ಪ್ರತಿಪಕ್ಷಗಳಾಗಿ ನಾವು ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜನರ ಹಿತಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಪ್ರತಿಪಕ್ಷಗಳಾಗಿ ನಾವು ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜನರ ಹಿತಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಭಾನುವಾರ ನಡೆದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಮಾವೇಶದಲ್ಲಿ ಕುಮಾರಸ್ವಾಮಿ (HDK) ನೀಡಿದ ಹೇಳಿಕೆ ಇದು.
ಕೆಲವು ದಿನಗಳ ಹಿಂದೆ ನಾನು ದೆಹಲಿಗೆ ಹೋಗಿದ್ದು ನಿಜ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಸಂಬಂಧ ಚರ್ಚೆಯಾಗಿದೆ. ಈ ವಿಚಾರವಾಗಿ ಕುಮಾರಸ್ವಾಮಿ ಅವರು ಅಂತಿಮವಾಗಿ ಎಷ್ಟುಸೀಟು ಹಂಚಿಕೆ ಮಾಡಿಕೊಳ್ಳಬೇಕಿದೆ ಎಂಬುದನ್ನು ಬಿಜೆಪಿ ನಾಯಕರ ಜತೆ ಕುಳಿತು ಚರ್ಚೆ ನಡೆಸಿ ತೀರ್ಮಾನಿಸಲಿದ್ದಾರೆ ಇದು ದೇವೇಗೌಡರು (HD Devegowda) ನೀಡಿದ ಹೇಳಿಕೆ.
ಕುಮಾರಸ್ವಾಮಿ (HD Kumaraswamy) ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಪ್ರೀತಿ-ವಿಶ್ವಾಸ ಇದೆ. 2018ರಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸದಾಗಿ ಪ್ರಮಾಣ ಸ್ವೀಕಾರ ಮಾಡಿ ಎಂದಿದ್ದರು. ಬಿಹಾರದ ನಿತೀಶ್ ಕುಮಾರ್ (Nitheesh kumar) ಅವರಂತೆ ನಿಮ್ಮನ್ನೂ ದೀರ್ಘಾವಧಿ ಮುಖ್ಯಮಂತ್ರಿಯನ್ನಾಗಿ ಮಾಡುವುದು ನನ್ನ ಜವಾಬ್ದಾರಿ ಎಂದಿದ್ದರಂತೆ ಮೋದಿ. ಆದರೆ ದೇವೇಗೌಡರ (HD Devegowda) ಮುಖ ನೋಡಿಕೊಂಡು ತಿರಸ್ಕರಿಸಿದ್ದರಂತೆ ಕುಮಾರಸ್ವಾಮಿ.
ನನ್ನ ಪಕ್ಷವನ್ನು ಉಳಿಸಲು ಮೋದಿಯವರು (PM Narendra Modi) ಅವರಾಗಿಯೇ ವಿಶ್ವಾಸದಿಂದ ಭೇಟಿ ಮಾಡಲು ಮುಂದೆ ಬಂದಾಗ ಅವರ ಜತೆ ಮಾತನಾಡಿದ್ದು ಸತ್ಯ. ಆದರೆ, ನಾವು ಯಾವ ಸೀಟನ್ನು ಕೇಳಲಿಲ್ಲ. ಹೊಸ ಮೈತ್ರಿ ಮಾತುಕತೆಯ ನೈತಿಕತೆ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ನಾನು ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದೆ ಎನ್ನುವುದರಲ್ಲಿ ರಹಸ್ಯ ಏನೂ ಇಲ್ಲ. ಆದರೆ, ನೈತಿಕತೆ ಬಗ್ಗೆ ಮಾತನಾಡುವ ರಾಜ್ಯದ ಯಾವ ನಾಯಕರಿಗೆ ಅದೆಷ್ಟುನೈತಿಕತೆ ಇದೆ ಎಂಬುದನ್ನು ವಿಶ್ಲೇಷಣೆ ಮಾಡಬಲ್ಲೆ. ಆದರೆ, ವ್ಯಕ್ತಿಗತ ನಿಂದನೆ ಮಾಡುವುದು ನನ್ನ ಉದ್ದೇಶ ಅಲ್ಲ, ಈ 91ನೇ ವಯಸ್ಸಿನಲ್ಲಿ ಅಂತಹ ನಿಂದನೆಯಿಂದ ನಾನೇನು ಸಾಧಿಸುತ್ತೇನೆ ಎಂದಿದ್ದಾರೆ ದೇವೇಗೌಡ.
