ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಅಂತೆಲ್ಲ ಕರೆಸಿಕೊಳ್ಳೋ ಶಿವಣ್ಣ, ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಇಷ್ಟ ಪಡೋ ನಟ. ವಯಸ್ಸು 62 ದಾಟಿದೆ. ಆದರೆ ಇವತ್ತೂ ಯಂಗ್ & ಎನರ್ಜೆಟಿಕ್ ಹಾಗೆ ಆಕ್ಟಿವ್ ಆಗಿರೋ ಶಿವಣ್ಣ, ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡ್ತಾನೇ ಇದ್ದಾರೆ. ಶಿವಣ್ಣನಲ್ಲಿ ಎಲ್ಲರಿಗೂ ಇಷ್ಟ ಆಗೋದು, ಅವರ ಎನರ್ಜಿ. ಅಂತಹ ಶಿವಣ್ಣನ ಆರೋಗ್ಯ ಹದಗೆಟ್ಟಿದೆ ಅನ್ನೋ ಮಾಹಿತಿ ಬರ್ತಾ ಇದೆ. ಎಷ್ಟರಮಟ್ಟಿಗೆ ಅಂದ್ರೆ, ತಾವು ಒಪ್ಪಿಕೊಂಡಿದ್ದ ಸಿನಿಮಾಗಳ ಅಡ್ವಾನ್ಸ್ ವಾಪಸ್ ಕೊಡೋ ಹಂತಕ್ಕೆ ಬಂದಿದ್ಯಂತೆ.
ಇಷ್ಟಕ್ಕೂ ಶಿವಣ್ಣಂಗೆ ಏನಾಗಿದೆ ಅಂತಾ ನೋಡಿದ್ರೆ, ಬಹಿರಂಗವಾಗಿ ಏನೂ ಗೊತ್ತಾಗ್ತಾ ಇಲ್ಲ. ಸದ್ಯಕೆ ಭೈರತಿ ರಣಗಲ್ ಚಿತ್ರೀಕರಣ ಮುಗಿಸಿರೋ ಆ ಚಿತ್ರದ ರಿಲೀಸ್‌ಗೆ ರೆಡಿಯಾಗ್ತಿದ್ದಾರೆ. ಡೈಲಿ ಇಂಟರ್ ವ್ಯೂ ಕೊಡ್ತಿದ್ದಾರೆ. ದಿನಕ್ಕೆ ಎರಡು ಸಂದರ್ಶನ ಕೊಡ್ತಿರೋ ಶಿವಣ್ಣ, ಆಮೇಲೆ ರೆಸ್ಟ್ ಮಾಡ್ತಾರೆ. ಹಂಗಿದ್ರೆ ಆರಾಮ್ ಇದ್ದಾರೆ ಅಂತೀರಾ.. ನೋ.. ಶಿವಣ್ಣ ಇಂಟರ್ ವ್ಯೂ ಕೊಡೋಕೆ ಕೂತ್ಕೊಂಡ್ರೆ ಐದು.. ಹತ್ತು ಇಂಟರ್ ವ್ಯೂ ಆದ್ರೂ ಕಂಟೀನಿಯಸ್ಸಾಗಿ ಮಾಡ್ಕೊಡ್ತಾ ಇದ್ರು. ಅವರಿಗೆ ಸುಸ್ತೇ ಆಗ್ತಾ ಇರಲಿಲ್ಲ. ಆದರೆ ಈಗ ಎರಡು ಇಂಟರ್ ವ್ಯೂ ಕೊಟ್ಟು, ಮಧ್ಯೆ ಎರಡೆರಡು ಗಂಟೆ ರೆಸ್ಟ್ ಮಾಡಿ ಬರ್ತಿದ್ದಾರೆ.
ಬೆಳಗ್ಗೆ ಕೆಲಸ ಶುರು ಮಾಡ್ತಿದ್ದ ಶಿವಣ್ಣ, ಮಧ್ಯರಾತ್ರಿ ಆದರೂ ಆಕ್ಟಿವ್ ಆಗಿನೇ ಇರ್ತಿದ್ರು. ಆದರೆ ಈಗ ಹಾಗಿಲ್ಲ. ದಿನಕ್ಕೆ ಎರಡು ಇಂಟರ್ ವ್ಯೂ ಕೊಟ್ಟು, ಆಮೇಲೆ ರೆಸ್ಟ್ ಮಾಡ್ತಿದ್ದಾರಂತೆ. ಶಿವಣ್ಣನ ಆರೋಗ್ಯ ಮೊದಲಿನ ಹಾಗಿಲ್ಲ. ಹಾಗಂತ ತೀರಾ ಸೀರಿಯಸ್ ಆಗ್ಬಿಟ್ಟಿದ್ಯಾ.. ಅಂದ್ರೆ.. ಭಯಪಡೋವಂಥದ್ದೇನೂ ಆಗಿಲ್ಲ.
