‘ಸುತ್ತ ಸಮುದ್ರ, ಮಧ್ಯದಲ್ಲಿ ಕಾಡು. ಅಲ್ಲಿ ಒಬ್ಬನಿಗೆ ಹತ್ತು ತಲೆಗಳು. ಅವನ್ನ ರಾವಣ ಅಂತ ಕರೀತಾರೆ. ಸುತ್ತ ಬೆಟ್ಟಗಳು ಮಳೆಗಿಂತ ಜಾಸ್ತಿ ರಕ್ತದಲ್ಲೆ ಒದ್ದೆಯಾಗಿರೋ ಭೂಮಿ. ಅಲ್ಲಿ ಒಬ್ಬನಿಗೆ ಒಂದೇ ತಲೆ. ಅವನ್ನ ರಣಗಲ್ಲು ಅಂತಾರೆ
ಇಂಥಾದ್ದೊಂದು ಡೈಲಾಗಿನಿಂದಲೇ ಹವಾ ಎಬ್ಬಿಸಿತ್ತು ಮಫ್ತಿ.
ಇವನ್ಯಾರೋ ನಿನ್ ಜೊತೆ ಕೈ ಮಿಲಸಾಯಿದ್ನಂತೆ, ಯಾವ ಕೈ ಅಂತ ಕ್ಲಾರಿಟಿ ಇಲ್ದೆ ಹುಡುಗ್ರು ಎರಡು ಕೈ ತಂದಿದ್ದಾರೆ
ಅನ್ನೋ ಡೈಲಾಗ್ ಅಂತೂ ಬೇರೆಯದೇ ಕ್ರೇಜ್ ಹುಟ್ಟುಹಾಕಿತ್ತು.
ನಾನ್ ಹೊಡೆದ್ರೆ ಟಿಂಕರಿಂಗ್‌ಗೂ ಆಪ್ಷನ್ ಇರಲ್ಲ
ಧಮ್ ಇರೋ ಗುಂಡಿಗೆಗೆ ಉಸಿರು ಇರೋವರೆಗೂ ವ್ಯಾಲ್ಯೂ..
ಸಂಬಳ ಜಾಸ್ತಿ ಆದ್ರೂ ಚಿಂತೆ ಇಲ್ಲ. ಇವನ ಗೋರಿ ಮುಂದೆ ಒಬ್ಬ ಗೈಡ್ʻನ ನಿಲ್ಸು. ಇವನು ಹೆಂಗ್ ಸತ್ತ ಅನ್ನೋದು ಎಲ್ರಿಗೂ ಗೊತ್ತಾಗ್ಲಿ..
ಮಸಾಲೆ ಮಾರೋಕೆ ಬಂದೋರೆ ನಮ್ಮ ದೇಶಾನ 300 ವರ್ಷ ಆಳಿರೋವಾಗ ಇಲ್ಲೇ ಹುಟ್ಟಿರೋ ನಾನು ನಮ್ಮ ಜನರನ್ನ ಆಳಿದ್ರೆ ಏನ್ ತಪ್ಪು..
ನಿನ್ನ ಸೇಡಿನ ತೂಕಕ್ಕಿಂತ ನನ್ನ ತಾಳ್ಮೆಯ ತೂಕ ಜಾಸ್ತಿ ಅಂತಾ ನೀನು ಅರ್ಥ ಮಾಡ್ಕೋಬೇಕಿತ್ತು..