ಆದರೆ ಇದ್ದಕ್ಕಿದ್ದಂತೆ ಹೆಜ್ಜೆ ಹಿಂದಿಟ್ಟಿರುವುದು ಯಡಿಯೂರಪ್ಪ(BS yeddyurappa). ಮೊದಲಿಗೆ ಈ ಸುದ್ದಿ ಹೊರಬಿದ್ದಾಗ ಯಡಿಯೂರಪ್ಪ ಹೌದು, ಮೈತ್ರಿ ಹೋಗುತ್ತಿದ್ದೇವೆ ಎಂದಿದ್ದರು. ಯಡಿಯೂರಪ್ಪ (BSY) ಹೇಳಿದ ಕೂಡಲೇ ಬಿಜೆಪಿ ನಾಯಕರೂ ಕೂಡಾ ಉತ್ಸಾಹದಿಂದಲೇ ಪ್ರತಿಕ್ರಿಯೆ ಕೊಟ್ಟಿದ್ದರು. ಪ್ರತಾಪ್ ಸಿಂಹ, ಸಿಪಿ ಯೋಗೀಶ್ವರ್ (CP Yogishwar) ಸಂಭ್ರಮಿಸಿದ್ದರು. ಕೋಲಾರ ಸಂಸದ ಮುನಿಸ್ವಾಮಿ (Muniswamy) ಅವರಂತೂ ಕೇಳೋದಕ್ಕೆ ಮೊದಲೇ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದಿದ್ದರು. ಆದರೆ ಇದೀಗ ಮೋದಿ (Narendra modi) ಮತ್ತು ಅಮಿತ್ ಶಾ (Amith Shaw) ಹೇಳುವವರೆಗೂ ತಾಳ್ಮೆ ವಹಿಸಲು ಮುಂದಾಗಿದ್ದಾರೆ.
ಯಡಿಯೂರಪ್ಪ ಹೆಜ್ಜೆ ಹಿಂದೆ ಇಡಲು ಕಾರಣ ಏನು?
ಮೈತ್ರಿ ಬಗ್ಗೆ ಖುದ್ದು ನರೇಂದ್ರ ಮೋದಿ ಅಥವಾ ಅಮಿತ್ ಶಾ ಯಡಿಯೂರಪ್ಪ ಅವರ ಜೊತೆ ಮಾತನಾಡಿಲ್ಲ. ಹಿಂಟ್ ಕೊಟ್ಟಿದ್ದಾರೇನೋ ನಿಜ. ಆದರೆ ನೇರವಾಗಿ ಹೇಳಿಲ್ಲವಂತೆ. ಅಲ್ಲದೆ ಮೈತ್ರಿ ಎಂದು ಬಂದಾಗ ಸಹಜವಾಗಿ ಸೀಟು ಹಂಚಿಕೆ ಬಗ್ಗೆ ಹೇಳಬೇಕಾಗುತ್ತದೆ. ಕಳೆದ ಬಾರಿ ಗೆದ್ದಿದ್ದ ಕ್ಷೇತ್ರಗಳನ್ನೇ ಬಿಟ್ಟುಕೊಡಬೇಕಾದ ಅನಿವಾರ್ಯತೆ ಬಿಜೆಪಿಗೆ ಬರಲಿದೆ. ಇಂತಹ ಸಂದರ್ಭದಲ್ಲಿ ಎಲ್ಲವೂ ಕ್ಲಿಯರ್ ಆಗಿದೆ ಎಂಬರ್ಥದಲ್ಲಿ ಮಾತನಾಡಿಬಿಟ್ಟರೆ, ಮುಂದಿನ ಮಾತುಕತೆಯ ಹಾದಿ ಕಠಿಣವಾಗಬಹುದು ಎನ್ನುವುದೇ ಯಡಿಯೂರಪ್ಪ ಹಿಂದೇಟು ಹಾಕಲು ಕಾರಣ. ಹೀಗಾಗಿ ಮೋದಿ ಮತ್ತು ಅಮಿತ್ ಶಾ ಹೇಳುವವರೆಗೂ ಮೌನವಾಗಿರುವುದೇ ವಾಸಿ ಎಂದು ನಿರ್ಧಾರಕ್ಕೆ ಬಂದಿದ್ದಾರಂತೆ ಯಡಿಯೂರಪ್ಪ. ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಮಾತನಾಡಲೇಬೇಕಾದ ಅನಿವಾರ್ಯತೆ ಇದೆ.



