ಬಿಗ್ ಬಾಸ್ ಶೋ ಆರಂಭ ಆಗ್ತಾ ಇದ್ದಂತೆಯೇ ಅಲ್ಲಿ ಹೋದವರ ಕ್ಯಾರೆಕ್ಟರ್ ಹಂತ ಹಂತವಾಗಿ ಬಯಲಾಗುತ್ತಾ ಹೋಗುತ್ತದೆ. ಈ ಬಾರಿ ಆ ರೀತಿ ದೊಡ್ಡ ಮಟ್ಟದ ಸುದ್ದಿಯಾಗಿರುವುದು ಜಾಹ್ನವಿ. ವಿಶೇಷ ಎಂದರೆ ಜಾಹ್ನವಿ ಅವರಿಗೆ ಎದುರಾಗಿ ನಿಂತಿರುವುದೂ ಕೂಡಾ ಒಬ್ಬ ನ್ಯೂಸ್ ಚಾನೆಲ್ ಆಂಕರ್. ಸದ್ಯಕ್ಕೆ ಅವರ ಹೆಸರು ಹೇಳುವಂತಿಲ್ಲ. ಈ ಇಬ್ಬರಿಗೂ ಒಬ್ಬನೇ ಗಂಡ. ಆತನ ಹೆಸರು ಕಾರ್ತಿಕ್. ಸದ್ಯಕ್ಕೆ ಕಾರ್ತಿಕ್ ʻಜಾಹ್ನವಿ; ಅವರಿಗೆ ಡಿವೋರ್ಸ್ ಕೊಟ್ಟಿದ್ದಾಗಿದೆ. ಇನ್ನೊಬ್ಬ ಆಂಕರ್ ಜೊತೆ ಮದುವೆಯೂ ಆಗಿದೆ.
ಬಿಗ್ ಬಾಸ್ 12ರ ಸ್ಪರ್ಧಿಯಾಗಿರುವ ಜಾಹ್ನವಿ.. ಮೊದಲಿಗೆ ನ್ಯೂಸ್ ಚಾನೆಲ್ ಆಂಕರ್ ಆಂಕರ್ ಆಗಿದ್ದವರು. ನ್ಯೂಸ್ ಫಸ್ಟ್, ನ್ಯೂಸ್ 18.. ಮೊದಲಾದ ಚಾನೆಲ್ಲುಗಳಲ್ಲಿ ಸುದ್ದಿ ನಿರೂಪಕಿಯಾಗಿದ್ದ ಜಾಹ್ನವಿ, ಸ್ಟಾರ್ ಸುವರ್ಣದಲ್ಲಿ ಸಿಹಿ ಕಹಿ ಚಂದ್ರು ಜೊತೆ ಶೋ ನಡೆಸಿಕೊಡುತ್ತಿದ್ದರು. ನಮ್ಮಮ್ಮ ಸೂಪರ್ ಸ್ಟಾರ್, ಗಿಚ್ಚ ಗಿಲಿಗಿಲಿ.. ಶೋದಲ್ಲೂ ಭಾಗಿಯಾಗಿದ್ದ ಅವರು , ಇತ್ತೀಚೆಗೆ ಫ್ಯಾಮಿಲಿ ಮ್ಯಾಟರ್ ಜೊತೆ ಸುದ್ದಿಯಾಗಿದ್ದಾರೆ. ಇನ್ನೊಬ್ಬರ ಸುದ್ದಿ ಹೇಳುತ್ತಿದ್ದವರೇ ಸುದ್ದಿಯಾಗುತ್ತಿರುವುದು ವಿಶೇಷ.
ಜಾಹ್ನವಿ ಅವರು ಡಿವೋರ್ಸಿ. ಕಾರ್ತಿಕ್ ಅವರನ್ನು ಮದುವೆಯಾಗಿ ಡಿವೋರ್ಸ್ ಕೊಟ್ಟಿದ್ದಾರೆ. ಒಂದು ಮಗುವೂ ಇದೆ. ಆ ಮಗು ಜಾಹ್ನವಿ ಅವರ ಬಳಿಯೇ ಇದೆ.
