ಡ್ರೋಣ್ ಪ್ರತಾಪ್ (Drone Prathap). ವರ್ಷಗಳ ಹಿಂದೆ ಸೆನ್ಸೇಷನ್. ಸ್ಫೂರ್ತಿ. ಕೆಲವೆ ದಿನಗಳಲ್ಲಿ ಈತನ ವಂಚನೆ ಬಯಲಾಗಿ ಹೋಗಿತ್ತು. ವಂಚನೆ ಎಂದರೆ, ತನ್ನನ್ನು ತಾನು ಸೂಪರ್ ಮ್ಯಾನ್ ರೀತಿ ಬಿಂಬಿಸಿಕೊಂಡು, ವಿಜ್ಞಾನಿ ಎಂದು ಹೇಳಿಕೊಂಡು ಪ್ರಚಾರ ಪಡೆದಿದ್ದು. ಜಗ್ಗೇಶ್ (Navarasa nayaka Jaggesh) ಸೇರಿದಂತೆ ಖ್ಯಾತನಾಮರೆಲ್ಲರನ್ನೂ ಈತ ನಂಬಿಸಿದ್ದ. ಡ್ರೋಣ್ ಪ್ರತಾಪ್ (Drone Prathap) ಎಂದೇ ಫೇಮಸ್ ಆಗಿದ್ದ ಈತನ ವಂಚನೆ ಬಯಲಾದಾಗ ಶಾಕ್ ಆದವರೆಷ್ಟೋ ಜನ. ಹಾಗಂತ ಇವತ್ತಿನವರೆಗೆ ಈತನ ವಿರುದ್ಧ ಒಂದೇ ಒಂದು ಕೇಸ್ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಈತನನ್ನು ಬೆತ್ತಲು ಮಾಡುವ ಹೇಳಿಕೆಗಳೆಲ್ಲ ಬರುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿಯೇ.
ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಕೆಲವು ಮಾಧ್ಯಮಗಳು ಹಾಗೂ ಯುಟ್ಯೂಬ್ ಚಾನೆಲ್ ಮಾಲೀಕರು ಮಾಡುತ್ತಿರುವುದಕ್ಕೆ ಬೇಸರವಿದೆ. ಇವನು ಸುಳ್ಳುಗಾರ ಫ್ರಾಡ್ ಫೇಕ್ ಅಂತ ಹೇಳಿದ್ದಾರೆ. ತಾಳ್ಮೆಗೂ ಒಂದು ಮಿತಿ ಇರುತ್ತದೆ. ಒಳ್ಳೆ ಮಾಧ್ಯಮಗಳು ಮತ್ತು ಯುಟ್ಯೂಬ್ ಚಾನೆಲ್ಗಳಿದೆ ಅವರ ಬಗ್ಗೆ ನಾನು ಮಾತನಾಡುತ್ತಿಲ್ಲ. ಆದರೆ ನನ್ನ ಬಗ್ಗೆ ಎಷ್ಟು ಅಂತ ಹೇಳುತ್ತೀರಾ? ಆ ಚಾನೆಲ್ಗಳು (News Channels) ಲೀಗಲ್ ಆಗಿ ಆಕ್ಷನ್ ತೆಗೆದುಕೊಳ್ಳುವುದಿಲ್ಲ ನಾನು ಏನಾದರೂ ಮಾಡಲೇ ಬೇಕು ಎಂದು ಯೋಚನೆ ಮಾಡಿರುವೆ. ಬರೀ ಮಾಧ್ಯಮಗಳೇ (Media) ಮಾನಹಾನಿ ಮಾಡುವ ಕೆಲಸ ಮಾಡುತ್ತಿದ್ದಾರೆ ದೇವರಾಣೆ ಮೋಸ ಮಾಡಿ ರಾಜ್ಯ ಹಾಳು ಮಾಡುತ್ತಿರುವ ಆಡಳಿತಗಾರನ್ನು ಪ್ರಶ್ನೆ ಮಾಡುವುದಿಲ್ಲ ಚೆನ್ನಾಗಿ ಓದಿಕೊಂಡು ಸಾಧನೆ ಮಾಡಲು ಏನೋ ಮಾಡಿಕೊಂಡು ಹೋಗುತ್ತಿರುವೆ ನನ್ನ ಮಾತ್ರ ಪ್ರಶ್ನೆ ಕೇಳುವುದು ನೀವು ಆದ್ರೂ ಇವತ್ತು ಉತ್ತರ ಕೊಡುವ ಪರಿಸ್ಥಿತಿ ಬಂದಿದೆ. ಇವ್ರು ಮುಂದೆ ಹೆಜ್ಜೆ ತೆಗೆದುಕೊಳ್ಳುವುದಿಲ್ಲ ಹೀಗಾಗಿ ನಾನು ಮುಂದೆ ಹೆಜ್ಜೆ ಇಡುತ್ತಿರುವೆ ಎಂದು ಹೇಳಿದ್ದಾರೆ (Drone Prathap) ಡ್ರೋಣ್ ಪ್ರತಾಪ್.
ಮೂರು ಕಾನೂನುಗಳ ಪ್ರಕಾರ ನನಗೆ 30 ಲಕ್ಷ ರೂಪಾಯಿ ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. (Section 409) ಸೆಕ್ಷನ್ 409 ಮತ್ತು ಸೆಕ್ಷನ್ 500 ಅಡಿಯಲ್ಲ. ನಾನು ಹೇಳುತ್ತಿರುವುದು ಸುಳ್ಳಾ ಅಥವಾ ನೀವು ಹಾಕುತ್ತಿರುವುದು ಸುಳ್ಳ ಅನ್ನೋದು ಕೋರ್ಟ್ ನಿರ್ಧರಿಸುತ್ತದೆ. ನನ್ನ ಬಗ್ಗೆ ಯಾರು ಏನೇ ಮಾತನಾಡಿದರೂ ವೈಯಕ್ತಿಕ ದ್ವೇಷ ಇಲ್ಲ ಆದರೆ ನನ್ನ ಸಂಸ್ಥೆಗೆ ಅವಮಾನವಾಗುತ್ತಿದೆ ಎಂದಿರುವ ಡ್ರೋಣ್ ಪ್ರತಾಪ್, ಕೃಷಿಯಲ್ಲಿ ಕೆಲಸ ಮಾಡಲು ನನ್ನ ಡ್ರೋನ್ ಕೊಡುತ್ತಿರುವೆ ನೀವು ಅದನ್ನು ತಪ್ಪು ಎಂದು ಹೇಳಿ ಅದನ್ನೂ ಟ್ರೋಲ್ ಮಾಡುತ್ತಿದ್ದಿರಿ. ರಾಜಕೀಯದವರಿಗೆ ಸಪೋರ್ಟ್ ಮಾಡಿ ಹಳ್ಳಿ ಹುಡುಗನನ್ನು ಅವಮಾನಿಸುತ್ತಿದ್ದೀರಿ. ಮುಂಬರುವ ದಿನಗಳಲ್ಲಿ ಮೂರ್ನಾಲ್ಕು ದಿನಗಳಲ್ಲಿ ನಾಲ್ಕು ಜನರಿಗೆ ನೋಟಿಸ್ ಹೋಗುತ್ತಿದೆ ನಿಮ್ಮ ಸಪೋರ್ಟ್ ಬೇಕು ನನಗೆ’ ಎಂದಿದ್ದಾರೆ (Drone Prathap) ಪ್ರತಾಪ್.



