ರೇವ್ ಪಾರ್ಟಿಗಳು (Rave party) ನಡೆಯುವುದು, ಅಲ್ಲಿ ನೀತಿ ನಿಯಮಗಳು ಏನೂ ಇಲ್ಲದಿರುವುದು ಹೊಸದೇನಲ್ಲ. ಪೊಲೀಸರಿಗೆ ಕೆಲವು ಗೊತ್ತಾಗುತ್ತವೆ. ಕೆಲವಕ್ಕೆ ರೇಡ್ ಮಾಡ್ತಾರೆ. ಆದರೆ ಇದು ಎಲ್ಲದಕ್ಕಿಂತ ಹೆಚ್ಚು ಭಯನಕ. (snake venom drugs) ಹಾವಿನ ವಿಷದ ಡ್ರಗ್ಸ್ ರೇವ್ ಪಾರ್ಟಿ ಮತ್ತು ಬಿಗ್ ಬಾಸ್ ವಿನ್ನರ್ (big boss winner) ನಡುವಿನ ಭಯಾನಕ ಲಿಂಕ್ ಸ್ಟೋರಿ.
ರೇವ್ ಪಾರ್ಟಿಗಳಿಗೆ ಹಾವು ಹಾಗೂ ಹಾವಿನ ವಿಷವನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ ಹಿಂದಿ ಬಿಗ್ಬಾಸ್ ವಿಜೇತ ಇಲ್ವೀಸ್ ಯಾದವ್ (big boss winner Ilwis yadav) ಸೇರಿದಂತೆ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ . ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ (social media influencer) ಕೂಡ ಆಗಿರುವ ಬಿಗ್‌ಬಾಸ್ ಸ್ಪರ್ಧಿ ಇಲ್ವೀಸ್ ಯಾದವ್ ಸ್ವತಃ ಈ ರೇವ್ ಪಾರ್ಟಿಯನ್ನು ಆಯೋಜಿಸುತ್ತಿದ್ದ ಎನ್ನುವುದು ಪೊಲೀಸರ ಎದುರು ಆರೋಪಿಗಳು ಕೊಟ್ಟಿರುವ ಹೇಳಿಕೆ.
ಇಲ್ವೀಸ್ ಯಾದವ್ ಯೂಟ್ಯೂಬ್ ಇನ್ಸ್ಟಾಗ್ರಾಂಗಳಲ್ಲಿ (YouTube Instagram snake video) ಹಾವುಗಳನ್ನು ಬಳಸಿ ವೀಡಿಯೋ ರೆಕಾರ್ಡ್ ಮಾಡಿ ಪೋಸ್ಟ್ ಮಾಡುತ್ತಿದ್ದ. ಆಮೇಲೆ ರೇವ್ ಪಾರ್ಟಿ ಆಯೋಜಿಸುತ್ತಿದ್ದ. ಬಂಧಿತರ ಬಳಿ 9 ನಾಗರಹಾವು ಹಾಗೂ 20 ಮಿಲಿ ಲೀಟರ್ ಹಾವಿನ ವಿಷವನ್ನು ಸೀಝ್ ಮಾಡಲಾಗಿದೆ. ಇಲ್ವಿಸ್ ಯಾದವ್ʻನನ್ನು ಅರೆಸ್ಟ್ ಮಾಡಿಲ್ಲ. ಆದರೆ ತನಿಖೆಗೆ ಸಹಕಾರ ನೀಡುವುದಾಗಿ ಇಲ್ವಿಸ್ ಹೇಳಿದ್ದಾನೆ. ತನ್ನ ವಿರುದ್ಧದ ಆರೋಪಗಳನ್ನೆಲ್ಲ ನಿರಾಕರಿಸಿದ್ದಾನೆ.
ಇಲ್ವೀಸ್ ಯಾದವ್ ಆಯೋಜಿಸುತ್ತಿದ್ದ ಈ ಪಾರ್ಟಿಯಲ್ಲಿ ಹೆಚ್ಚಾಗಿ ವಿದೇಶಿ ಪ್ರಜೆಗಳು ಭಾಗವಹಿಸುತ್ತಿದ್ದು, ಕಿಕ್ಕೇರಿಸಿಕೊಳ್ಳಲು ಅವರು ಹಾವಿನ ವಿಷವನ್ನು ಸೇವಿಸುತ್ತಿದ್ದರೂ ಎಂದು ಪೊಲೀಸರು ಹೇಳಿದ್ದಾರೆ. ನೋಯ್ಡಾದ ಸೆಕ್ಟರ್ 49ರ ರಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ಈ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಾವಿನ ವಿಷಕ್ಕಾಗಿ ಈ ಖದೀಮರು ಬೇರೆ ಬೇರೆ ಪ್ರದೇಶಗಳಿಂದ ಹಾವನ್ನು ಹಿಡಿದು ತರುತ್ತಿದ್ದರು. ಬಳಿಕ ಈ ಹಾವಿನ ವಿಷವನ್ನು ತೆಗೆದು ಇಲ್ವೀಸ್ ಯಾದವ್‌ಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಭಾರಿ ಮೊತ್ತದ ಹಣದ ಆಸೆಯ ಹಿನ್ನೆಲೆಯಲ್ಲಿ ಆರೋಪಿಗಳು ಈ ಹಾವಿನ ವಿಷ ಪೂರೈಕೆಯ ಕೆಲಸವನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಹಾವಿನ ವಿಷದ ಡ್ರಗ್ಸ್ ವಿದೇಶಗಳಲ್ಲಿ ಫೇಮಸ್ : ಹಾವಿನ ವಿಷದ ಡ್ರಗ್ಸ್ ತೆಗೆದುಕೊಳ್ಳುವವರೂ ಇದ್ದಾರೆ. ಹಾವು, ಚೇಳು ಮೊದಲಾದ ವಿಷಕಾರಿ ಅಂಶವನ್ನು ತೆಗೆದು ಡ್ರಗ್ಸ್ ಜೊತೆ ಮಿಕ್ಸ್ ಮಾಡಿ ಕೊಡುವವರೂ ಇದ್ದಾರೆ. ಇದು ಹೆಚ್ಚು ಹೆಚ್ಚು ಕಿಕ್ಕೇರಿಸುತ್ತದೆ ಎನ್ನುವುದೇ ಇದಕ್ಕೆಲ್ಲ ಕಾರಣ. ಆದರೆ ಇದು ವಿದೇಶಗಳಲ್ಲಿ ಹೆಚ್ಚು ಜನಪ್ರಿಯ. ಭಾರತದಲ್ಲಿ ಅಲ್ಲ ಎನ್ನುವ ವಾದವೂ ಇದೆ. ಹಾವಿನ ವಿಷ ಎಂದು ಹೇಳಿ ಬೇರೆ ವಸ್ತುಗಳನ್ನು ತೋರಿಸಿ ಡ್ರಗ್ಸ್ ದಾಸ/ದಾಸಿಯರನ್ನು ಯಾಮಾರಿಸಲಾಗುತ್ತದೆ ಎಂಬ ವಾದವೂ ಇದೆ. ಹಾವಿನ ವಿಷದ ಡ್ರಗ್ಸ್ ಸೇವಿಸಿದವರು ಜಗತ್ತನ್ನೇ ಮರೆತು ಬಿಡುವಷ್ಟು ಮತ್ತಿನಲ್ಲಿರುತ್ತಾರೆ.



