ಬ್ಯಾಡ್ ಮ್ಯಾನರ್ಸ್ (bad manners ). ಟ್ರೇಲರ್ ರಿಲೀಸ್ ಆಗಿದೆ. ಒಂದಿಷ್ಟು ಗನ್ನುಗಳು, ಸಿಡಿಯುವ ಸದ್ದುಗಳು, ಮದ್ದುಗಳ ಮಧ್ಯೆ ಕಥೆ ಏನು ಎಂಬ ಹುಡುಕಾಟ ಪ್ರೇಕ್ಷಕರದ್ದು. ಇದೇ 24ಕ್ಕೆ ರಿಲೀಸ್ ಆಗಲಿರುವ ಬ್ಯಾಡ್ ಮ್ಯಾನರ್ಸ್ (bad manners ) ಚಿತ್ರದ ಟ್ರೇಲರ್ ನೋಡಿದವರು ಕಥೆ ಏನು ಎಂದು ತಲೆ ಕೆರೆದುಕೊಳ್ತಿದ್ದಾರೆ. ಏಕೆಂದರೆ ಟ್ರೇಲರಿನಲ್ಲಿ ಕಥೆಯನ್ನಾಗಲೀ, ಕಥೆಯ ಕ್ಲೂಗಳನ್ನಾಗಲೀ ಹೇಳಿಲ್ಲ. ಎಂದಿನಂತೆ ಸೂರಿ Duniya soori ಟ್ರೇಡ್ ಮಾರ್ಕ್ ಎನ್ನಿಸುವಂತಹ ದೃಶ್ಯಗಳಿವೆ. ಡೈಲಾಗುಗಳೂ ಇವೆ.
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆತನ ತಲೆಗೆ ಕೋಟಿ ಕೋಟಿ ಡಿಮ್ಯಾಂಡ್ ಸೃಷ್ಟಿಯಾಯ್ತು
ನಾನು ಕೂತಿರೋ ಜಾಗ ನಂದು, ನೀನು ನಿಂತಿರೋ ಜಾಗ ನಿಂದು..
ಅನ್ನೋ ಫಿಲಾಸಫಿ ಮತ್ತು ಕ್ರೈಮ್ ಬೆರೆತ ಡೈಲಾಗುಗಳು ಅಚ್ಚರಿ ಹುಟ್ಟಿಸುತ್ತವೆ.
ಕೆಲವು ಡೈಲಾಗ್ಸ್, ಬಿಲ್ಡಪ್ ದೃಶ್ಯಗಳು, ಫೈಟ್ಸ್ ಇವೆ. ಅಷ್ಟೇ ಹೊರತಾಗಿ ಕಥೆಯನ್ನು ಮಾತ್ರ ನಿಗೂಢವಾಗಿಯೇ ಇಡಲಾಗಿದೆ. ಬಹುಶಃ ಚಿತ್ರದಲ್ಲಿರೋದು ಗನ್ ಮಾಫಿಯಾ ಸ್ಟೋರಿ ಎನ್ನಬಹುದು. ನಾಯಕಿ ರಚಿತಾ ರಾಮ್ (rachitha ram) ಅವರ ಸಣ್ಣ ಸೀನ್ ಕೂಡಾ ಬ್ಯಾಡ್ ಮ್ಯಾನರ್ಸ್ ಟ್ರೇಲರಿನಲ್ಲಿ ಇಲ್ಲ. ಆದರೆ ಇದು ದುನಿಯಾ ಸೂರಿ ಸಿನಿಮಾ ಅನ್ನೋದು ಗಮನದಲ್ಲಿರಲಿ.
ಅಭಿಷೇಕ್ ಅಂಬರೀಷ್, (Abhishek ambareesh) ರಚಿತಾ ರಾಮ್, ತಾರಾ (thara anuradha), ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜಾ, ಅರಸು, ಬ್ಯಾಂಕಾಕ್ ದಿಲೀಪ್, ತಾವರೆಕೆರೆ ರಘು, ರೋಚಿತ್, ತ್ರಿವಿಕ್ರಮ್, ಕಾರ್ತಿ ಸೌಂದರಂ, ಪ್ರಿಯಾಂಕಾ ಕುಮಾರ್, ಸಚ್ಚಿದಾನಂದ್, ಬಿ ಆರ್ ಶ್ರೀನಿವಾಸ, ಪೂರ್ಣಚಂದ್ರ ಮೈಸೂರು, ಪ್ರಶಾಂತ್, ನಿರಂಜನ್, ಮೈಸೂರು ರಘು, ಅಲ್ಲು, ಕುಮಾರ್, ರಾಜು ಹಿರೇಮತ್, ವಿಜಯ್ ಬೆಳಗಂ, ಪಂಕಜ್ ಬಾಬು, ಸೋಮ ಅರ್ಜುನಗಿ, ವಿಕ್ರಮ್, ಗಣೇಶ್, ಸೋಮ ಹೀಗೆ ದೊಡ್ಡ ತಾರಾಗಣವನ್ನೇ ಇಟ್ಟುಕೊಂಡಿದ್ಧಾರೆ ಸೂರಿ.
ಸುಧೀರ್ ಕೆ.ಎಂ. ನಿರ್ಮಾಣದ ಬ್ಯಾಡ್ ಮ್ಯಾನರ್ಸ್ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಷ್ (Sumalatha ambareesh), ನಟ ದರ್ಶನ್, ವಿನೋದ್ ಪ್ರಭಾಕರ್ (Vinod prabhakar) ಮೊದಲಾದವರಿದ್ದರು.
ದರ್ಶನ್ (Darshan) ಅವರು ಅಭಿಷೇಕ್ ಅವರನ್ನು ಇನ್ನು ಮುಂದೆ ಅಭಿಯನ್ನು ಯಂಗ್ ರೆಬಲ್ ಸ್ಟಾರ್ ಎನ್ನಬೇಡಿ, ರಿಯಲ್ ರೆಬಲ್ ಸ್ಟಾರ್ ಎನ್ನಿ. ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ಧಾರೆ. ದುನಿಯಾ ಸೂರಿ ಅವರಿಗೆ ಎಲ್ಲ ಕ್ರೆಡಿಟ್ ಸಲ್ಲಬೇಕು ಎಂದಿದ್ದಾರೆ.



