ಉಡುಪಿ ಫೈಲ್ಸ್ (Udupi Files) ಇತ್ಯರ್ಥಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ (National Women commession) ಎಂಟ್ರಿ ಕೊಟ್ಟಿದೆ. ಈ ಆಯೋಗದ ಸದಸ್ಯೆಯಾಗಿ ಬಂದಿರುವುದು ಖುಷ್`ಬೂ ಸುಂದರ್ (Khushboo Sudar). ಅವರೀಗ ಕೇವಲ ಚಿತ್ರ ನಟಿ ಅಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ (National Women commession) ಹೌದು. ಅವರೀಗ ಉಡುಪಿಗೆ ಬಂದು (Udupi SP Akshay machchindra) ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ, ಡಿಸಿ ಡಾ.ವಿದ್ಯಾಕುಮಾರಿ (Udupi DC Dr.Vidyakumari), ಎಡಿಸಿ ವೀಣಾ (Udupi ADC Veena) ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರಾಷ್ಟ್ರೀಯ ಮಹಿಳಾ ಆಯೋಗದ (National Women commession) ಮಾಜಿ ಸದಸ್ಯೆ ಶ್ಯಾಮಲ ಕುಂದರ್, ಖುಷ್ಬು ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದು, ಕೆಲ ದಾಖಲೆಗಳನ್ನು ನೀಡಿದ್ದಾರೆ. ಮುಂದಿನ ಎರಡು ದಿನ ಖುಷ್ಬು (Khushboo Sudar) ಉಡುಪಿಯಲ್ಲಿ ಇರಲಿದ್ದು, ಸಮಗ್ರ ಮಾಹಿತಿ ಮತ್ತು ದಾಖಲೆಗಳ ಸಂಗ್ರಹ ಮಾಡಲಿದ್ದಾರೆ.
ಇಷ್ಟೆಲ್ಲ ಆದ ನಂತರ ಮಾತನಾಡಿರುವ ಖುಷ್`ಬೂ ಸುಂದರ್ (Khushboo Sudar) ಘಟನೆಯ ಹಿಂದೆ ಬಿಗರ್ ಥಿಯರಿ ಅಥವಾ ಬಿಗ್ಗರ್ ಸ್ಟೋರಿ ಇದೆ ಎಂದು ಸದ್ಯ ಭಾವಿಸುವುದು ಬೇಡ. ಸೂಕ್ತ ಸಾಕ್ಷಿ ಸಿಗದೇ ಹೋದರೆ ಚಾರ್ಜ್ಶೀಟ್ ಮಾಡಲು ಸಾಧ್ಯವಿಲ್ಲ. ಸಾಕ್ಷ್ಯವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದ್ಯ ಆ ವಿದ್ಯಾರ್ಥಿನಿಯರನ್ನು ನಾವು ಆರೋಪಿತರು ಎಂದು ಕರೆಯಬಹುದು ಅಷ್ಟೇ ಎಂದಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಮೂರು ವಿದ್ಯಾರ್ಥಿನಿಯರ ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಟೆರರ್ ಲಿಂಕ್ ಇದೆ ಎಂದು ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. ಪ್ರಕರಣದ ಹಿಂದೆ ಅನೇಕ ಸಂಶಯಾಸ್ಪದ ಸಂಗತಿಗಳನ್ನು ಹರಿಯ ಬಿಡಲಾಗಿದೆ. ಘಟನೆಯ ಹಿಂದೆ ಬಿಗರ್ ಥಿಯರಿ ಅಥವಾ ಬಿಗ್ಗರ್ ಸ್ಟೋರಿ ಇದೆ ಎಂದು ಸದ್ಯ ಭಾವಿಸುವುದು ಬೇಡ ಎಂದಿರುವ ಖುಷ್`ಬೂ ವಿದ್ಯಾರ್ಥಿನಿಯರ ಮೊಬೈಲ್ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್ಗಳನ್ನು ಪೊಲೀಸರು ರೆಟ್ರೀವ್ ಮಾಡಿದ್ದಾರೆ. 40 ಗಂಟೆಗಳ ಕಾಲ ರೆಟ್ರೀವ್ ಮಾಡಿದರೂ ಏನು ಪತ್ತೆಯಾಗಿಲ್ಲ. ಮೂರು ಮೊಬೈಲ್ಗಳ ಡೇಟಾ ಸಂಗ್ರಹ ಮಾಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಬೇಕಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಬಗ್ಗೆ ಸ್ಪಷ್ಟತೆ ಸಿಗಬಹುದು ಎಂದಿದ್ದಾರೆ (Khushboo Sudar).
ಮಾಧ್ಯಮಗಳ ಜೊತೆ ಮಾತನಾಡಿದ (Khushboo Sudar) ಅವರು, ಈ ಘಟನೆ ಹಿಂದೆ ಯಾವುದೋ ಒಂದು ಬಿಗ್ ಸ್ಟೋರಿ ಇದೆ ಎಂದು ಯಾರೂ ಕಲ್ಪಿಸುವ ಅಗತ್ಯ ಇಲ್ಲ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಇರುವುದರಿಂದ ಸರಿಯಾದ ಹಾದಿಯಲ್ಲಿ ತನಿಖೆ ನಡೆಯುತ್ತದೆ. ರಾಜಕೀಯ ಒತ್ತಡ, ಕೋಮು ಪ್ರಭಾವ ಇಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗ ತನಿಖೆ (National Women commession) ಮಾಡುತ್ತದೆ. ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಅಗತ್ಯವಿಲ್ಲ. ಮಹಿಳಾ ಆಯೋಗ ಪ್ರತಿಭಟನೆ ಮಾಡಲು ಇರುವ ಸಂಸ್ಥೆಯಲ್ಲ. ಮಹಿಳಾ ಆಯೋಗ ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆ ಎಂದಿದ್ದಾರೆ ಖುಷ್`ಬೂ.
ಉಡುಪಿ ಫೈಲ್ಸ್. (Udupi Files) ಇದೀಗ ಕರ್ನಾಟಕವನ್ನು ಸುಡುತ್ತಿರುವ ಸುದ್ದಿಗಳಲ್ಲಿ ಉಡುಪಿ ಫೈಲ್ಸ್ (Udupi Files) ಕೂಡಾ ಒಂದು. ನೇತ್ರಜ್ಯೋತಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದೂ ಹುಡುಗಿಯೊಬ್ಬಳ ವಿಡಿಯೋ ಶೂಟ್ ಮಾಡಲು ಟಾಯ್ಲೆಟ್ಟಿನಲ್ಲಿ ಕ್ಯಾಮೆರಾ ಇಟ್ಟಿದ್ದರು ಎನ್ನುವುದೇ ವಿವಾದ. ಪ್ರಕರಣ ಕಾಲೇಜು ಹಂತ ದಾಟಿ, ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ, ಈಗ ರಾಜ್ಯದಾದ್ಯಂತ ಚರ್ಚೆಯ ವಿಷಯವಾಗಿದೆ. ಪೊಲೀಸರಷ್ಟೇ ಅಲ್ಲ, ಸರ್ಕಾರದವರೂ ಕೂಡಾ ಈಗಾಗಲೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಆದರೆ ಬಿಜೆಪಿಯವರು ಸುಮ್ಮನಾಗಿಲ್ಲ. ಈ ಮಧ್ಯೆಯೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಪ್ರಕರಣದ ವಿಚಾರಣೆಗಾಗಿ ಉಡುಪಿಗೆ ಬಂದಿದ್ದಾರೆ.



