ಹರ್ಷಿಕಾ ಪೂಣಚ್ಚ (Harshika Poonachcha) ಮತ್ತು ಭುವನ್ ಪೊನ್ನಣ್ಣ (Bhuvan Ponnanna) ಅವರು ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ವಿಶೇಷ ಏನೆಂದರೆ ಮದುವೆಗೂ ಮುನ್ನ ಭುವನಂ ಎಂಟರ್ಟೇನ್ಮೆಂಟ್ (Bhuvanam Entertainment) ಶುರು ಮಾಡಿದ್ದಾರೆ. ಈ ಬ್ಯಾನರ್ ಮೂಲಕ ‘ಭುವನಂ ಶ್ರೇಷ್ಠಮ್ ಗಚ್ಚಾಮಿ’(Bhuvanam Shreshtam Gacchchami) ಸಿನಿಮಾ ಲಾಂಚ್ ಆಗಿದೆ. ಚಿತ್ರದ ಫಸ್ಟ್ ಲುಕ್ ಕೂಡ ಅನಾವರಣ ಮಾಡಲಾಗಿದೆ. ಬಹಳ ಕಾಲದಿಂದ ತಮ್ಮ ಪ್ರೀತಿಯನ್ನು ಗುಟ್ಟಾಗಿ ಇಟ್ಟಿದ್ದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ, ಆಗಸ್ಟ್ 23 ಮತ್ತು 24ರಂದು ಕೊಡಗಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ಇಬ್ಬರ ನಡುವೆ ಪ್ರೀತಿಯಿತ್ತು. ಇಂಡಸ್ಟ್ರಿಯಲ್ಲಿ ಕೆಲವರಿಗೆ ಗೊತ್ತೂ ಇತ್ತು. ಸಾಧು ಕೋಕಿಲ ಸರ್ ಹೇಳದೇ ಇದ್ದಿದ್ದರೆ ಇನ್ನೂ ಗೊತ್ತಾಗುತ್ತಿರಲಿಲ್ಲ ಎನ್ನುವ ಹರ್ಷಿಕಾ, ಭುವನ್ ಜೊತೆ ಸಮಾಜಸೇವೆಯಲ್ಲಿ ಕೈಜೋಡಿಸಿದ್ದರು. ಆದರೆ.. ನಾವಿಬ್ಬರೂ ಫ್ರೆಂಡ್ಸ್ ಅಷ್ಟೆ..ಬೆಸ್ಟ್ ಫ್ರೆಂಡ್ಸ್ ಎಂದೇ ಎಲ್ಲರನ್ನೂ ಯಾಮಾರಿಸುತ್ತಿದ್ದರು. ಆದರೆ.. ಲವ್ ಮಾತ್ರ ವರ್ಷಗಳಿಂದಲೇ ಇತ್ತು.
ಇಬ್ಬರದ್ದು ಲವ್ ಅಟ್ ಫಸ್ಟ್ ಸೈಟ್ ಎನ್ನಬಹುದು. ಫ್ಯಾಷನ್ ಶೋವೊಂದರಲ್ಲಿ ಹರ್ಷಿಕಾ ಅವರನ್ನು ನೋಡಿ ಮೆಚ್ಚಿಕೊಂಡ ಭುವನ್, ಬೆನ್ನು ಬಿದ್ದು ತಾವೇ ಪ್ರಪೋಸ್ ಮಾಡಿದ್ರಂತೆ. ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.
ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ. ಮುಂದಿನ ನಮ್ಮಿಬ್ಬರ ಕೊಡವ ಶೈಲಿಯಲ್ಲಿ ಮದುವೆ ಎಂದು ಖುಷಿಯಿಂದ ಭುವನ್ ಮಾತನಾಡಿದ್ದಾರೆ. ಅಂತೂ-ಇಂತೂ ಈ ಪ್ರೇಮಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಡುವ ಸಮಯ ಬಂದಿದೆ.



