ಹುಟ್ಟುಹಬ್ಬಕ್ಕೆ ಶಿವಣ್ಣನ ಸಖತ್ ಗಿಫ್ಟ್ ಕೊಟ್ಟಿದ್ದಾರೆ. ಮೊದಲಿಗೆ ಭೈರವನ ಕೊನೆಯ ಪಾಠದಲ್ಲಿ ವಿಶೇಷ ಲುಕ್ ತೋರಿಸಿದ್ದ ಶಿವಣ್ಣ, ಆಮೇಲೆ 45, ಶಿವಗಣದಲ್ಲಿ ಸಂಚಲನ ಸೃಷ್ಟಿಸಿದ್ದರು. ಈಗ ಮಾಸ್ʻಗೇ ಬಾಸ್ ಆಗಿದ್ದಾರೆ ಶಿವಣ್ಣ.
ತೆಲುಗಿನಲ್ಲಿ ಮಾಸ್ ಮಹಾರಾಜ ಅಂತಾ ರವಿತೇಜ ಅವರನ್ನ ಕರೀತಾರೆ. ಆದರೆ ಇಲ್ಲಿ ಮಾಸ್ʻಗೇ ಬಾಸ್ ಆಗಿದ್ದಾರೆ ಶಿವಣ್ಣ. “ಮಾಸ್ ಮಾಲೀಕನ ಹುಟ್ಟು, ಅಭಿಮಾನಿ ದೇವರುಗಳಿಗೆ ಹಬ್ಬ.. ಕರ್ನಾಟಕದ್ ಕಿಂಗ್ ಡಾ ಡಾ ಡಾ ಡಾಕ್ಟರ್ ಶಿವರಾಜ್ ಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ವಿಶ್ ಮಾಡಿದೆ ʻಉತ್ತರಕಾಂಡ’ ಚಿತ್ರತಂಡ.
ರೋಹಿತ್ ಪದಕಿ ನಿರ್ದೇಶನ ಮಾಡುತ್ತಿರುವ ‘ಉತ್ತರಕಾಂಡ’ ಸಿನಿಮಾದಲ್ಲಿನ ಶಿವಣ್ಣನ ಲುಕ್ ಹುಟ್ಟುಹಬ್ಬದಂದೇ ರಿವೀಲ್ ಆಗಿದೆ. ಶಿವರಾಜ್‌ಕುಮಾರ್ ಮುಖದ ಮೇಲೆ ರಕ್ತ ಇಳಿಯುತ್ತಿದೆ. ಕೈಯಲ್ಲಿ ಸಿಗರ್ ಇದೆ. ಭುಜದ ಮೇಲೆ ಬುಲೆಟ್‌ಗಳ ಪಟ್ಟಿಯೇ ಇದೆ. ಲುಕ್ ಮಾತ್ರ ರಗಡ್ ಆಗಿದೆ. ಹುಟ್ಟುಹಬ್ಬಕ್ಕೆಂದೇ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದೆ ಕೆಆರ್‌ಜಿ ಸ್ಟುಡಿಯೋಸ್. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಇತ್ತೀಚೆಗೆ ಕನ್ನಡದಲ್ಲಿ ರೆಡಿಯಾಗುತ್ತಿರುವ ಅತಿದೊಡ್ಡ ಮಲ್ಟಿಸ್ಟಾರರ್ ಸಿನಿಮಾ ಉತ್ತರಕಾಂಡ. ಶಿವಣ್ಣ, ಡಾಲಿ, ದಿಗಂತ್ ಒಟ್ಟಿಗೇ ನಟಿಸುತ್ತಿದ್ದಾರೆ. ಶಿವಣ್ಣನಿಗೆ ಮೂರನೇ ಬಾರಿಗೆ ಭಾವನಾ ಮೆನನ್ ನಾಯಕಿಯಾಗಿದ್ದರೆ, ‘ಡಾಲಿ’ ಧನಂಜಯ್‌ಗೆ ಈ ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್ ನಾಯಕಿ. ದಿಗಂತ್ ಅವರಿಗೆ ಚೈತ್ರಾ ಆಚಾರ್. ಡೈರೆಕ್ಟರ್ ಯೋಗರಾಜ್ ಭಟ್ ಅವರಿಗೂ ಪ್ರಮುಖ ಪಾತ್ರವನ್ನೇ ನೀಡಿದ್ದಾರೆ ರೋಹಿತ್ ಪದಕಿ. ರಂಗಾಯಣ ರಘು, ಉಮಾಶ್ರೀ, ಗೋಪಾಲ್ ಕೃಷ್ಣ ದೇಶಪಾಂಡೆ, ವಿಜಯ್ ಬಾಬು ಮುಂತಾದವರು ನಟಿಸುತ್ತಿದ್ದಾರೆ.
ರೋಹಿತ್ ಪದಕಿಯವರ ಚಿತ್ರ ಭರ್ಜರಿ ಬಜೆಟ್ʻನಲ್ಲಿಯೇ ಸಿದ್ಧವಾಗುತ್ತಿದೆ. ಹೀರೋಯಿಂದ ಹಿಡಿದು ಪೋಷಕ ಪಾತ್ರಗಳನ್ನು ವಿಶೇಷವಾಗಿಯೇ ಪ್ರೆಸೆಂಟ್ ಮಾಡಿರುವ ರೋಹಿತ್ ಪದಕಿ, ಈಗ ಶಿವಣ್ಣ ಲುಕ್ ಬಹಿರಂಗಪಡಿಸಿ ಸಂಚಲನ ಸೃಷ್ಟಿಸಿದ್ದಾರೆ.



