ಕಬ್ಜ ಬಳಿಕ ಉಪೇಂದ್ರ ಅವರನ್ನು ಮತ್ತೆ ದೊಡ್ಡ ಪರದೆಯಲ್ಲಿ ನೋಡಲು ಕಾದಿರುವ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಬುದ್ದಿವಂತನಾಗಿ ಮತ್ತೊಮ್ಮೆ ಬರುತ್ತಿದ್ದಾರೆ ಉಪೇಂದ್ರ. ಸೆಪ್ಟೆಂಬರ್ 15ರಂದು ಸಿನಿಮಾ ರಿಲೀಸ್ ಎಂದು ಘೋಷಿಸಿದೆ ಚಿತ್ರತಂಡ. ಪೋಸ್ಟರ್ಗಳ ಮೂಲಕ ಗಮನ ಸೆಳೆದಿರುವ ‘ಬುದ್ಧಿವಂತ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಉಪೇಂದ್ರ ಅವರಿಗೆ ಜೋಡಿಯಾಗಿ ಸೋನಾಲ್ ಮಾಂಥರೋ ಮತ್ತು ಮೇಘನಾ ರಾಜ್ ನಟಿಸಿದ್ದಾರೆ. ವಿಶೇಷವಾದ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ.
ಬುದ್ಧಿವಂತ 2 ಸಿನಿಮಾ ಬಹಳ ಹಿಂದೆಯೇ ಅನೌನ್ಸ್ ಆಗಿತ್ತು. ಅಭಿಮಾನಿಗಳು ‘ರಿಲೀಸ್ ಯಾವಾಗ’ ಎಂದು ಕೇಳುತ್ತಲೇ ಇದ್ದರು. ಉಪ್ಪಿ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂದು ಹೇಳಿದ್ದ ಚಿತ್ರತಂಡ, ಅದರಂತೆಯೇ ರಿಲೀಸ್ ಘೋಷಿಸಿದೆ. ಸಿನಿಮಾ ರಿಲೀಸ್ ಆದ ಕೇವಲ 3 ದಿನಕ್ಕೆ ಸೆಪ್ಟೆಂಬರ್ 18ರಂದು ಅವರ ಹುಟ್ಟುಹಬ್ಬ ಇದೆ.
ಜೈದೇವ್ ನಿರ್ದೇಶಿಸಿರುವ ಚಿತ್ರಕ್ಕೆ ಮತ್ತೊಮ್ಮೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಡಾ. ಟಿ.ಆರ್. ಚಂದ್ರಶೇಖರ್ ಅವರು ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್ ಮೂಲಕ ‘ಬುದ್ಧಿವಂತ 2’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.