ಜಾಹ್ನವಿ ಅವರ ವಾದ ಏನೆಂದರೆ.. ಪತಿ ಕಾರ್ತಿಕ್ ಅವರಿಗೆ ಮೊದಲೇ ಒಂದು ಅಫೇರ್ ಇತ್ತು. ಮಗುವೂ ಇತ್ತು. ಜಾಹ್ನವಿ ಅವರ ಗೆಳತಿಯೊಂದಿಗೆ ಸಂಬಂದ ಇತ್ತು. ಜೊತೆಗೆ ಯಾವಾಗಲೂ ಕುಡಿದು ಬಂದು ಹೊಡೆಯುತ್ತಿದ್ದ. ಹೀಗಾಗಿ ಜಾಹ್ನವಿ ಡಿವೋರ್ಸ್ ಕೊಟ್ಟು ಪ್ರತ್ಯೇಕವಾದರು ಎನ್ನುವುದು. ಡಿವೋರ್ಸ್ ಆಗುವುದಕ್ಕೆ ಮೊದಲೇ ಜಾಹ್ನವಿ ಅವರ ಗೆಳತಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದ ಕಾರ್ತಿಕ್, ಆಕೆಗೆ ಒಂದು ಮಗುವನ್ನೂ ಕೊಟ್ಟಿದ್ದ. ಆದರೆ ನನಗೆ ಡಿವೋರ್ಸ್ ಆದ ಮೇಲೆ ವಿಷಯ ಗೊತ್ತಾಯ್ತು ಎಂದೆಲ್ಲ ಹೇಳಿಕೊಂಡಿದ್ದಾರೆ ಜಾಹ್ನವಿ.
ಆದರೆ ಜಾಹ್ನವಿ ಯಾವಾಗ ಈ ಆರೋಪ ಮಾಡಿದರೋ.. ಆಗ ತಿರುಗಿಬಿದ್ದ ಜಾಹ್ನವಿ ಅವರ ಮಾಜಿ ಪತಿ ತಿರುಗಿಬಿದ್ದಿದ್ದಾರೆ. ಡಿವೋರ್ಸ್ ಕೊಟ್ಟಿದ್ದೇನೆ. ಮಗುವಿನ ಆರೈಕೆಗೆ ಈಗಲೂ ಜೀವನಾಂಶ ನೀಡುತ್ತಿದ್ದೇನೆ. ಒಂದೆರಡು ಬಾರಿ ಜಗಳ ಆದಾಗ ಹೊಡೆದಿರುವುದೂ ನಿಜ. ಆದರೆ ಅಫೇರ್ ಇರಲಿಲ್ಲ. ಗಂಡನಾಗಿ ನಾನಿರುವಾಗ ಇನ್ನೊಬ್ಬನ ಜೊತೆ ಸಲುಗೆ ಇಂದ ಇದ್ದರೆ, ಪರ್ಸನಲ್ ಫೋಟೋಗಳನ್ನು ನನ್ನೆದುರೇ ಆತನಿಗೆ ಕಳಿಸುತ್ತಿದ್ದರೆ ಸುಮ್ಮನಿರುವುದು ಹೇಗೆ.. ಎಂದಿದ್ದಾರೆ.
