ಬಿಗ್ ಬಾಸ್ ಮನೆ Big boss ಎಂದ್ಮೇಲೆ ಜಗಳ ಖಾಯಂ. ಮಾತಿನಲ್ಲೇ ಮಸಲತ್ತು ಮಾಡೋದು, ಬೆನ್ನ ಹಿಂದೊಂದು .. ಕ್ಯಾಮೆರಾ ಎದುರು ಇನ್ನೊಂದು ಆಟ ಫಿಕ್ಸ್. ಈಗಲೂ ಹಾಗೆಯೇ ಆಗಿದೆ. ಅತ್ತ ಬಿಗ್ ಬಾಸ್ ಮನೆಯಿಂದ ಶಾಸಕ ಪ್ರದೀಪ್ ಈಶ್ವರ್ ಹೊರಬಂದಿದ್ದಾರೆ. ನಾನು ಆಡೋಕೆ ಹೋಗಿರಲಿಲ್ಲ, ಕೇವಲ 3 ಗಂಟೆ ಇರೋಕೆ ಹೋಗಿದ್ದೆ. ಸ್ಫೂರ್ತಿ ಭಾಷಣ ಮಾಡಿ ಬಂದೆ ಅಷ್ಟೆ ಅನ್ನೋದು ಪ್ರದೀಪ್ ಈಶ್ವರ್ ಅವರ ಮಾತು. ಅಸಲಿ ಆಟವೇ ಬೇರೆ.
ಬಿಗ್ ಬಾಸ್’ BBK 10 season ಕನ್ನಡ ಸೀಸನ್ 10 ರಿಯಾಲಿಟಿ ಶೋ realtity show ಆರಂಭವಾಗಿ ಎರಡು ದಿನಗಳು ಕಳೆದಿವೆ. ಮನೆಯಲ್ಲಿ ಒಟ್ಟು 17 ಸ್ಪರ್ಧಿಗಳು ಇದ್ದಾರೆ. ಒಂದು ದಿನ ಮುಗಿಯುವುದರೊಳಗೆ ಮನೆಯ ಅಸಲಿ ಆಟ ಶುರುವಾಗಿದೆ. ಈ ಸೀಸನ್ನ ಮೊದಲ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ಆರಂಭಿಸಿದ್ದಾರೆ.
ಸಂಗೀತಾ ಶೃಂಗೇರಿ ಹೆಸರು ನಾಮಿನೇಟ್ ಮಾಡಿದ ವಿನಯ್ ಗೌಡ
ಸಂಗೀತಾ ಶೃಂಗೇರಿ (777 ಚಾರ್ಲಿ, ಲಕ್ಕಿಮ್ಯಾನ್ ಸಿನಿಮಾ ಹೀರೋಯಿನ್) ವಿನಯ್ ಗೌಡ ಇಬ್ಬರೂ ಖ್ಯಾತರಾಗಿದ್ದು ಹರ ಹರ ಮಹಾದೇವ Hara hara mahadeva ಸೀರಿಯಲ್ಲಿನಿಂದ. ಸಂಗೀತಾ Sangeetha Shringeri ಸತಿ ಅಂದ್ರೆ ಪಾರ್ವತಿಯಾಗಿ ನಟಿಸಿದ್ದರೆ, ವಿನಯ್ ಗೌಡ Vinay gowda ಶಿವನಾಗಿದ್ದು. ಎಲಿಮಿನೇಷನ್ ಪ್ರಕ್ರಿಯೆ ಶುರುವಾದಾಗ ವಿನಯ್ ಗೌಡ ‘ನನ್ನ ಪ್ರೀತಿಯ ಸತಿ ಸಂಗೀತಾ ಶೃಂಗೇರಿ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದರು. ಸಂಗೀತಾ ಮನೆಯೊಳಗೆ ಅಸಮರ್ಥರು ಎಂಬ ಟ್ಯಾಗ್ ಪಡೆದುಕೊಂಡು ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ, ಅವರಿಗೆ ಕೆಲವು ನಿಬಂಧನೆಗಳಿವೆ. ಅದನ್ನು ಅವರು ಫಾಲೋ ಮಾಡಿಲ್ಲ ಎಂದು ಕಾರಣಗಳನ್ನು ನೀಡಿದ್ದಾರೆ.