ಈಗಾಗ್ಲೇ ಶಿವಣ್ಣನ ತಲೆಯಲ್ಲಿ ಯಾವತ್ತೋ ಬಿದ್ದು ಆಗಿದ್ದ ಗಾಯ, ಸೀರಿಯಸ್ ಆಗಿತ್ತು. ಮೆದುಳಿನ ಹತ್ತಿರ ಬ್ಲಡ್ ಕ್ಲಾಟ್ ಆಗಿತ್ತು. ಕರಟಕ ದಮನಕ ರಿಲೀಸಿಗೆ ಮುಂಚೆ, ಇಂಗ್ಲೆಂಡಿನಲ್ಲಿ ಆಪರೇಷನ್ ಮಾಡಿಸ್ಕೊಂಡ್ ಬಂದಿದ್ರು.
ಅದಕ್ಕೂ ಹಿಂದೆ 2015ರಲ್ಲಿ ಒಂದ್ಸಲ ಲೈಟ್ ಆಗಿ ಹಾರ್ಟ್ ಅಟ್ಯಾಕ್ ಆಗಿತ್ತು ಅನ್ನೋ ಸುದ್ದಿ ಇತ್ತು. ಆದರೆ ಹಂಗೆಲ್ಲ ಏನ್ ಆಗಿರ್ಲಿಲ್ಲಪ್ಪ, ರಕ್ತನಾಳದಲ್ಲಿ ಒಂದು ಬ್ಲಾಕೇಜ್ ಆಗಿತ್ತು, ಅದನ್ನ ತೆಗೆಯೋಕೆ ಆಂಜಿಯೋಪ್ಲಾಸ್ಟ್ ಮಾಡಿದ್ರು ಅಷ್ಟೇ ಅಂತಾ ಗೊತ್ತಾಗಿ, ಅವರ ಫ್ಯಾಮಿಲಿಯವರು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ರು.
ಅಫ್‌ಕೋರ್ಸ್, ಆಗ ಪುನೀತ್ ಇದ್ರು. ರಾಘಣ್ಣ ಕೂಡಾ ಆಕ್ಟಿವ್ ಇದ್ರು. ಅವರೆಲ್ಲ ಆಸ್ಪತ್ರೆಗೆ ಓಡೋಡ್ ಬಂದಾಗ ಸಹಜವಾಗಿ ಟೆನ್ಷನ್ ಆಗಿತ್ತು. ಅದಾದ್ಮೇಲೆ ಶಿವಣ್ಣ, ತಮ್ಮ ಪಾಡಿಗ್ ಸಿನಿಮಾ ಮಾಡ್ಕೊಂಡ್ ಇದ್ರು.
ಆದರೆ ಶಿವಣ್ಣ, ತಮ್ಮ ವಯಸ್ಸನ್ನೂ ಮೀರಿ ಆಕ್ಟಿವ್ ಆಗಿದ್ದು, ಪುನೀತ್ ನಿಧನರಾದ ಮೇಲೆ. ಪುನೀತ್ ನಿಧನ, ಮಗಳ ಅನಾರೋಗ್ಯ, ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದಂತಹ ಘಟನೆಗಳಿಂದ ಶಿವಣ್ಣ ಎಷ್ಟು ಅಪ್‌ಸೆಟ್ ಆಗಿದ್ರಂದ್ರೆ, ಒಂದಾದ್ ಮೇಲೊಂದ್ ಸಿನಿಮಾ ಮಾಡೋಕ್ ಶುರು ಮಾಡಿದ್ರು. ಟಿವಿ ರಿಯಾಲಿಟಿ ಶೋ ಮಾಡೋಕ್ ಶುರು ಮಾಡಿದ್ರು. ನೋವು ಮರೆಯೋಕೆ ಕೆಲಸ ಒಂದೇ ಮದ್ದು ಅಂದ್ಕೊಂಡ್, ಫುಲ್ ಬ್ಯುಸಿಯಾಗ್ಬಿಟ್ರು.