ನಾನು ಜೊತೆಗಿದ್ದಾಗಲೂ ಬೇರೊಬ್ಬ ಗಂಡಸಿನ ಜೊತೆಗೆ ಸಲುಗೆಯಿಂದ ಇರುವುದು, ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು ನೋಡಿ ಸಿಟ್ಟು ಬಂದು ಹೊಡೆದಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಜಾಹ್ನವಿ ಆತನಿಗೆ ʻಆ ಫೋಟೋʼ ಕಳಿಸ್ತಿದ್ರಂತೆ. ಜಾಹ್ನವಿ ಅವರ ಮಾಜಿ ಗಂಡ ಕಾರ್ತಿಕ್ ಆರೋಪ ಮಾಡಿದ್ದಾರೆ. ಆದರೆ.. ಫೋಟೋ ಕಳಿಸ್ತಾ ಇದ್ದದ್ದು ಯಾರಿಗೆ.. ಆ ವಿಷಯವನ್ನು ಮಾತ್ರ ಕಾರ್ತಿಕ್ ಹೇಳೋದಿಲ್ಲ.
ಜಾಹ್ನವಿ ಅವರು ಕಾರ್ತಿಕ್ ಅವರ ಕ್ಯಾರೆಕ್ಟರ್ ಪ್ರಶ್ನೆ ಮಾಡಿದ್ದರೆ, ಕಾರ್ತಿಕ್ ಕೂಡಾ ಜಾಹ್ನವಿ ಕ್ಯಾರೆಕ್ಟರ್ ಪ್ರಶ್ನೆ ಮಾಡಿದ್ದಾರೆ. ಅಂದಹಾಗೆ ಕಾರ್ತಿಕ್ ಮದುವೆಯಾಗಿರುವ ಹುಡುಗಿಯೂ ನ್ಯೂಸ್ ಆಂಕರ್. ಜಾಹ್ನವಿಗೆ ಫ್ರೆಂಡ್ ಆಗಿದ್ದವರೇ. ಆಕೆಯೂ ಕೂಡಾ ಜಾಹ್ನವಿ ಆರೋಪ ನಿರಾಕರಿಸಿದ್ದಾರೆ. ಜಾಹ್ನವಿ ಜೊತೆ ಇದ್ದಾಗ ಕಾರ್ತಿಕ್ ಜೊತೆ ಯಾವುದೇ ಅಫೇರ್ ಇರಲಿಲ್ಲ. ಮಗುವೂ ಇರಲಿಲ್ಲ. ನಾನು ತಾಯಿಯಾಗಿ ವರ್ಷವೂ ಆಗಿಲ್ಲ. ಕಾರ್ತಿಕ್ ಪ್ರಪೋಸ್ ಮಾಡಿದ್ದು ನಿಜ. ಆದರೆ, ಅದು ಅರೇಂಜ್ ಮ್ಯಾರೇಜ್. ಅಫೇರ್ ಮ್ಯಾರೇಜ್ ಅಲ್ಲ ಎಂದಿದ್ದಾರೆ.
ನಿಜಾ ಹೇಳಬೇಕು ಅಂದರೆ ಆಗ ನನಗೆ ಮದುವೆ ಇಷ್ಟ ಇರಲಿಲ್ಲ . ಅದನ್ನು ತಡೆಯೋಕೆ ಅಂತಲೇ, ಕಾರ್ತಿಕ್‌ಗೆ ನಮ್ಮ ತಂದೆ-ತಾಯಿ ಜೊತೆ ಮಾತಾಡಿ ನನಗೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಎಂದಿದ್ದೆ. ಏನೂ ಇಲ್ಲದೇ ಡಿವೋರ್ಸ್ ಆಗಿರಲ್ಲ, ಬೇಡ ಅಂತ ಅಪ್ಪ-ಅಮ್ಮ ಹೇಳಿದ್ದರು” ಎಂದು ಕಾರ್ತಿಕ್ ಎರಡನೇ ಪತ್ನಿ ಹೇಳಿಕೊಂಡಿದ್ದಾರೆ.
ಯಾವುದ ಸತ್ಯವೋ.. ಯಾವುದು ಸುಳ್ಳೋ.. ಬಿಗ್ ಬಾಸ್‌ಗೆ ಬಾಸ್ ಆಗಿರುವವರಿಗೇ ಗೊತ್ತು.