ಸತಿ ಸಂಗೀತಾ ಶೃಂಗೇರಿ ಕೆಂಡಾಮಂಡಲ
ಯಾವಾಗ ವಿನಯ್ ಗೌಡ ತಮ್ಮನ್ನು ನಾಮಿನೇಟ್ ಮಾಡಿದರೋ, ಸಂಗೀತಾ ನಾನು ತಪ್ಪು ಮಾಡಿದ್ದೇನೆ ಅಂತ ನೀವು ಹೇಗೆ ಹೇಳ್ತೀರಾ? ನಾನು ತಪ್ಪು ಮಾಡಿದ್ರೆ ಬಿಗ್ ಬಾಸ್ ನಮಗೆ ಶಿಕ್ಷೆ ಕೊಡುತ್ತಾರೆ. ನೀವೇ ಬಿಗ್ ಬಾಸ್ ಆಗಿಬಿಟ್ರಲ್ವಾ? ಯಾರು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ. ನೀವು ನಿಮ್ಮ ಬಣ್ಣವನ್ನು ತೋರಿಸಿದ್ದೀರಿ, ಗುಡ್ ಎಂದು ಉತ್ತರ ಕೊಟ್ಟರು.
ಅಸಮರ್ಥರು ಬಿಗ್ ಬಾಸ್ ಮನೆಯಲ್ಲಿ ಹೇಗಿರಬೇಕು..?
ಅಸಮರ್ಥರು ಎಂಬ ಟ್ಯಾಗ್ ಹೊತ್ತುಕೊಂಡು ಮನೆಯೊಳಗೆ ಬಂದ ಸ್ಪರ್ಧಿಗಳಿಗೆ ಸೂಟ್ ಕೇಸ್ ನೀಡಲಾಗುವುದಿಲ್ಲ. ಅವರು ‘ಬಿಗ್ ಬಾಸ್’ ನೀಡಿರುವ ಉಡುಪನ್ನೇ ಧರಿಸಬೇಕು. ಯಾವುದೇ ಕಾರಣಕ್ಕೂ ಅವರು ಸೋಫಾ, ಕುರ್ಚಿ, ಮೇಜು, ಮಂಚ ಇತ್ಯಾದಿ ಮೇಲೆ ಕೂರುವಂತಿಲ್ಲ, ಮಲಗುವಂತಿಲ್ಲ ಮತ್ತು ನೆಲದ ಮೇಲೆಯೇ ಕೂರಬೇಕು, ಅಲ್ಲಿಯೇ ಮಲಗಬೇಕು. ಜಿಮ್, ಸ್ವಿಮ್ಮಿಂಗ್ ಪೂಲ್, ಬಾಲ್ಕನಿಗೂ ಅವರಿಗೆ ಪ್ರವೇಶವಿಲ್ಲ. ಅಡುಗೆ ಮಾಡುವುದು, ಬಾತ್ರೂಮ್ ತೊಳೆಯುವುದು, ಹಾಸಿಗೆ ಸಿದ್ಧಗೊಳಿಸುವುದು.. ಹೀಗೆ ಮನೆಯ ಎಲ್ಲಾ ಕೆಲಸಗಳನ್ನು ಅಸಮರ್ಥರು ಎನಿಸಿಕೊಂಡವರೇ ಮಾಡಬೇಕು. ಸಂಗೀತಾ ಶೃಂಗೇರಿ ಕೂಡ ಅಸಮರ್ಥರು ಟೀಮ್ನಲ್ಲಿ ಇರುವುದರಿಂದ ಈ ಮೇಲಿನ ರೂಲ್ಸ್ ಫಾಲೋ ಮಾಡಲೇಬೇಕು. ಆದರೆ ಅವರು ಅದನ್ನು ಫಾಲೋ ಮಾಡಿಲ್ಲ, ಸೋಫಾ ಮೇಲೆ ಕೂರಬಾರದು ಎಂದು ಹೇಳಿದ್ದರೂ ಕೂಡ ಅವರು ಕುಳಿತಿದ್ದರು ಎಂದು ಸಂಗೀತಾ ಮೇಲೆ ವಿನಯ್ ಗೌಡ ಆರೋಪ ಮಾಡಿದ್ದಾರೆ.