ಅಂತ ಶಿವಣ್ಣಂಗೆ ರೆಸ್ಟ್ ಮಾಡಿ ಅಂತಾ ಹೇಳ್ತಿದ್ರೂ ಕೂಡಾ ಕಿವಿಗೆ ಹಾಕ್ಕೊಳ್ತಾ ಇರಲಿಲ್ಲ. ಅಂತಹ ಶಿವಣ್ಣ ಈಗ ಇದ್ದಕ್ಕಿದ್ದಂತೆ ಒಪ್ಪಿಕೊಂಡಿದ್ದ ಸಿನಿಮಾಗಳ ಅಡ್ವಾನ್ಸ್ ವಾಪಸ್ ಕೊಡ್ತಿದ್ದಾರಂತೆ. ಗೀತಾ ಅವರು ಈಗಾಗಲೇ ಅಡ್ವಾನ್ಸ್ ಕೊಟ್ಟಿದ್ದ ನಿರ್ಮಾಪಕರನ್ನೆಲ್ಲ ಮನೆಗೆ ಕರೆದು, ವಾಪಸ್ ಕೊಡೋ ಮಾತಾಡ್ತಿದ್ದಾರೆ. ಶಿವಣ್ಣ ಬೇರೆ ಹೀರೋಗಳ ಹಾಗಲ್ಲ. ಒಂದ್ಸಲ ಅಡ್ವಾನ್ಸ್ ಕೊಟ್ರೆ, ತಿರುಪತಿ ಹುಂಡಿಗ್ ಹಾಕ್ದಂಗೆ ಅಂತೇಳೋ ಹೀರೋಗಳ ತರಾ ಅಲ್ಲ. ಹೀಗಾಗಿ ಗೀತಾ ಅವರು ಅಡ್ವಾನ್ಸ್ ವಾಪಸ್ ಕೊಡ್ತೀವಿ ಅಂದ್ರೂ, ಅಣ್ಣ ಹುಷಾರಾಗ್ ಬಂದ್ಮೇಲೆ ಮಾಡ್ತಾರೆ ಬಿಡಕ್ಕ, ನಾವ್ ಕಾಯ್ತೀವಿ ಅಂತಿದ್ದಾರಂತೆ ನಿರ್ಮಾಪಕರು.
ಹಾಗಾದ್ರೆ ಶಿವರಾಜ್ ಕುಮಾರ್ ಅವರಿಗೆ ಆಗಿರೋದಾದ್ರೂ ಏನು ಅಂತಾ ನೋಡಿದ್ರೆ, ಅವರ ಪಿತ್ಥಕೋಶದಲ್ಲಿ ಸಣ್ಣ ಇನ್ಫೆಕ್ಷನ್ ಆಗಿದ್ಯಂತೆ. ಅಂದ್ರೆ ಗಾಲ್ ಬ್ಲಾಡರ್‌ನಲ್ಲಿ ಪ್ರಾಬ್ಲಂ ಆಗಿದ್ಯಂತೆ. ಹೀಗಾಗಿ ಟ್ರೀಟ್ಮೆಂಟ್ ತಗೊಳ್ಳೋಕೆ ಈ ಸಲ ಅಮೆರಿಕಕ್ಕೆ ಹೋಗ್ತಾರೆ ಅನ್ನೋ ಸುದ್ದಿ ಇದೆ. ಭೈರತಿ ರಣಗಲ್ ರಿಲೀಸ್ ಹೊತ್ತಿಗೆ ಶಿವಣ್ಣ ಅಮೆರಿಕದಲ್ಲಿ ಅಥವಾ ಇಂಗ್ಲೆಂಡಿನಲ್ಲಿ ಆಸ್ಪತ್ರೆಯಲ್ಲಿರ್ತಾರೆ ಅನ್ನೋ ಸುದ್ದಿ ಇದೆ.
ಈ ಹಿಂದೆಲ್ಲ ಆರೋಗ್ಯ ಸಮಸ್ಯೆಗಳನ್ನ ಆರಾಮ್ ಆಗ್ ಗೆದ್ಕೊಂಡು ಬಂದಿರೋ ಶಿವಣ್ಣ, ಈ ಬಾರೀನು ರಿಕವರ್ ಆಗಿ ಬರ್ಲಿ.