ಒಂದಾ.. ಎರಡಾ.. ಮಫ್ತಿ ಸಿನಿಮಾ ಬಂದ ಮೇಲೆ ಡೈಲಾಗುಗಳನ್ನೆಲ್ಲ ಸೆಲೆಕ್ಟ್ ಮಾಡಿಕೊಂಡು ಜ್ಯೂಕ್ ಬಾಕ್ಸ್ ರಿಲೀಸ್ ಮಾಡಲಾಗಿತ್ತು. ಮಫ್ತಿ ಸಿನಿಮಾದ ಪ್ರೀಕ್ವೆಲ್ ಎಂದು ಹೇಳ್ತಿರೋ ಭೈರತಿ ರಣಗಲ್, ಮಫ್ತಿಯಂತೆಯೇ ಹವಾ ಸೃಷ್ಟಿಸೋ ಲಕ್ಷಣಗಳಂತೂ ಕಾಣುತ್ತಿವೆ. ಈ ಹಿಂದೆ ಮಫ್ತಿ ಬಂದಿದ್ದಾಗ ಆ ಚಿತ್ರದ ಒಂದೊಂದು ಡೈಲಾಗ್ ಕೂಡಾ ಮೀಮ್ಸ್ ಆಗಿ ವ್ಹಾವ್ ಎಂಬ ಕ್ರೇಜ್ ಸೃಷ್ಟಿಸಿತ್ತು.
ಒಂದೊಂದು ದೃಶ್ಯಗಳೂ ವೈರಲ್ ಆಗಿತ್ತು. ಈಗ ಭೈರತಿ ರಣಗಲ್ ಕೂಡಾ ಅದೇ ರೀತಿ ಆಗೋ ಲಕ್ಷಣಗಳಿವೆ. ನಾನು ತಾಳ್ಮೆ ಕಳೆದುಕೊಂಡಾಗೆಲ್ಲ ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ ಎಂಬ ಡೈಲಾಗ್ ಹೊರಬಿದ್ದಿದೆ.
ಶಿವಣ್ಣ ಹುಟ್ಟುಹಬ್ಬಕ್ಕೆಂದೇ ರಿಲೀಸ್ ಆದ ಭೈರತಿ ರಣಗಲ್ ಟೀಸರಿನಲ್ಲಿರೋದು ಒಂದೇ ಒಂದು ಡೈಲಾಗ್. ನಾನು ತಾಳ್ಮೆ ಕಳೆದುಕೊಂಡಾಗೆಲ್ಲ ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ ಅನ್ನೋದು. ಇನ್ನುಳಿದಂತೆ ಶಿವಣ್ಣ ಎರಡು ಲುಕ್ʻನಲ್ಲಿ ಕಾಣಿಸಿಕೊಳ್ತಾರೆ. ಒನ್ಸ್ ಎಗೇನ್ ಇಲ್ಲಿಯೂ ಶಿವಣ್ಣನ ಕಣ್ಣುಗಳು ಮಾತನಾಡುತ್ತವೆ.
ಮಫ್ತಿಯಲ್ಲಿ ಶಿವಣ್ಣ ಅವರಿಗೆ ಹೊಸ ಲುಕ್, ಸ್ಟೈಲ್ ಕೊಟ್ಟಿದ್ದ ನರ್ತನ್, ಮತ್ತೊಮ್ಮೆ ಶಿವಣ್ಣನಿಗೆ ಸಾಥ್ ಕೊಟ್ಟಿದ್ಧಾರೆ. ಭೈರತಿ ರಣಗಲ್ ಊರು ಹೇಗಿದೆ ಎನ್ನುವುದರ ಜೊತೆಗೆ ರೌಡಿಸಂ ಕಥೆಯೂ ಇದೆ. ಲಾಯರ್ ಸ್ಟೋರಿಯೂ ಇದೆ.
ಈ ಮೊದಲು ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎನ್ನುವ ಮಾಹಿತಿ ನೀಡಲಾಗಿತ್ತು. ಆದರೆ, ಈಗ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ನಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾಹಿತಿ ನೀಡಲಾಗಿದೆ. ಗೀತಾ ಪಿಕ್ಚರ್ಸ್ ಮೂಲಕ ಗೀತಾ ಶಿವರಾಜ್ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಗೀತಾ ಅವರ ನಿರ್ಮಾಣದ 2ನೇ ಸಿನಿಮಾ ಎನ್ನುವುದು ವಿಶೇಷ.



