ಹೊಸ ರಾಜ್ಯ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ಟಿನಲ್ಲಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಾಗಿ 52 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಎಂದಿನಂತೆ ಮದ್ಯದ ದರ ಹೆಚ್ಚಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸೈಟ್/ಮನೆ ಮಾರಾಟದ ದರ ಹೆಚ್ಚಲಿದೆ. ರಿಜಿಸ್ಟ್ರೇಷನ್ ಫೀಸ್/ಶುಲ್ಕ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಕೆಲವೇ ದಿನಗಳಲ್ಲಿ ರೂಪುರೇಷೆ/ಮಾರ್ಗಸೂಚಿಗಳು ಹೊರಬೀಳಲಿವೆ. ಇನ್ನು ವಾಹನ ಖರೀದಿ ದುಬಾರಿಯಾಗಲಿದೆ. ಇದೆಲ್ಲದರ ಮಧ್ಯೆ ಸಿದ್ದರಾಮಯ್ಯ (Siddaramaiah) ತಮ್ಮ 14ನೇ ಬಜೆಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿದ್ದ 11 ಹಳೆಯ ಸ್ಕೀಮುಗಳನ್ನು ಪುನಾರಂಭ ಮಾಡಿದ್ದಾರೆ.
1.ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ 100 ಕೋಟಿ ರೂ. ತೆಗೆದಿಟ್ಟಿದ್ದಾರೆ. (Indira Canteen)
2.ರಾಜ್ಯದಲ್ಲಿದ್ದ ಶಾದಿ ಮಹಲ್ ನಿರ್ಮಾಣಕ್ಕೆ, ಕಾಮಗಾರಿಗಳಿಗೆ ಹಣ ನೀಡಲಿದ್ದಾರೆ. 54 ಕೋಟಿ ವೆಚ್ಚದಲ್ಲಿ 126 ಶಾದಿ ಮಹಲ್ ನಿರ್ಮಾಣ ಮಾಡಲಿದ್ದಾರೆ. (Shadi Mahal)
3.ಅಲ್ಪಸಂಖ್ಯಾತ ಮಕ್ಕಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ಸ್ಕಾಲರ್`ಶಿಪ್ ಮತ್ತೆ ಆರಂಭ ಮಾಡಿದ್ದಾರೆ
4.ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಬ್ಯಾಂಕ್ ಸಾಲಕ್ಕೆ 1 ಲಕ್ಷ ರೂ. ಸಹಾಯಧನ
5.ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಪು, ಪೇಸ್ಟ್, ಬ್ರಷ್, ಕ್ರೀಮುಗಳುಳ್ಳ ಶುಚಿ ಸಂಭ್ರಮ ಕಿಟ್
6.ಅರಿವು : ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಶೈಕ್ಷಣಿಕ ಸಾಲಕ್ಕೆ ನೆರವು. 2 ಲಕ್ಷ ರೂ. ವರೆಗೆ ಶ್ಯೂರಿಟಿ ಕೊಡಲಿರುವ ಸರ್ಕಾರ
7.ಅಲ್ಪಸಂಖ್ಯಾತರಿಗೆ ವಾಹನ ಖರೀದಿಗೆ ಸಾಲ : ನಿರುದ್ಯೋಗಿ ಯುವಕರಿಗೆ 3 ಲಕ್ಷ ರೂ.ವರೆಗೆ ಸಾಲ
8.ವಕ್ಫ್‍ಆಸ್ತಿ/ಕಟ್ಟಡ/ಬಂಗಲೆಗಳ ಅಭಿವೃದ್ಧಿಗೆ ನೆರವು. ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ 360 ಕೋಟಿ (Waqf)
9.ಮೃತ ಜಾನುವಾರುಗಳಿಗೆ ಪರಿಹಾರ ನೀಡುವ ಯೋಜನೆ ಅನುಗ್ರಹ ಪುನಾರಂಭ
10.ಎಸ್ಸಿ/ಎಸ್ಟಿ/ಹಿಂದುಳಿದ ವರ್ಗದ ವಿದೇಶಿ ವ್ಯಾಸಂಗಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ (SC/ST/OBC)
11.ಅಲ್ಪಸಂಖ್ಯಾತ ಕೆಎಎಸ್/ಐಎಎಸ್ ಅಭ್ಯರ್ಥಿಗಳಿಗೆ ಹಜ್ ಭವನದಲ್ಲಿ ವಸತಿ ಸೌಕರ್ಯ ಮತ್ತು ತರಬೇತಿ
ಹೀಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸ್ಥಗಿತಗೊಂಡಿದ್ದ, ಬೇರೆ ಹೆಸರಿನಲ್ಲಿ ಚಾಲ್ತಿಯಲ್ಲಿದ್ದ ಯೋಜನೆಗಳಿಗೆ ಬೇರೆಯ ರೂಪ ಕೊಟ್ಟಿದ್ದಾರೆ. ಇದೇ ವೇಳೆ ಹಿಂದಿನ ಬಿಜೆಪಿ ಅವಧಿಯಲ್ಲಿದ್ದ ಒಟ್ಟು 17 ಯೋಜನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ
- ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಯ್ತು
- ಬಿಜೆಪಿ ಕಾಲದಲ್ಲಿ ಆದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ರದ್ದಾಯ್ತು
- ರೈತರು ಮತ್ತು ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದ ವಿದ್ಯಾನಿಧಿ ಯೋಜನೆ ರದ್ದಾಯ್ತು
- ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ನಿರ್ಮಿಸುವ ಯೋಜನೆಯನ್ನೂ ವಾಪಸ್ ತೆಗೆದುಕೊಂಡಾಯ್ತು
- ಆರೋಗ್ಯ ಸೇವೆಗೆ ಆರಂಭವಾಗಿದ್ದ `ನಮ್ಮ ಕ್ಲಿನಿಕ್’ (ದೆಹಲಿ ಮಾದರಿ ಆರೋಗ್ಯ ಸೇವೆ) ರದ್ದಾಯ್ತು
- ಎಲ್ಲ ಸರ್ಕಾರಿ ಶಾಲೆಗಳಿಗೂ ಒಂದೇ ರೀತಿಯ ಬಣ್ಣ ಬಳಿಯುವ ವಿವೇಕ ಶಾಲೆ ಎಂಬ ಯೋಜನೆ ರದ್ದು
- ಒಂದು ವರ್ಗದ ರೈತರು ವಿರೋಧ ವ್ಯಕ್ತಪಡಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದಾಯ್ತು
- ರೈತರಲ್ಲದವರಿಗೂ ಭೂಮಿ ಖರೀದಿ ಮಾಡುವ ಅವಕಾಶ ಕಲ್ಪಿಸುವ ಕಾಯ್ದೆ ವಾಪಸ್ ತೆಗೆದುಕೊಳ್ಳಲಾಯ್ತು
- ಸ್ತ್ರೀ ಸಾಮಥ್ರ್ಯ ಸಂಘಕ್ಕೆ 5 ಲಕ್ಷ ನೀಡುವ ಸ್ವಹಾಯ ಸಂಘಗಳಿಗೆ ಬಲ ತುಂಬುವ ಯೋಜನೆ ರದ್ದಾಯ್ತು
- ಭೂಸಿರಿ : ರೈತರಿಗೆ ವಾರ್ಷಿಕ 10 ಸಾವಿರ ರೂ. ನೆರವು ನೀಡುವ ಯೋಜನೆ ರದ್ದು
- ಶ್ರಮಶಕ್ತಿ : ಕೃಷಿಕ ಮಹಿಳೆಯರಿಗೆ ಮಾಸಿಕ 500 ರೂ. ನೀಡುವ ಯೋಜನೆ ರದ್ದು
- ಅಗ್ನಿವೀರ್ ತರಬೇತಿ : ಎಸ್ಸಿ/ಎಸ್ಟಿ ಯುವಕರು ಸೈನ್ಯಕ್ಕೆ ಸೇರಲು ನೆರವಾಗುವ ಯೋಜನೆ ರದ್ದು
- ಜಲನಿಧಿ : ರೈತರ ಜಮೀನಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ರದ್ದು
- ಕ್ಷೀರ ಸಮೃದ್ಧಿ ಬ್ಯಾಂಕ್ : ಹಾಲು ಉತ್ಪಾದಕರಿಗೆ ನೆರವಾಗಲು ಯೋಜಿಸಿದ್ದ ಬ್ಯಾಂಕ್ ಯೋಜನೆ ರದ್ದು
- ವಿನಯ ಸಾಮರಸ್ಯ : ಅಸ್ಪøಶ್ಯತೆ ನಿವಾರಣೆ ಕುರಿತು ಜಾಗೃತಿ ಮೂಡಿಸಲು ನೆರವಾಗಿದ್ದ ಯೋಜನೆ ರದ್ದು
- ಜ್ಯುವೆಲ್ಲರಿ ಪಾರ್ಕ್ : ಚಿನ್ನಾಭರಣ ಕುಶಲಕರ್ಮಿಗಳಿಗೆ ತರಬೇತಿ ಹಾಗೂ ಚಿನ್ನಾಭರಣ ಮಳಿಗೆಗಳಿಗೆ ನೆರವಾಗುವ ಯೋಜನೆ ರದ್ದು
- ಯುವಶಕ್ತಿ : ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಯುವಕರನ್ನು ಒಗ್ಗೂಡಿಸಿ ಸಂಘ ತೆರೆಯುವ ಯೋಜನೆ ರದ್ದು



