿಗಳಿಗೆ ಮೋದಿ ಸರ್ಕಾರ ಮಾರಾಟವಾಗಿದೆ. ಷೇರುಪೇಟೆಯಲ್ಲಿ ನಾವು ಕಾಣುತ್ತಿರುವುದೆಲ್ಲ ನೀರ ಮೇಲಿನ ಗುಳ್ಳೆ ಅಷ್ಟೆ, ಕಣ್ಣಿಗೆ ಕಾಣದಂತೆ.. ಅಂಗೈಯಲ್ಲಿ ಅರಮನೆ ಸೃಷ್ಟಿಸಿ ಲಾಭ ಮಾಡುತ್ತಿದೆ ಮೋದಿ ಟೀಂ ಎನ್ನುವುದು ರಾಹುಲ್ ಗಾಂಧಿಯವರ ಆರೋಪ. ಈ ನಡುವೆಯೇ.. ರಾಹುಲ್ ಗಾಂಧಿಯೂ ಕೂಡಾ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದಾರಲ್ಲ.. ಅವರು ಲಾಭ ಮಾಡಿದ್ದಾರೋ.. ನಷ್ಟ ಮಾಡಿಕೊಂಡಿದ್ದಾರೋ.. ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಅಂತಹ ರಾಹುಲ್ ಗಾಂಧಿ ಇದೇ ಷೇರು ಮಾರುಕಟ್ಟೆಯಿಂದ ಕೇವಲ ಐದೇ ತಿಂಗಳಲ್ಲಿ 46.5 ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಈ ಲೆಕ್ಕ ಸಿಕ್ಕಿದ್ದು ಹೇಗೆ ಎಂದರೆ.. ಉತ್ತರ ಪ್ರದೇಶದ ರಾಯ್ ಬರೇಲಿ ಹಾಗೂ ಕೇರಳದ ವಯನಾಡು ಕ್ಷೇತ್ರಕ್ಕೆ ರಾಹುಲ್ ಗಾಂಧಿ ಅವರು ಲೋಕಸಭೆಗೆ ಸಲ್ಲಿಸಿದ ನಾಮಪತ್ರದಿಂದ. ಆ ನಾಮಪತ್ರದಲ್ಲಿ ರಾಹುಲ್ ಗಾಂಧಿಯವರ ಪೋರ್ಟ್‌ಫೋಲಿಯೋದಲ್ಲಿ ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ದೀಪಕ್ ನೈಟ್ರೈಟ್, ಡಿವಿಸ್ ಲ್ಯಾಬ್ಸ್, ಜಿಎಂಎಂ ಪ್ಫೌಡ್ಲರ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಐಟಿಸಿ, ಟಿಸಿಎಸ್, ಟೈಟಾನ್, ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಆಫ್ ಇಂಡಿಯಾ ಮತ್ತು ಎಲ್‌ಟಿಐಮಿಂಡ್‌ಟ್ರೀ ಮುಂತಾದ ಷೇರುಗಳನ್ನು ಬಹಿರಂಗಪಡಿಸಲಾಗಿತ್ತು. ಸುಮಾರು 24 ಷೇರುಗಳಿದ್ದವು. ಆ 24 ಷೇರುಗಳಲ್ಲಿ 4 ನಷ್ಟದಲ್ಲಿದ್ದರೆ, ಉಳಿದ 21 ಕಂಪೆನಿಯ ಷೇರುಗಳು ಲಾಭದಲ್ಲಿವೆ. ಅದರಲ್ಲಿಯೂ LTI ಮೈಂಡ್‌ಟ್ರೀ, ಟೈಟಾನ್, TCS ಮತ್ತು ನೆಸ್ಲೆ ಇಂಡಿಯಾದ ಷೇರುಗಳು ಮಾತ್ರವೇ ಕುಸಿತ ಕಂಡಿವೆ.
ಇವುಗಳ ಹೊರತಾಗಿ, ವರ್ಟೋಜ್ ಅಡ್ವರ್ಟೈಸಿಂಗ್ ಲಿಮಿಟೆಡ್ ಮತ್ತು ವಿನೈಲ್ ಕೆಮಿಕಲ್ಸ್‌ನಂತಹ ಹಲವಾರು ಸಣ್ಣ ಕಂಪನಿಗಳ ಷೇರುಗಳನ್ನು ಸಹ ಕಾಂಗ್ರೆಸ್ ನಾಯಕ ಪೋರ್ಟ್‌ಫೋಲಿಯೋದಲ್ಲಿದೆ. ವರ್ಟೋಜ್ ಅಡ್ವರ್ಟೈಸಿಂಗ್ ಲಿಮಿಟೆಡ್‌ನಲ್ಲಿ ಕಾರ್ಪೋರೇಟ್ ಪ್ರಕ್ರಿಯೆ ಕಾರಣದಿಂದಾಗಿ ಈ ಕಂಪನಿಯಲ್ಲಿನ ಷೇರುಗಳ ಸಂಖ್ಯೆಯು 5,200 ಕ್ಕೆ ಏರಿದೆ. ಹೀಗಾಗಿ ರಾಹುಲ್ ಗಾಂಧಿಯವರ ಪೋರ್ಟ್‌ಫೋಲಿಯೋದ ಮೌಲ್ಯವು ಸುಮಾರು 4.33 ಕೋಟಿ ರೂಪಾಯಿಗಳಿಂದ (2024ರ ಮಾರ್ಚ್ 15ರಂತೆ), ಸುಮಾರು 4.80 ಕೋಟಿ ರೂಪಾಯಿಗಳಿಗೆ (2024ರ ಆಗಸ್ಟ್ 12ರಂತೆ) ಹೆಚ್ಚಾಗಿದೆ ಎಂದು ತಜ್ಞರು ಲೆಕ್ಕ ಹಾಕಿ ಹೇಳಿದ್ಧಾರೆ.
ಡೇಟಾ ಪ್ರಕಾರ ರಾಹುಲ್ ಗಾಂಧಿಯವರು ಯಾವ್ಯಾವ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದರೋ.. ಆಯಾ ಕಂಪೆನಿಗಳಲ್ಲಿನ ಷೇರಿನ ಪ್ರಮಾಣ, 5 ತಿಂಗಳ ಹಿಂದೆ ಇದ್ದ ಆ ಷೇರುಗಳ ಮೌಲ್ಯ.. ಹಾಗೂ ಈ 5 ತಿಂಗಳಲ್ಲಿ ಅದೇ ಕಂಪೆನಿಗಳ ಷೇರುಗಳ ಮೌಲ್ಯ ಹೆಚ್ಚಾಗಿರುವುದರ ಲೆಕ್ಕ ಹಾಕಿ ಹೇಳಲಾಗಿದೆ. ಇದು ಅಧಿಕೃತ ಮಾಹಿತಿಗಳು ಹಾಗೂ ಗಣಿತದ ಲೆಕ್ಕ ಅಷ್ಟೇ.



