ಕಳೆದ ವಾರಕ್ಕೆ ಹೋಲಿಸಿದರೆ ಬಿಗ್ ಬಾಸ್ ರೇಟಿಂಗ್ ಕುಸಿತ ಕಂಡಿದೆ. ಟಿಆರ್‌ಪಿ ಹೆಚ್ಚಾಗಿದ್ದ ಸಮಯದಲ್ಲೇ ಬಿಗ್ ಬಾಸ್ ಶೋಗೆ ಗುಡ್ ಬೈ ಹೇಳುತ್ತೇನೆ ಎಂದು ಘೋಷಿಸಿದ್ದರು ಕಿಚ್ಚ ಸುದೀಪ್. ಈ ವರ್ಷದ ಶೋಗೆ ಪ್ರಾಬ್ಲಂ ಇಲ್ಲ. ಆದರೆ ಮುಂದಿನ ವರ್ಷದಿಂದ ಬಿಗ್ ಬಾಸ್ ನಿರೂಪಕರಾಗಿ ಸುದೀಪ್ ಇರೋದಿಲ್ಲ. ಹಾಗೆ ಹೇಳಿದ ಬೆನ್ನಲ್ಲೇ ಬಿಗ್ ಬಾಸ್ ಶೋ ಟಿಆರ್‌ಪಿ ಕುಸಿತ ಕಂಡಿದೆ.
ಕನ್ನಡದ ಅತಿ ದೊಡ್ಡ ಶೋ ಬಿಗ್‌ಬಾಸ್‌ಗೆ ಬರೋದಾದ್ರೇ ಪ್ರತಿದಿನದ ಲೆಕ್ಕಾಚಾರದಲ್ಲಿ 7.3, ಶನಿವಾರದ ವಾರದ ಕತೆ ಕಿಚ್ಚನ ಜೊತೆ 7, ಭಾನುವಾರದ ಸಂಚಿಕೆ 6.9 ಟಿಆರ್‌ಪಿ ಪಡೆದಿದೆ. ಕಳೆದ ವಾರಕ್ಕೆ ಹೊಲಿಸಿದರೇ ಬಿಗ್‌ಬಾಸ್ ಟಿಆರ್‌ಪಿ ಕುಸಿದಿದೆ. ಇನ್ನೂ ಅನುಶ್ರೀ ನಿರೂಪಣೆ ಮಾಡುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 8.3 ಟಿಆರ್‌ಪಿ ಪಡೆದುಕೊಂಡಿದೆ.
ಮೊದಲ ಸ್ಥಾನಕ್ಕೆ ಪುಟ್ಟಕ್ಕನ ಮಕ್ಕಳು ಮರಳಿದ್ರೇ, ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 9, ಮೂರನೇ ಸ್ಥಾನದಲ್ಲಿ ಅಮೃತಧಾರೆ 8.6, ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ 8.3, ಐದನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಹ್ಮಣ್ಯ 7.1, ಆರನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 7, ಏಳನೇ ಸ್ಥಾನದಲ್ಲಿ ರಾಮಾಚಾರಿ 6.9, ಏಂಟನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ 6.2 ಒಂಬತ್ತನೇ ಸ್ಥಾನದಲ್ಲಿ ನಿನಗಾಗಿ 5.7, ಹತ್ತನೇ ಸ್ಥಾನದಲ್ಲಿ ಸೀತಾರಾಮ 5.3 ಟಿಆರ್‌ಪಿ ಪಡೆದುಕೊಂಡಿವೆ.
ಗ್ರಾಮೀಣ ಪ್ರದೇಶದಲ್ಲಿ ಪುಟ್ಟಕ್ಕ ಬ್ಲಾಕ್ ಬಾಸ್ಟರ್ ಹಿಟ್ ಆಗಿದೆ. 11.7 ಟಿವಿಆರ್ ಪಡೆದುಕೊಂಡಿದೆ. ಇದು ಒಂದು ದಾಖಲೆ ಎಂದೇ ಹೇಳಬಹುದು. ದೃಷ್ಟಿಬೊಟ್ಟು ಧಾರಾವಾಹಿ ಕೂಡ ವೀಕ್ಷಕರನ್ನ ಸೆಳೆದಿದ್ದು 4.5 ಟಿಆರ್‌ಪಿ ಪಡೆದುಕೊಂಡಿದೆ. ೬ ಗಂಟೆ ಟೈಮಿನಲ್ಲಿ ಬರುವ ದೃಷ್ಟಿಬೊಟ್ಟು ಸೀರಿಯಲ್, ಆ ಟೈಮಿಗೆ ದಾಖಲೆಯನ್ನೇ ಬರೆದಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಉಮಾಶ್ರೀಯೇ ನಾಯಕಿ. ದಶಕಗಳ ಹಿಂದೆ ರಂಗೋಲಿ, ಕಾದಂಬರಿ, ಕುಲವಧು ಮೊದಲಾದ ಧಾರಾವಾಹಿಗಳು ಈ ರೀತಿಯ ಟಿಆರ್‌ಪಿ ಪಡೆದುಕೊಂಡಿದ್ದವು. ಅವುಗಳನ್ನ ಬೀಟ್ ಮಾಡೋಕೆ ಸಾಧ್ಯವೇ ಇಲ್ಲ ಎಂದು ಜನ ಅಭಿಪ್ರಾಯ ಪಡುತ್ತಿರುವಾಗಲೇ ಪುಟ್ಟಕ್ಕನ ಮಕ್ಕಳು ಈ ದಾಖಲೆಯನ್ನ ಬ್ರೇಕ್ ಮಾಡಿದೆ. ನಂಬರ್ ಒನ್ ಸ್ಥಾನಕ್ಕೆ ಪುಟ್ಟಕ್ಕನ ಮಕ್ಕಳು ಮರಳಿದ್ದಾಳೆ. 9.9 ಟಿಆರ್‌ಪಿ ಪಡೆದು ದಾಖಲೆ ಸೃಷ್ಟಿಸಿದೆ ಪುಟ್ಟಕ್ಕನ ಮಕ್ಕಳು.
ಬಿಗ್ ಬಾಸ್ ಕುಸಿತಕ್ಕೆ ಕಾರಣ ಏನಿರಬಹುದು..?
ಬಿಗ್‌ಬಾಸ್ ಸೀಸನ್ 11 ಜಾಸ್ತಿ ಫೇಮಸ್ ಆಗಿದ್ದು, ಈ ಬಾರಿ ಲಾಯರ್ ಜಗದೀಶ್ ಅವರಿಂದಲೇ ಎನ್ನುವಂತಿತ್ತು. ಪ್ರಾರಂಭದಲ್ಲಿ ಅವರ ಕಾಮಿಡಿ ಟೈಮಿಂಗ್, ಗಲಾಟೆ ಹಾಗೂ ಫನ್ ಮೂಮೆಂಟ್ಸ್‌ಗೆ ಜನ ಫಿದಾ ಆಗಿದ್ರು. ಆದರೆ, ಯಾವಾಗ ಜಗದೀಶ್ ಮತ್ತು ರಂಜಿತ್ ನಡುವೆ ಜಗಳ ನಡೆದು ಅವರು ಹೊರಗೆ ಬಂದ್ರೋ ಆಗಲೇ ಲಾಯರ್ ಜಗದೀಶ್ ಅವರ ಅಭಿಮಾನಿಗಳು ಬಿಗ್‌ಬಾಸ್‌ಗೆ ಅವರನ್ನ ಮತ್ತೆ ಕರೆಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ರು. ಆದರೆ, ಶೋ ಮಸ್ಟ್ ಗೋಆನ್ ಎನ್ನುವಂತೆ ಬಿಗ್‌ಬಾಸ್ ಶೋ ಸರಾಗವಾಗಿಯೇ ಹೋಗ್ತಿದೆ. ಬಿಗ್‌ಬಾಸ್‌ನ ಟಿಆರ್‌ಪಿ ಕಡಿಮೆ ಆಗಿರೋದಕ್ಕೆ ಲಾಯರ್ ಜಗದೀಶ್ ಅವರ ಅಭಿಮಾನಿಗಳು ಬಿಗ್‌ಬಾಸ್ ನೋಡೋದನ್ನು ಬಿಟ್ಟಿದ್ದೇ ಕಾರಣನಾ ಅಂತ ಈಗ ಪ್ರಶ್ನೆ ಶುರುವಾಗಿದೆ.
ಆದರೆ ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಜಗಳ, ಕಿತ್ತಾಟಗಳು ಕಾಣುತ್ತಿವೆಯೇ ಹೊರತು, ವಿಶೇಷವಾದ ಟ್ಯಾಲೆಂಟ್ಸ್ ಕಾಣುತ್ತಿಲ್ಲ. ಈ ಮೊದಲಿನ ಬಿಗ್ ಬಾಸ್ ಶೋನಲ್ಲಿ ನಟ ನಟಿಯರು, ಕಲಾವಿದರು, ಸಂಗೀತಗಾರರು, ಡ್ಯಾನ್ಸರ್ಸ್. ಎಲ್ಲರೂ ಇರುತ್ತಿದ್ದರು. ಆದರೆ ಈ ಬಾರಿ ಬಿಗ್ ಬಾಸ್ ಶೋನಲ್ಲಿ ಜಗಳಗಂಟರು ಬಿಟ್ಟರೆ ಬೇರೆಯವರಿಲ್ಲ. ಇದೂ ಕೂಡಾ ಬಿಗ್ ಬಾಸ್ ಶೋ ಡೌನ್ ಆಗೋಕೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.



